ಅಖಂಡ ಕರ್ನಾಟಕ ಬಂದ್: ಏನಿರುತ್ತೆ, ಏನಿರಲ್ಲ?

ಮಹದಾಯಿ ತೀರ್ಪು ವಿರೋಧಿಸಿ ಜುಲೈ 30ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ನೀಡಿರುವ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ...
ಕರ್ನಾಟಕ ಬಂದ್
ಕರ್ನಾಟಕ ಬಂದ್
Updated on: 
ಬೆಂಗಳೂರು: ಮಹದಾಯಿ ತೀರ್ಪು ವಿರೋಧಿಸಿ ಜುಲೈ 30ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ನೀಡಿರುವ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. 
ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮ, ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ ಚಾಲಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಹೊಟೇಲ್ ಸೇರಿದಂತೆ ಎಲ್ಲವೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಇಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಕರ್ನಾಟಕಕ್ಕೆ ಬಂದ್ ಬಿಸಿ ತಟ್ಟಲಿದೆ. 
ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಸೂಚನೆ ನೀಡಿದೆ. ಇನ್ನು ನ್ಯಾಯಾಧೀಕರಣ ತೀರ್ಪು ವಿರೋಧಿಸಿ ನಾಳೆ ಕನ್ನಡ ಚಿತ್ರರಂಗದವರು 11 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ರ್ಯಾಲಿ ನಡೆಸಲಿದೆ. ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂದ್ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ಬೆಂಬಲ ಹಿನ್ನೆಲೆ ನಾಳೆ ಚಿತ್ರಮಂದಿರಗಳು ಸ್ಧಗಿತಗೊಳ್ಳಲಿವೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನ ಇರುವುದಿಲ್ಲ. 
ನಾಳೆ ಏನಿರಲ್ಲಾ:
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇವೆ
ಆಟೋ, ಟ್ಯಾಕ್ಸಿ ಸೇವೆ
ಚಿತ್ರಮಂದಿರ, ಮಲ್ಟಿಪ್ಲೆಕ್ಸ್
ರೆಸ್ಟೋರೆಂಟ್, ಹೊಟೇಲ್
ಏರ್ ಪೋರ್ಟ್ ನಲ್ಲಿನ ಟ್ಯಾಕಿ ಸೇವೆ ಸ್ಧಗಿತ
ಪೆಟ್ರೋಲ್ ಬಂಕ್
ಬಂದ್ ಇದ್ದರು ಏನಿರುತ್ತೆ:
ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್
ತರಕಾರಿ-ಹಣ್ಣು ಮಾರುಕಟ್ಟೆ
ಹಾಲು-ಪೇಪರ್
ಮೆಟ್ರೋ ರೈಲು ಸಂಚಾರ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com