2.2 ಕೋಟಿ ಮೌಲ್ಯದ ಯೋಜನೆಗಾಗಿ ಡಿಆರ್ ಡಿಒಗೆ ಸಾಥ್ ನೀಡಲಿರುವ ಪಿಇಎಸ್ ವಿದ್ಯಾಸಂಸ್ಥೆ!

ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಪಿಇಎಸ್ ವಿದ್ಯಾಸಂಸ್ಥೆ ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ (ಡಿಆರ್ ಡಿಒ) ಸಂಸ್ಥೆ ಜೊತೆಗೂಡಿ ಮಹತ್ವದ ಯೋಜನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಪಿಇಎಸ್ ವಿದ್ಯಾಸಂಸ್ಥೆ ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ (ಡಿಆರ್ ಡಿಒ) ಸಂಸ್ಥೆ ಜೊತೆಗೂಡಿ ಮಹತ್ವದ ಯೋಜನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಇಸ್ರೋ ಜೊತೆಗೂಡಿ ಉಪಗ್ರಹ ಯೋಜನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಪಿಇಎಸ್ ಇದೀಗ ಅದೇ ಯಶಸ್ಸಿನ ಹುಮ್ಮಸ್ಸಿನಲ್ಲಿ ಡಿಆರ್ ಡಿಒ ಜೊತೆಗೂಡಿ ಕೆಲಸಮಾಡಲಿದೆ ಎಂದು ಹೇಳಲಾಗುತ್ತಿದೆ. ಡಿಆರ್  ಡಿಒದ ಸುಮಾರು 2.2 ಕೋಟಿ ರು. ವೆಚ್ಚದ ಯೋಜನೆಯಲ್ಲಿ ಪಿಇಎಸ್ ಸಾಥ್ ನೀಡುತ್ತಿದ್ದು, ಈ ಯೋಜನೆಗೆ ಸಿಂಧು ನೇತ್ರಾ ಎಂದು ಹೆಸರಿಡಲಾಗಿದೆ. ಡಿಆರ್ ಡಿಒದ ಒಂದು ಭಾಗವಾಗಿರುವ ಹೈದರಾಬಾದ್ ಮೂಲದ  ಸಂಶೋಧನಾ ಕೇಂದ್ರ ಇಮಾರತ್ ಪಿಇಎಸ್ ಸಂಸ್ಥೆ ಜೊತೆಗೂಡಿ ಈ ಸಿಂಧು-ನೇತ್ರಾ ಯೋಜನೆಯಲ್ಲಿ ಪರಸ್ಪರ ಕೆಲಸ ಮಾಡಲಿದ್ದಾರೆ. ಈ ಮಹತ್ವದ ಯೋಜನೆಗೆ ಸುಮಾರು 2.2 ಕೋಟಿ ರು,ವೆಚ್ಚವಾಗಲಿದೆ ಎಂದು  ಅಂದಾಜಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಬಾಲಸುಬ್ರಮಣ್ಯಮೂರ್ತಿ ಅವರು, ಡಿಆರ್ ಡಿಒದೊಂದಿಗೆ ಸೇರಿ ಪಿಇಎಸ್ ಕೆಲಸ ಮಾಡುತ್ತಿದ್ದು, ಸಿಂಧುನೇತ್ರ ಯೋಜನೆಯಲ್ಲಿ ಉಪಗ್ರಹ  ಚಿತ್ರಗಳನ್ನು ಬಳಕೆ ಮಾಡಿಕೊಂಡು ಸಮುದ್ರದಲ್ಲಿ ಚಲಿಸುವ ಶಂಕಿತ ಹಡಗುಗಳನ್ನು ಹೇಗೆ ಪತ್ತೆ ಮಾಡಬಹುದು ಎಂಬುದರ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ಇಸ್ರೋ ಜೊತೆಗೂಡಿ ಕೆಲಸ ಮಾಡಿದ್ದ ಪಿಇಎಸ್ ವಿದ್ಯಾರ್ಥಿಗಳು, ‘ಪೈಸ್ಯಾಟ್‌’ ಉಪಗ್ರಹವನ್ನು ನಿರ್ಮಿಸಿದ್ದರು. ಕಳೆದ ಸೆಪ್ಟೆಂಬರ್ 26ರಂದು ಇಸ್ರೊದ ಪಿಎಸ್ ಎಲ್ ವಿ–35 ಉಡಾವಣಾ ವಾಹನದ ಮೂಲಕ ಭೂ  ಕಕ್ಷೆಯನ್ನು ಸೇರಿತ್ತು. ಕರ್ನಾಟಕದ ಶೈಕ್ಷಣಿಕ ಸಂಸ್ಥೆಯೊಂದರ ವಿದ್ಯಾರ್ಥಿಗಳು ತಯಾರಿಸಿದ ಮೊಟ್ಟ ಮೊದಲ ಉಪಗ್ರಹ ಎಂಬ ಇತಿಹಾಸವನ್ನು ಸೃಷ್ಟಿಸಿತು. ಸೀಮಿತ ಉದ್ದೇಶದ, 5.25 ಕೆ.ಜಿ ತೂಕದ ಪುಟ್ಟ ಉಪಗ್ರಹ ಈಗ  ಭೂಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com