ಐಟಿ ಅಧಿಕಾರಿಗಳ ಮೇಲೆ ನಾಯಿ ಛೂ ಬಿಟ್ಟ ಅಪಾರ್ಟ್ ಮೆಂಟ್ ಸ್ಯಾಂಡಲ್ ವುಡ್ ನಟನಿಗೆ ಸೇರಿದ್ದು!

ಐಟಿ ಅಧಿಕಾರಿಗಳು ದಾಳಿ ನಡೆಸಲು ಹೋದ ಸಂದರ್ಭದಲ್ಲಿ ವೃದ್ಧೆಯೊಬ್ಬಳು ಅಧಿಕಾರಿಗಳ ಮೇಲೆ ನಾಯಿಯನ್ನು ಛೂ ಬಿಟ್ಟ ಪ್ರಕರಣ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಇದೀಗ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಐಟಿ ಅಧಿಕಾರಿಗಳು ದಾಳಿ ನಡೆಸಲು ಹೋದ ಸಂದರ್ಭದಲ್ಲಿ ವೃದ್ಧೆಯೊಬ್ಬಳು ಅಧಿಕಾರಿಗಳ ಮೇಲೆ ನಾಯಿಯನ್ನು ಛೂ ಬಿಟ್ಟ ಪ್ರಕರಣ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಇದೀಗ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದ್ದು, ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟನೊಬ್ಬನ ಹೆಸರು ಕೇಳಿಬಂದಿದೆ.

ಕೆಲ ದಿನಗಳ ಹಿಂದಷ್ಟೇ ಯಶವಂತಪುರದಲ್ಲಿ ಐಟಿ ಅಧಿಕಾರಿಗಳು ಆಪಾರ್ಟ್ ಮೆಂಟ್ ವೊಂದರ ಮೇಲೆ ದಾಳಿ ನಡೆಸಲು ಹೋಗಿದ್ದರು. ಈ ವೇಳೆ ವೃದ್ಧೆಯೊಬ್ಬರು ಅಧಿಕಾರಿಗಳ ಮೇಲೆ ನಾಯಿಗಳನ್ನು ಛೂ ಬಿಟ್ಟಿದ್ದರು. ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ದಾಳಿ ನಡೆಸಲು ಅಧಿಕಾರಿಗಳು ಹರಸಾಹಯ ಪಟ್ಟಿದ್ದರು. ಕೊನೆಗೂ ಪೊಲೀಸರ ಸಹಾಯದ ಮೇರೆಗೆ ದಾಳಿ ನಡೆಸಿ ದಾಖಲೆಯಿಲ್ಲದ ರು.2.87 ಕೋಟಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣ ಸಾಕಷ್ಟು ಸುದ್ದಿಯನ್ನು ಮಾಡಿತ್ತು.

ಇದೀಗ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಉದಯೋನ್ಮುಖ ನಟನೊಬ್ಬನ ಹೆಸರು ಕೇಳಿಬಂದಿದೆ. ಐಟಿ ಅಧಿಕಾರಿಗಳು ದಾಳಿ ಮಾಡಿದ ಫ್ಲ್ಯಾಟ್ ಉದ್ಯಮಿಯೊಬ್ಬರಿಗೆ ಸೇರಿದ್ದಾಗಿದ್ದು, ಮತ್ತೊಬ್ಬರ ಹೆಸರಿನಲ್ಲಿ ಬಾಡಿಗೆಗೆ ನೀಡಿದ್ದರೆನ್ನಲಾಗಿದೆ. ಆದರೆ, ಕುತೂಹಲಕಾರಿ ವಿಚಾರವೆಂದರೆ, ಬಾಡಿಗೆ ಪಡೆದ ವ್ಯಕ್ತಿ ಒಪ್ಪಂದ ಪತ್ರದಲ್ಲಿ ಸ್ಯಾಂಡಲ್ ವುಡ್ ನಟ ಇಮೇಲ್ ವಿಳಾಸವನ್ನು ನೀಡಿದ್ದಾನೆ. ಮಾತುಕತೆ ಏನಾದರೂ ನಡೆಸಬೇಕೆಂದಿದ್ದರೆ ಈ ಇ-ಮೇಲ್ ವಿಳಾಸವನ್ನು ಸಂಪರ್ಕಿಸಿ ಎಂದು ಒಪ್ಪಂದ ಪತ್ರದಲ್ಲಿ ಬರೆದಿದ್ದಾನೆಂದು ತಿಳಿದುಬಂದಿದೆ.

ಸ್ಥಳೀಯರು ಹೇಳಿರುವ ಪ್ರಕಾರ, 6 ತಿಂಗಳ ಹಿಂದೆಯೇ ಫ್ಲ್ಯಾಟ್ ನ್ನು ಬಾಡಿಗೆಗೆ ನೀಡಲಾಗಿತ್ತು. ಆದರೆ, ನಟ ಕಳೆದ 1 ತಿಂಗಳಿನಿಂದ ಮಾತ್ರ ಫ್ಲ್ಯಾಟ್ ನಲ್ಲಿ ವಾಸವಿದ್ದಾನೆಂದು ತಿಳಿಸಿದ್ದಾರೆ.

ವೃದ್ಧ ಮಹಿಳೆಯ ಫ್ಲ್ಯಾಟ್ ನ್ನು ನೋಡಿಕೊಳ್ಳುತ್ತಿದ್ದಳು. ನಾಯಿಗಳೊಂದಿಗೆ ಅಪಾರ್ಟ್ ಮೆಂಟ್ ನಲ್ಲಿ ಇದ್ದ ಮಹಿಳೆ ಅಪಾರ್ಟ್ ಮೆಂಟ್ ಪೂರ್ತಿ ಓಡಾಡಿಕೊಂಡಿದ್ದಳು. ಆದರೆ, ಒಂದು ಕೊಠಡಿ ಮಾತ್ರ ಯಾವಾಗಲೂ ಲಾಕ್ ಆಗಿರುತ್ತಿತ್ತು. ಕೊಠಡಿಯ ಬೀಗ ನಟನ ಬಳಿ ಇತ್ತು, ಆತ ಮಾತ್ರ ರೂಮನ್ನು ಬಳಕೆ ಮಾಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ಇನ್ನು ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ನಟನನ್ನು ಗುರ್ತಿಸಿದ್ದು. ನಟ ಆಗಾಗ ಫ್ಲ್ಯಾಟ್ ಗೆ ಬಂದು ಹೋಗುತ್ತಿದ್ದ ಎಂದು ಹೇಳಿದ್ದಾರೆ. ಆಪಾರ್ಟ್ ಮ್ಯಾನೇಜರ್ ಅನಿಲ್ ಕುಮಾರ್ ಮಾತನಾಡಿ, ವೃದ್ಧ ಮಹಿಳೆ ಬಗ್ಗೆ ಅಪಾರ್ಟ್ ಮೆಂಟ್ ನಲ್ಲಿದ್ದ ಹಲವರು ದೂರು ನೀಡಿದ್ದರು. ರಾತ್ರಿ ವೇಳೆ ನಾಯಿಗಳು ಸಾಕಷ್ಟು ತೊಂದರೆಗಳನ್ನು ಕೊಡುತ್ತಿದೆ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.

ದಾಳಿ ಕುರಿತಂತೆ ಅಧಿಕಾರಿಗಳು ಮಾತನಾಡಿದ್ದು, ಪ್ರಕರಣ ಕುರಿತಂತೆ ಕೆಲವರನ್ನು ವಿಚಾರಣೆ ನಡೆಸಲಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿರುವುದರಿಂದ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com