ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ (ಸಾಂದರ್ಭಿಕ ಚಿತ್ರ)
ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ (ಸಾಂದರ್ಭಿಕ ಚಿತ್ರ)

ರೌಡಿ ಶೀಟರ್ ಮನೆಗಳ ಮೇಲೆ ಬೆಂಗಳೂರು ಪೊಲೀಸರ ದಿಢೀರ್ ದಾಳಿ

ನಗರದಲ್ಲಿ ಹೆಚ್ಚುತ್ತಿರುವ ರೌಡಿ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಶನಿವಾರ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು ರೌಡಿ ಶೀಟರ್ ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಶೋಧ..

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ರೌಡಿ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಶನಿವಾರ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು ರೌಡಿ  ಶೀಟರ್ ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ನಡೆಸಿದರು.

ದಿನೇ ದಿನೇ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಹೆಚ್ಚುತ್ತಿದ್ದು, ಸುಲಿಗೆ, ದರೋಡೆ ಮತ್ತು ಸರಗಳ್ಳತನದಂತಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ  ಪೊಲೀಸರು ಇಂದು ದಿಢೀರ್ ಕಾರ್ಯಾಚರಣೆ ನಡೆಸಿ, ರೌಡಿಗಳ ಮನೆಗಳಲ್ಲಿ ಶೋಧ ನಡೆಸಿದರು. ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ದಾಳಿ ನಡೆದಿದ್ದು, ನಗರದ  ಪೂರ್ವ, ಈಶಾನ್ಯ ಮತ್ತು ಆಗ್ನೇಯ ಭಾಗದ ಸುಮಾರು 300 ಕ್ಕೂ ಹೆಚ್ಚು ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರೌಡಿಗಳು ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರಬಹುದಾದ ಶಂಕೆಯ ಮೇರೆಗೆ ಅವರ ಮನೆಗಳಲ್ಲಿ ತೀವ್ರ ಶೋಧ ನಡೆಸಲಾಗಿದೆ. ಈ ವೇಳೆ ಐಜಿ  ಹರಿಶೇಖರನ್ ಹಾಗೂ ಆಯಾ ವಲಯದ ಡಿಸಿಪಿಗಳ ನೇತೃತ್ವದ ಕಾರ್ಯಾಚರಣೆ ನಡೆಸಲಾಗಿದೆ.

300 ರೌಡಿಗಳ ಬಂಧನ
ಇದೇ ವೇಳೆ ಅಪರಾಧ ಹಿನ್ನಲೆಯುಳ್ಳ ಸುಮಾರು 300 ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೂರ್ವ ವಿಭಾಗದ ೧೬ ಈಶಾನ್ಯ೧೦ ಮತ್ತು ಆಗ್ನೇಯ ಭಾಗದ ೧೩ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ವಿವಿಧ ಭಾಗಗಳ ರೌಡಿಗಳು, ತಲೆಮರೆಸಿಕೊಂಡಿರುವ ಅಪರಾಧಿಗಳು ವಾರೆಂಟ್ ತಪ್ಪಿಸಿಕೊಂಡು ಪರಾರಿಯಾಗಿರುವವರು ಹಾಗೂ ಅಪರಾಧ ಹಿನ್ನಲೆಯ ಆರೋಪಿಗಳು ಸೇರಿ 300ಕ್ಕೂ ಹೆಚ್ಚು ಮಂದಿಯನ್ನು ಠಾಣೆಗಳಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಆಯುಕ್ತ ಹರಿಶೇಖರನ್ ತಿಳಿಸಿದರು.

ಮಡಿವಾಳ,ಕಾಡುಗೊಂಡನಹಳ್ಳಿ,ಹೆಚ್‌ಎಎಲ್,ಕೆಆರ್‌ಪುರಂ,ಹಲಸೂರು,ಕೊಡಿಗೇಹಳ್ಳಿ ಇನ್ನಿತರ ಪೊಲೀಸ್ ಠಾಣೆಗಳಿಗೆ ಕರೆತಂದ 300ಕ್ಕೂ ಹೆಚ್ಚು ವ್ಯಕ್ತಿಗಳ ಚಟುವಟಿಕೆಗಳು ಅವರ ಉದ್ಯೋಗ, ಅಪರಾಧ ಪ್ರಕರಣಗಳು,ವಾಸಸ್ಥಳ,ಇನ್ನಿತರ ಮಾಹಿತಿಗಳನ್ನು ಪರಾಮರ್ಶೆ ನಡೆಸಲಾಯಿತು. ಇದೇ ವೇಳೆ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ಸಾಗಿಸುತ್ತಿರುವ ವ್ಯಕ್ತಿಗಳನ್ನು ಹಳೆ ಆರೋಪಿಗಳ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com