ದಾವಣಗೆರೆ: ದಾಖಲೆಗಳಿಲ್ಲದ 11.30 ಲಕ್ಷ ರೂಪಾಯಿ ಸಾಗಿಸುತ್ತಿದ್ದ ಇಬ್ಬರ ಬಂಧನ

ದಾಖಲೆಗಳಿಲ್ಲದ ಹೊಸ 2,000 ರೂಪಾಯಿ ನೋಟುಗಳನ್ನು ಒಳಗೊಂಡ 11.30 ಲಕ್ಷ ರೂಪಾಯಿಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ದಾವಣಗೆರೆ: ದಾಖಲೆಗಳಿಲ್ಲದ ಹೊಸ 2,000 ರೂಪಾಯಿ ನೋಟುಗಳನ್ನು ಒಳಗೊಂಡ 11.30 ಲಕ್ಷ ರೂಪಾಯಿಗಳನ್ನು ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕರ್ನಾಟಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನಂತರ ಪೊಲೀಸರು ಹೆಚ್ಚಿನ ತನಿಖೆಗೆ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದರು.
ಸರ್ಕಾರ ನೋಟುಗಳನ್ನು ನಿಷೇಧಿಸಿದ ನಂತರ ಐಟಿ ಇಲಾಖೆ 760 ಕಡೆಗಳಲ್ಲಿ ಶೋಧಕಾರ್ಯ ನಡೆಸಿ 505 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಅವುಗಳಲ್ಲಿ 93 ಕೋಟಿಗೂ ಅಧಿಕ ಹಣ ಹೊಸ ನೋಟುಗಳಲ್ಲಿದ್ದವು.
ಐಟಿ ಇಲಾಖೆ ಮೂಲಗಳ ಪ್ರಕಾರ, 3,590 ಕೋಟಿಗೂ ಅಧಿಕ ಅಘೋಷಿತ ಆದಾಯಗಳನ್ನು ಪತ್ತೆಹಚ್ಚಲಾಗಿದ್ದು ಈ ಬಗ್ಗೆ 3,589 ನೊಟೀಸ್ ಗಳನ್ನು ಜಾರಿ ಮಾಡಲಾಗಿದೆ.
ತನಿಖೆ ವೇಳೆ ಐಟಿ ಇಲಾಖೆ ಜಾರಿ ನಿರ್ದೇಶನಾಲಯಕ್ಕೆ 400 ಕೇಸುಗಳನ್ನು ಉಲ್ಲೇಖಿಸಲಾಗಿದ್ದು ಹೆಚ್ಚಿನ ತನಿಖೆಗೆ ಸಿಬಿಐಗೆ ವಹಿಸಲಾಗಿದೆ.
ಐಟಿ ಇಲಾಖೆ ಜಾರಿ ನಿರ್ದೇಶನಾಲಯಕ್ಕೆ 215 ಕೇಸುಗಳು ಮತ್ತು ಸಿಬಿಐಗೆ 185 ಕೇಸುಗಳನ್ನು ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com