

ಬೆಂಗಳೂರು: ವಿದ್ಯುತ್ ಕೈಕೊಟ್ಟ ಕಾರಣ ನಮ್ಮ ಮೆಟ್ರೋ ರೈಲು ಮಾರ್ಗ ಮಧ್ಯದಲ್ಲೇ ಸ್ಥಗಿತಗೊಂಡು ಪ್ರಯಾಣಿಕರು ಗುರುವಾರ ಪರದಾಡುವಂತೆ ಮಾಡಿತ್ತು.
ವಿದ್ಯುತ್ ಸಮಸ್ಯೆಯಿಂದಾಗಿ ಸುಮಾರು 11 ನಿಮಿಷಗಳ ಕಾಲ ರೈಲು ಸ್ಥಗಿತಕೊಂಡಿತ್ತು. ಬೆಳಿಗ್ಗೆ 9.26 ರಿಂದ 9.37ರವರೆಗೆ ರೈಲನ್ನು ನಿಲ್ಲಿಸಲಾಗಿತ್ತು. ಇದರಂತೆ ಸ್ಥಳೀಯ ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಿ ಜನರನ್ನು ಸುರಕ್ಷಿತವಾಗಿ ಇಳಿಸಲಾಗಿತ್ತು.
ಭೂಗರ್ಭ ವಿಭಾಗದಲ್ಲಿನ ಮೆಟ್ರೋ ಮಾರ್ಗದಲ್ಲಿ ಇದೇ ಮೊದಲು ಈ ರೀತಿಯ ಸಮಸ್ಯೆ ಎದುರಾಗಿರುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಹೇಳಿದ್ದಾರೆ.
ಮೆಟ್ರೋ ರೈಲುಗಳು ಕಾರ್ಯನಿರ್ವಹಿಸುತ್ತಿದ್ದಾಗ ವಿದ್ಯುತ್ ಸಮಸ್ಯೆಯುಂಟಾದರೆ ಪರ್ಯಾಯ ವಿದ್ಯುತ್ ಬ್ಯಾಕ್ಅಪ್ ಪೂರೈಕೆ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಆದರೆ, ನಿನ್ನೆ ಇವುಗಳು ನಿನ್ನೆ ಕಾರ್ಯನಿರ್ವಹಿಸಿಲ್ಲ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement