ಮಾರತ್ ಹಳ್ಳಿ ಬಳಿ ವಾಯುಸೇನೆ ಕಾಪೌಂಡ್ ಕುಸಿತ; 7ಕ್ಕೂ ಹೆಚ್ಚು ವಾಹನಗಳು ಜಖಂ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಃ ತತ್ತರಿಸಿ ಹೋಗಿದ್ದು, ಗುರುವಾರ ರಾತ್ರಿ ಮಾರತ್ ಹಳ್ಳಿ ಸಮೀಪ ಭಾರತೀಯ ವಾಯು ಸೇನೆಗೆ ಸೇರಿದೆ ಜಾಗದ ಕಾಪೌಂಡ್ ಕುಸಿದ ಪರಿಣಾಮ ಸುಮಾರು 7 ವಾಹನಗಳು ಜಖಂಗೊಂಡಿವೆ.
ಬೆಂಗಳೂರಿನಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)
ಬೆಂಗಳೂರಿನಲ್ಲಿ ಭಾರಿ ಮಳೆ (ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಃ ತತ್ತರಿಸಿ ಹೋಗಿದ್ದು, ಗುರುವಾರ ರಾತ್ರಿ ಮಾರತ್ ಹಳ್ಳಿ ಸಮೀಪ ಭಾರತೀಯ  ವಾಯು ಸೇನೆಗೆ ಸೇರಿದೆ ಜಾಗದ ಕಾಪೌಂಡ್ ಕುಸಿದ ಪರಿಣಾಮ ಸುಮಾರು 7 ವಾಹನಗಳು ಜಖಂಗೊಂಡಿವೆ.

ಮಾರತ್ ಹಳ್ಳಿ ಸಮೀಪವಿರುವ ಭಾರತೀಯ ವಾಯು ಸೇನೆಯ ಕಾಪೌಂಡ್ ಮಳೆಯಿಂದಾಗಿ ಬುಡಸಮೇತ ಕುಸಿದಿದ್ದು, ಹಿಂಬದಿಯಲ್ಲಿ ನಿಲ್ಲಿಸಿದ್ದ ಕಾರು, ಆಟೋ, ದ್ವಿಚಕ್ರವಾಹನಗಳು ಸೇರಿದಂತೆ  ಸುಮಾರು 7ಕ್ಕೂ ಅಧಿಕವಾಹನಗಳು ಸಂಪೂರ್ಣ ಜಖಂಗೊಂಡಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಬಿಬಿಎಂಪಿ ನೌಕರರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕುಸಿದು ಬಿದ್ದ  ಕಾಪೌಂಡ್ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೇವಲ ಮಾರತ್ ಹಳ್ಳಿ ಮಾತ್ರವಲ್ಲದೇ ನಗರದ ಹೆಚ್ ಎಸ್ ಆರ್ ಲೇಔಟ್ ನಲ್ಲಿಯೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಈ ಭಾಗದ 2ನೇ ಸೆಕ್ಟರ್ ಭಾಗ ಸಂಪೂರ್ಣ  ಜಲಾವೃತ್ತವಾಗಿ ದ್ವೀಪದಂತಾಗಿದೆ. ಇನ್ನು ಬನ್ನೇರುಘಟ್ಟ ಸಮೀಪದ ವೈಶ್ಯಬ್ಯಾಂಕ್ ಲೇಔಟ್ ನಲ್ಲಿಯೂ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಆಪಾರ್ಟ್ ಮೆಂಟ್ ವೊಂದರ  ಶಿಥಲದೊಂಡ ಕಾಪೌಂಡ್ ಬಿರುಕು ಬಿಟ್ಟು ಕುಸಿಯುವ ಭೀತಿಯಲ್ಲಿದೆ.

ಬಿಟಿಎಂ ಲೇಔಟ್ ನ ರಾಜಾಕಾಲುವೆ ತುಂಬಿ ಹರಿಯುತ್ತಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರ ಪರದಾಡುವಂತಾಗಿದೆ. ಇದಲ್ಲದೆ ನಗರದ ಹೊರವಲಯದ  ಪ್ರದೇಶಗಳಾದ ಗೊಟ್ಟಿಗೇರಿ, ಸರ್ಜಾಪುರ, ಪರಪ್ಪನ ಅಗ್ರಹಾರ, ಬನ್ನೇರುಘಟ್ಟ, ಜಿಗಣಿ, ಆನೇಕಲ್, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿಯಲ್ಲೂ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ  ನೀರು ನಿಂತಿದ್ದು, ಖಾಸಗಿ ಕಂಪನಿ ಉದ್ಯೋಗಿಗಳು ಕಚೇರಿಗೆ ತೆರಳು ಪರದಾಡುತ್ತಿದ್ದಾರೆ. ರಸ್ತೆಗಳಲ್ಲಿ ಮಂಡಿಯವರೆಗೂ ನೀರು ನಿಂತ ಪರಿಣಾಮ ಅದರ ನಡುವೆಯೇ ಸಂಚರಿಸುವ ಪರಿಸ್ಥಿತಿ  ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com