
ಬೆಂಗಳೂರು: ಕಳೆದ ಒಂದು ವಾರದಿಂದ ನಡೆದ ಬಂದ್ ಗಳು, ಹಾಗೂ ಮಳೆಯಿಂದಾಗಿ ಕರ್ನಾಟಕ ಬಹು ದೊಡ್ಡ ನಷ್ಟ ಅನುಭವಿಸಿದೆ.
ಸಾರಿಗೆ ನೌಕರರ ಪ್ರತಿಭಟನೆ, ಬ್ಯಾಂಕ್ ಮುಷ್ಕರ ಎಡೆಬಿಡದೆ ಸುರಿಯುತ್ತಿರುವ ಮಳೆ, ಹಾಗೂ ಕರ್ನಾಟಕ ಬಂದ್ ಗಳ ಪರಿಣಾಮ ಜುಲೈ 25 ರಿಂದ30ರ ವರೆಗೆ ಸುಮಾರು 8 ಸಾವಿರದಿಂದ 9 ಸಾವಿರ ಕೋಟಿ ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಒಂದು ವಾರದಿಂದ ನಡೆದ ನಡೆದ ಸಾರಿಗೆ ನೌಕರರ ಮುಷ್ಕರ, ಬ್ಯಾಂಕ್ ನೌಕರರ ಪ್ರತಿಭಟನೆ, ಮಹಾದಾಯಿ ಹೋರಾಟಕ್ಕೆ ನಡೆದ ಎರಡು ದಿನಗಳ ಬಂದ್ ಗಳಿಂದಾಗಿ ಪ್ರತಿದಿನ 1ಸಾವಿರ ದಿಂದ 1.500 ಕೋಟಿ ನಷ್ಟ ಆಗಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ಒಟ್ಟು ಆದಾಯದಲ್ಲಿ ಶೇ. 65 ರಷ್ಟು ಆದಾಯವನ್ನು ಬೆಂಗಳೂರು ನಗರವೊಂದೇ ನೀಡುತ್ತದೆ. ಪ್ರತಿದಿನ 600-800 ಕೋಟಿ ಆದಾಯ ಬೆಂಗಳೂರಿನಿಂದ ಸರ್ಕಾರಕ್ಕೆ ಸಿಗುತ್ತದೆ. ಸಾರಿಗೆ ಬಂದ್ ನಡೆದಿದ್ದರಿಂದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹೊಡೆತ ಬಿದ್ದಿದೆ. ಗಾರ್ಮೆಂಟ್ಸ್, ಐಟಿ ವಲಯ ಆಹಾರೋದ್ಯಮ ಗಳಿಗೆ ಸುಮಾರು ಶೇ.35 ರಿಂದ 45 ರಷ್ಟು ನಷ್ಟವಾಗಿದೆ. ಮನರಂಜನಾ ವಲಯಕ್ಕೂ ನಷ್ಟವಾಗಿದೆ.
Advertisement