ಸಾಹಿತ್ಯ ಪರಿಷತ್ ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿ ಮಾಯಣ್ಣ ಆಯ್ಕೆ

ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮಾಯಣ್ಣ ಅವರು ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ...
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು

ಬೆಂಗಳೂರು: ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮಾಯಣ್ಣ ಅವರು ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಮತದಾನದಲ್ಲಿ ಮಾಯಣ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರಕಾಶ್ ಮೂರ್ತಿ ಅವರನ್ನು ಕೇವಲ 561 ಮತಗಳ ಅಂತರದಿಂದ ಸೋಲಿಸಿದರು. ಚುನಾವಣೆಯಲ್ಲಿ  ಮಾಯಣ್ಣ ಅವರು ಒಟ್ಟು 3,747 ಮತ ಗಳಿಸಿದ್ದರೆ, ಎಂ ಪ್ರಕಾಶ್ ಮೂರ್ತಿ ಅವರು 3,186 ಮತಗಳಿಸುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಅನಿಕೇತನ ಕನ್ನಡ ಬಳಗದ ಮೂಲಕ  ಕಳೆದ ಆರೇಳು ತಿ೦ಗಳಿ೦ದ ಬೆ೦ಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮಾಯಣ್ಣ ಅವರು ಅಬ್ಬರದ ಪ್ರಚಾರ ನಡೆಸಿದ್ದರು.

ಹಲವು ತಿ೦ಗಳಿ೦ದ ಕಸಾಪ ಆವರಣದಲ್ಲಿ ನಡೆದ ಬಹುತೇಕ ಕಾಯ೯ಕ್ರಮ ಗಳಲ್ಲಿ ಮಾಯಣ್ಣ ಕಾಣಿಸಿಕೊಳ್ಳುತ್ತಿದ್ದರು. ವಿವಿಧ ಕಾಯ೯ಕ್ರಮಗಳನ್ನು ಪ್ರಾಯೋಜಿಸುವಿಕೆ, ಪುಸ್ತಕ ಪ್ರಕಟಣೆ,  ಸನ್ಮಾನ, ಪ್ರತಿಭಾ ಪುರಸ್ಕಾರ ಸೇರಿ ಒ೦ದಲ್ಲಾ ಒ೦ದು ಕಾಯ೯ಕ್ರಮದಲ್ಲಿ ಮಾಯಣ್ಣ ಉಪಸ್ಥಿತಿ ಕಾಣುತ್ತಿತ್ತು. ಚುನಾವಣೆ ಹತ್ತಿರವಾದ೦ತೆಲ್ಲ ಈ ಅಬ್ಬರ ಮತ್ತಷ್ಟು ಹೆಚ್ಚಾಗಿತ್ತು. ಮಾಜಿ ಅಧ್ಯಕ್ಷ  ಪು೦ಡಲೀಕ ಹಾಲ೦ಬಿಯವರ 60ನೇ ವಷ೯ಕ್ಕೆ ರವೀ೦ದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ಆಯೋಜಿಸಿದ್ದ ಕಾಯ೯ಕ್ರಮದಲ್ಲಿ ಸಿಎ೦ ಸಿದ್ದರಾಮಯ್ಯ ಭಾಗವಹಿಸಿದ್ದರು. ಹಾಲ೦ಬಿ ಕುರಿತ  ಅಭೀನ೦ದನಾ ಗ್ರ೦ಥವನ್ನು ಕೂಡ ಹೊರತರಲಾಗಿತ್ತು. ಈ ಎಲ್ಲ ಅಂಶಗಳು ರಾಜಧಾನಿಯ ಮತದಾರರ ಮೇಲೆ ಪ್ರಭಾವ ಬೀರಿದ್ದು, ಇದರ ಪರಿಣಾಮವೇ ಮಾಯಣ್ಣ ಅವರು ಗೆದ್ದಿದ್ದಾರೆ ಎಂದು  ಅವರ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಗಿಲು ಮುಟ್ಟಿದ ಬೆಂಬಲಿಗರ ಸಂಭ್ರಮ
ಇದೇ ವೇಳೆ ಅತ್ತ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾಯಣ್ಣ ಅವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಆರಂಭದಲ್ಲಿ ಪ್ರಕಾಶ್ ಮೂರ್ತಿ ಅವರ ಮುನ್ನಡೆ ಸಾಧಿಸಿದ್ದರಾದರೂ  ಬಳಿಕ ಎಲ್ಲ ಮತಗಳಲ್ಲಿ ಮಾಯಣ್ಣ ಅವರು ಮುನ್ನಡೆ ಸಾಧಿಸಿದರು. ಅಂತಿಮವಾಗಿ  ಎಲ್ಲ ಕೇ೦ದ್ರಗಳ ಮತ ಎಣಿಕೆಯಾಗುತ್ತಿದ್ದ೦ತೆ ಮಾಯಣ್ಣ ಅವರು ಮುನ್ನಡೆಯಲ್ಲಿದ್ದರಿಂದ ಬೆಂಬಲಿಗರು  ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸ೦ಭ್ರಮಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com