ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಸರಿಯಾಗಿ ಓದು ಎಂದು ಪೋಷಕರು ಬೈದರು ಎಂಬ ಕಾರಣಕ್ಕೆ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಸರಿಯಾಗಿ ಓದು ಎಂದು ಪೋಷಕರು ಬೈದರು ಎಂಬ ಕಾರಣಕ್ಕೆ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ.
ಗಂಗೊಂಡನಹಳ್ಳಿ ಬಿಬಿಸಿ ಲೇಔಟ್ 14ನೇ ಕ್ರಾಸ್ ನಿವಾಸಿ ಪೆರುಮಾಳ್ ಮತ್ತು ಕಿರಿಯಮ್ಮ ದಂಪತಿ ಪುತ್ರ ಸತೀಶ್(12) ಆತ್ಮಹತ್ಯೆ ಮಾಡಿಕೊಂಡವ. 
ಚಂದ್ರಲೇಔಟ್ ನ ವಿದ್ಯಾಸಾಗರ ಶಾಲೆಯಲ್ಲಿ ಸತೀಶ್ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶುಕ್ರವಾರ ನಡೆದ ಪೋಷರ ಸಭೆಯಲ್ಲಿ ಸತೀಶ್ ಬಗ್ಗೆ ಶಿಕ್ಷಕರು ಪೋಷಕರ ಬಳಿ ದೂರಿದ್ದಾರೆ. ಮನೆಗೆ ಬಂದ ನಂತರ ಸತೀಶ್ ನನ್ನು ಪೋಷಕರು ಬೈದು ಸರಿಯಾಗಿ ಓದು ಎಂದು ಬುದ್ಧಿ ಹೇಳಿದ್ದಾರೆ.
ಊಟದ ಬಳಿಕ ತನ್ನ ಕೊಠಡಿಗೆ ತೆರಳಿದ್ದ. ತಡ ರಾತ್ರಿ ಮೂತ್ರ ವಿಸರ್ಜನೆಗೆ ಎದ್ದ ತಂದೆ, ಸತೀಶ್ ಕೊಠಡಿ ಕಡೆ ನೋಡಿದಾಗ. ಕೊಠಡಿ ಬಾಗಿಲು ಮುಚ್ಚಿತ್ತು. ಬಾಗಿಲು ತಳ್ಳಲು ಹೋದಾಗ ಒಳಗಡೆಯಿಂದ ಚಿಲಕವಾಕಿದ್ದ. ನಂತರ ಗಾಬರಿಯಿಂದ ಬಾಗಿಲು ಹೊಡೆದು ಒಳಗೆ ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ಸತೀಶ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಂದ್ರಾಲೈಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com