ಸಾಫ್ಟ್ ವೇರ್ ಇಂಜಿನಿಯರ್ ಗೆ ಫೇಸ್ ಬುಕ್ ನ ದುಬೈ ಸ್ನೇಹಿತೆಯಿಂದ 1.5 ಲಕ್ಷ ರೂ ವಂಚನೆ!

ಬೆಂಗಳೂರಿನಲ್ಲಿ ನೆಲೆಸಿರುವ ಒಡಿಶಾ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಫೇಸ್ ಬುಕ್ ನ ನಕಲಿ ಸ್ನೇಹಿತೆಯಿಂದ ವಂಚನೆಗೊಳಗಾಗಿ ಬರೊಬ್ಬರಿ 1.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಫೇಸ್ ಬುಕ್
ಫೇಸ್ ಬುಕ್
 ಫೇಸ್ ಬುಕ್ ನಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್ ನ್ನು ಒಪ್ಪಿಕೊಂಡರೆ ಸಂಭವಿಸಬಹುದಾದ ನಷ್ಟಕ್ಕೆ ಮತ್ತೊಂದು ಉದಾಹರಣೆ ದೊರೆತಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಒಡಿಶಾ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಫೇಸ್ ಬುಕ್ ನ ನಕಲಿ ಸ್ನೇಹಿತೆಯಿಂದ ವಂಚನೆಗೊಳಗಾಗಿ ಬರೊಬ್ಬರಿ 1.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. 
ಒಡಿಶಾ ಮೂಲದ ಜಿ ಗೋವಿಂದ್ ಶರ್ಮಾ ಗೆ ಅಲೆಕ್ಸ್ ಎಂಬ ಮಹಿಳೆಯ ಪ್ರೊಫೈಲ್ ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಮುಂದಾಗಬಹುದಾದ ಅಪಾಯವನ್ನು ಊಹಿಸದೇ, ಫ್ರೆಂಡ್ ರಿಕ್ವೆಸ್ಟ್ ನ್ನು ಗೋವಿಂದ್ ಶರ್ಮಾ ಒಪ್ಪಿಕೊಳ್ಳುತ್ತಾರೆ. ಕಾಲಕ್ರಮೇಣ ಇಬ್ಬರೂ ಚಾಟ್ ಮಾಡಿ ಪರಸ್ಪರ ದೂರವಾಣಿ ಸಂಖ್ಯೆಗಳನ್ನೂ ವಿನಿಮಯ ಮಾಡಿಕೊಂಡು ಮಾತನಾಡಲು ಪ್ರಾರಂಭಿಸುತ್ತಾರೆ. ಕೆಲವೇ ತಿಂಗಳಲ್ಲಿ ತನ್ನನ್ನು ದುಬೈ ನ ಶ್ರೀಮಂತ ಕುಟುಂಬದ ಮಹಿಳೆ ಎಂದು ಪರಿಚಯಿಸಿಕೊಂಡ ಅಲೆಕ್ಸ್- ಗೋವಿಂದ್ ಶರ್ಮಾ ನಡುವೆ ಪ್ರೇಮಾಂಕುರವಾಗುತ್ತದೆ.  
ಗೋವಿಂದ್ ಶರ್ಮಾ ರನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದಾಗಿ ಹೇಳಿದ್ದ ಮಹಿಳೆ ಶರ್ಮಾಗೆ ಕರೆ ಮಾಡಿ, ಗಿಫ್ಟ್ ಹಾಗೂ ಬೃಹತ್ ಪ್ರಮಾಣದ ಹಣದೊಂದಿಗೆ ಬೆಂಗಳೂರು ಅಂತಾರಾಶ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿರುವ ನನ್ನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವರಿಗೆ 1.5 ಲಕ್ಷ ಕೊಟ್ಟರೆ ಬಿಡುತ್ತಾರೆ ಎಂದು ಹೇಳುತ್ತಾಳೆ, ಅಷ್ಟೇ ಅಲ್ಲದೇ ಗೋವಿಂದ್ ಶರ್ಮಾ ಅವರನ್ನು ನಂಬಿಸಲು ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನೂ ಸಹ ದೂರವಾಣಿ ಮೂಲಕ ಮಾತನಾಡಿಸುತ್ತಾರೆ. ಅಲೆಕ್ಸ್ ಹೇಳಿದ್ದನ್ನೆಲ್ಲಾ ನಂಬಿದ ಗೋವಿಂದ್ ಶರ್ಮಾ, ಆಕೆಯ ಖಾತೆಗೆ 1.5 ಲಕ್ಷ ರೂ ಕಳಿಸುತ್ತಾರೆ. ಆದರೆ ವಂಚನೆಗೊಳಗಾಗಿರುವುದನ್ನು ಅರಿಯುವುದಕ್ಕೆ ಗೋವಿಂದ್ ಶರ್ಮಾ ಅವರಿಗೆ ಕೆಲವು ದಿನಗಳೇ ಬೇಕಾಯಿತು. ನಂತರ ಹುಳಿಮಾವು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com