ಬೆಂಗಳೂರು: 15 ಲಕ್ಷ ಮರಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದ ಅಧಿಕಾರಿ

ಮತ್ತೊಂದು ಪರಿಸರ ದಿನ ಬಂದು ಹೋಯಿತು. ಪರಿಸರ ದಿನ ಎಂದಾಕ್ಷಣ ಎಲ್ಲರ ಅರಿವಿಗೂ ಬರುವುದು ಹಸಿರು, ಮರ, ಗಿಡ. ಸಾಕಷ್ಟು ಮಂದಿ ಪರಿಸರ ದಿನದಂದೂ ಕಾರ್ಯಕ್ರಮ ಮಾಡಿ...
ಎಸ್.ಜಿ. ನೆಗಿನ್ಹಾಲ್
ಎಸ್.ಜಿ. ನೆಗಿನ್ಹಾಲ್

ಬೆಂಗಳೂರು: ಮತ್ತೊಂದು ಪರಿಸರ ದಿನ ಬಂದು ಹೋಯಿತು. ಪರಿಸರ ದಿನ ಎಂದಾಕ್ಷಣ ಎಲ್ಲರ ಅರಿವಿಗೂ ಬರುವುದು ಹಸಿರು, ಮರ, ಗಿಡ. ಸಾಕಷ್ಟು ಮಂದಿ ಪರಿಸರ ದಿನದಂದೂ ಕಾರ್ಯಕ್ರಮ ಮಾಡಿ ಸಸಿಗಳನ್ನು ನೆಟ್ಟು ಪರಿಸರ ದಿನ ಆಚರಿಸಿದ್ದೇವೆಂದು ಹೇಳುತ್ತಾರೆ. ಮರು ದಿನ ಆ ಸಸಿಗಳನ್ನು ನೆಟ್ಟ ಜನರಾರು, ಎಲ್ಲಿದ್ದಾರೆಂಬುದೇ ತಿಳಿಯುವುದಿಲ್ಲ.

ನಗರದಲ್ಲಿ ಸಾಕಷ್ಟು ಕೆಲಸಗಳಲ್ಲಿ ಮಗ್ನರಾಗಿರುವ ಜನರಿಗೆ ಪರಿಸರ ಕಾಳಜಿ ಇರುವುದೇ ಆತೀ ವಿರಳ. ಉದ್ಯಾನನಗರಿಯಾಗಿದ್ದ ಬೆಂಗಳೂರು ಇಂದು ಕಸಮುಕ್ತ ನಗರವಾಗಿ ಬದಲಾಗಿದೆ. ನಗರದಲ್ಲಿ ಪರಿಸರ ಪ್ರೇಮಿಗಳು ಸಿಗುವುದೇ ಅತಿ ವಿರಳ. ಇಂದು ನಗರದಲ್ಲಿರುವ ಹಲವಾರು ಮರಗಳಿಂದ ಜನತೆ ಉಸಿರಾಡುತ್ತಿದ್ದಾರೆಂದರೆ ಅದಕ್ಕೆ ಇಲ್ಲೊಬ್ಬ ಪರಿಸರ ಪ್ರೇಮಿ ಅಧಿಕಾರಿ ಕಾರಣರಾಗಿದ್ದಾರೆ.

ಮಾಜಿ ಅರಣ್ಯ ಇಲಾಖೆಯ ಅಧಿಕಾರಿಯಾಗಿರುವ ಎಸ್.ಜಿ. ನೆಗಿನ್ಹಾಲ್ ಅವರು 5 ವರ್ಷದ ಅವಧಿಯಲ್ಲಿ ನಗರದಲ್ಲಿ ಈ ವರೆಗೂ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ.

ಅಂದಿನ ಪರಿಸರ ಪ್ರೇಮದ ಕುರಿತ ನೆನಪನ್ನು ಇಂದು ಮೆಲುಕು ಹಾಕಿರುವ ಅವರು, 1982ರ ವೆಂಕಟಮಹೋತ್ವವ ಸಂಭ್ರಮಾಚರಣೆ ಮಾಡುತ್ತಿದ್ದ ಸಮಯವದು. ಗಾಂಧಿಜಯಂತಿ ಆಚರಿಸುತ್ತಿದ್ದಾಗ ಸಾಕಷ್ಟು ಅಧಿಕಾರಿಗಳು ಮೊದಲು ಸಸಿಗಳನ್ನು ನೆಟ್ಟು, ಅದಕ್ಕೆ ನೀರು ಹಾಯಿಸುತ್ತಿದ್ದರು. ಈಗಲೂ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಗುಂಡುರಾವ್ ಅವರು ಮುಖ್ಯಮಂತ್ರಿಯಾದಾಗ ನಗರದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಈಗಾಗಲೂ ಉಷ್ಣಾಂಶ ಹಾಗೆಯೇ ಇದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗುಂಡುರಾವ್ ಅವರು, ಪುರಸಭಾಧ್ಯಕ್ಷರು, ಶಾಸಕರು, ನಗರಸಭಾಧ್ಯಕ್ಷರಿಗೆ ಪ್ರಶ್ನೆ ಕೇಳಿದ್ದರು.  ಒಂದು ವರ್ಷಕ್ಕೆ ಎಷ್ಟು ಮರಗಳನ್ನು ನೆಡುತ್ತೀರಾ ಎಂದು ಕೇಳಿದ್ದರು. ಈ ವೇಳೆ ಸಾಕಷ್ಟು ಮಂದಿ ಸಾವಿರ ಎಂದು ಹೇಳಿದ್ದರು. ಈ ವೇಳೆ ಅರಣ್ಯ ಸಂರಕ್ಷಣಾಧಿಕಾರಿಯೈಗ್ದೇದ ಶ್ಯಾಮ್ ಸುಂದರ್ ಅವರು ಲಕ್ಷ ಎಂದು ಉತ್ತರಿಸಿದ್ದರು. ಇದರಂತೆ ಅವರು ತಂಡವೊಂದನ್ನು ರಚಿಸಿ ಮರ ನೆಟ್ಟಿದ್ದರು. 50ರ ನಂತರ ನನಗೆ ಬೆಂಗಳೂರಿನಿಂದ ತೀರ್ಥಹಳ್ಳಿಗೆ ವರ್ಗಾವಣೆಯಾಗಿತ್ತು.

ನಗರದಲ್ಲಿ ಇಂದು ಸೃಷ್ಟಿಯಾಗಿರುವ ಮರಗಳ ಅಭಾವ ಕೊರತೆ ನೀಗಿಸಲು ನಮಗೆ 6 ತಿಂಗಳ ಕಾಲ ಸಮಯಾವಕಾಶವಿದೆ. ನಗರದಲ್ಲಿ ಬಿಡಿಎ ಅಧಿಕಾರಿಗಳು ನೆಡುತ್ತಿರುವ ಮರಗಳು ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡುತ್ತಿಲ್ಲ. ಮರಗಳು 1 ಮತ್ತು 1.5 ಇಂಚಿನಷ್ಟು ಬೆಳೆಯುತ್ತಿದ್ದಂತೆ ಹಸುಗಳು ಅವುಗಳನ್ನು ತಿನ್ನುತ್ತವೆ.

ಮರಗಳನ್ನು ರಕ್ಷಿಸಲು ಸಿಬ್ಬಂದಿಗಳನ್ನು ನಿಯೋಜಿಸುವ ಅಗತ್ಯವಿದೆ. ಜನನಿ ಬಿಡ ಪ್ರದೇಶವಾಗಿರುವ ಮೆಜೆಸ್ಟಿಕ್ ನಲ್ಲಿ ಮರಗಳು ಕಾಣುವುದೇ ಅತಿ ವಿರಳವಾಗಿದೆ. ಮೆಜೆಸ್ಟಿಕ್ ನಲ್ಲಿ ಸಸಿಗಳನ್ನು ನೆಡುವುದು ತ್ರಾಸದಾಯಕ ಕೆಲಸವಾಗಿದೆ. ಈ ಪ್ರದೇಶದಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೂ ಜನರು ಓಡಾಡುತ್ತಿರುತ್ತಾರೆ. ಆದರೂ ನನ್ನ ತಂಡ ರಾತ್ರಿ 2 ರವರೆಗೂ ಕಾದು ನಂತರ ಸಸಿ ನೆಡುವ ಕೆಲಸ ಮಾಡುತ್ತಾರೆ. ಆದರೆ, ಜನರು ಓಡಾಡುತ್ತಿದ್ದಾಗ ಗಿಡಗಳನ್ನು ನೋಡಿ ಅದನ್ನು ಕಿತ್ತು ಹಾಕುತ್ತಾರೆ. ರಾತ್ರಿಯಿಡೀ ಕೆಲಸ ಮಾಡಿದ್ದು, ವ್ಯರ್ಥವಾಗಿ ಹೋಗುತ್ತದೆ.

ಇನ್ನು ಪೌರಸಂಸ್ಥೆಗಳು ಮೃದು ಮರಗಳನ್ನು ಕಡಿದು ಹಾಕುತ್ತಿರುತ್ತಾರೆ. ಮರಗಳು ಧರೆಗುಳುವ ಸಾಧ್ಯತೆಯಿದ್ದು ಮರಗಳನ್ನು ಕಡಿದು ಹಾಕಲಾಗುತ್ತದೆ ಎಂದು ಹೇಳುತ್ತಾರೆ. ಇನ್ನು ಮಳೆಬಂದಾಗ ವಿದ್ಯುತ್ ಕಂಬಗಳು ಧರೆಗುರುಳಿ ಬೀಳುತ್ತಿರುತ್ತದೆ. ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸುವ ಅವಶ್ಯಕತೆಯಿದೆ. ಪ್ರಸ್ತುತ ನಾವು ಬೀಳುತ್ತಿರುವ ಮರಗಳ ಕಡೆ ಗಮನ ಹರಿಸುತ್ತಿದ್ದೇವೆ.

ಮರಗಳನ್ನು ಯಾವ ರೀತಿಯಲ್ಲಿ ಸಂರಕ್ಷಿಸುವುದು ಎಂಬುದೇ ತಿಳಿಯುತ್ತಿಲ್ಲ. ಜನರನ್ನು ಅಧಿಕಾರಿಗಳನ್ನು ನಿಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮರಗಳನ್ನು ಕಡಿಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಬೇಕು. ಮರಗಳನ್ನು ಕಡಿಯುವುದರಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ. ಮರಗಳನ್ನು ಕಡಿಯುತ್ತಿದ್ದಂತೆ ಮತ್ತೊಂದು ಮರವನ್ನು ನೆಡಬೇಕು ಆಗಲೇ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com