ಸರ್ಕಾರಿ ನೌಕರಿ ತಿರಸ್ಕರಿಸಿದ 300 ವೈದ್ಯರು

ಸರ್ಕಾರಿ ಉದ್ಯೋಗಕ್ಕಾಗಿ ಹೊತೊರೆಯುವ ಇತ್ತೀಚಿನ ದಿನಗಳಲ್ಲಿ ಸರ್ಕಾರವೇ ನೇಮಕ ಮಾಡಿಕೊಂಡಿದ್ದರೂ 300ಕ್ಕೂ ಹೆಚ್ಚು ವೈದ್ಯರು ಉದ್ಯೋಗವನ್ನು...
ಸರ್ಕಾರಿ ನೌಕರಿ ತಿರಸ್ಕರಿಸಿದ 300 ವೈದ್ಯರು
ಸರ್ಕಾರಿ ನೌಕರಿ ತಿರಸ್ಕರಿಸಿದ 300 ವೈದ್ಯರು

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕಾಗಿ ಹೊತೊರೆಯುವ ಇತ್ತೀಚಿನ ದಿನಗಳಲ್ಲಿ ಸರ್ಕಾರವೇ ನೇಮಕ ಮಾಡಿಕೊಂಡಿದ್ದರೂ 300ಕ್ಕೂ ಹೆಚ್ಚು ವೈದ್ಯರು ಉದ್ಯೋಗವನ್ನು ತಿರಸ್ಕರಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಿ ಆಸ್ಪತ್ರೆಯ ವಿವಿಧ ಹುದ್ದೆಗಳಿಗೆ ಸಂಬಂಧಿಸಿ 1000 ವೈದ್ಯರನ್ನು ನೇಮಕ ಮಾಡಿಕೊಂಡಿತ್ತು. ಆದರೆ, ಇದರಲ್ಲಿ 300 ವೈದ್ಯರು ಸರ್ಕಾರಿ ಹುದ್ದೆಯನ್ನು ನಿರಾಕರಿಸುವುದಾಗಿ ತಿಳಿದುಬಂದಿದೆ.

2015 ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಇಲಾಖೆಯು 1,122 ವೈದ್ಯರನ್ನು ವಿವಿಧ ಹಂತಗಳ ಮೂಲಕ ನೇಮಕ ಮಾಡಿಕೊಂಡಿತ್ತು. ಆದರೆ, ಇದರಲ್ಲಿ ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ನಿರಾಕರಿಸಿದ್ದರೆ, ಇನ್ನು ಕೆಲವರು ಸರ್ಕಾರ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈದ್ಯರ ವಿರುದ್ಧ ಕಡ್ಡಾಯ ಗ್ರಾಮೀಣ ಸೇವಾ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳುವ ಸ್ಥಾನದಲ್ಲಿ ಸರ್ಕಾರ ಇಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ನಿಂತಿತೆ. ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭ ಮಾಡುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ತಿಳಿದು ಬಂದಿರುವ ಮಾಹಿತ ಪ್ರಕಾರ ಸರ್ಕಾರ, 713 ಶಸ್ತ್ರಚಿಕಿತ್ಸಕರು, 324 ಸಾಮಾನ್ಯ ವೈದ್ಯರು ಮತ್ತು 85 ದಂತವೈದ್ಯರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಇದರಂತೆ ಸರ್ಕಾರ ಎಲ್ಲರಿಗೂ ನೇಮಕಾತಿ ಪತ್ರವನ್ನು ನೀಡಿ, ಕೌನ್ಸಿಲಿಂಗ್ ನಡೆಸಿದೆ. ಆದರೆ, ನೇಮಕ ಮಾಡಿಕೊಂಡಿದ್ದ 214 ಶಸ್ತ್ರಚಿಕಿತ್ಸಕರು, 71 ಸಾಮಾನ್ಯ ವೈದ್ಯರು ಹಾಗೂ 9 ದಂತ ವೈದ್ಯರು ಕಾರಣಗಳನ್ನು ನೀಡದೆ, ನೇಮಕಾತಿ ಪತ್ರವನ್ನು ಹಿಂತಿರುಗಿಸದೆ ಸುಮ್ಮನೆ ಇದ್ದಾರೆ. ಈ ವರೆಗೂ ಅವರಾರೂ ರಿಪೋರ್ಟ್ ಮಾಡಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ನೇಮಕಾತಿ ಪತ್ರ ನೀಡಿದ 6 ತಿಂಗಳು ಕಳೆದಿದೆ. ನೇಮಕಗೊಂಡಿದ್ದ 300 ವೈದ್ಯರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ ಇದೀಗ ಸರ್ಕಾರ ಕರ್ನಾಟಕ ನಾಗರೀಕ ಸೇವೇ ಕಾಯ್ದೆ 1977ರ 18(3) ಅಡಿಯಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಆ ವೈದ್ಯರನ್ನು ಹುದ್ದೆಯಿಂದ ತೆಗೆದುಹಾಕಲಾಗುತ್ತದೆ. ಹೊಸ ನೇಮಕಾತಿಯ ಸುತ್ತೋಲೆಯನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆಸಕ್ತಿದಾಯಕ ವಿಚಾರವೆಂದರೆ ಈಗಾಗಲೇ ಹುದ್ದೆಗೆ ಹಾಜರಾಗಿರುವ ಶೇ.40 ರಷ್ಟು ವೈದ್ಯರಲ್ಲಿ 46 ಶಸ್ತ್ರಚಿಕಿತ್ಸಕರು ಯಾವುದೇ ಕಾರಣವಿಲ್ಲದೆ, ಗೈರು ಹಾಜರಾಗಿದ್ದಾರೆಂದು ತಿಳಿದುಬಂದಿದೆ. ಶೀಘ್ರದಲ್ಲೇ ಈ ವೈದ್ಯರಿಗೂ ಸರ್ಕಾರ ಪತ್ರವೊಂದನ್ನು ನೀಡಲಿದ್ದು, ಹುದ್ದೆಯಿಂದ ತೆಗೆದುಹಾಕುವ ಎಚ್ಚರಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ನೇಮಕಗೊಂಡ ವೈದ್ಯರಿಗೆ ರು. 1ಲಕ್ಷ ವೇತನ
ಇನ್ನು ಮೂಲಗಳ ತಿಳಿಸಿರುವ ಮಾಹಿತಿ ಪ್ರಕಾರ ಸರ್ಕಾರ ನೇಮಕ ಮಾಡಿಕೊಂಡಿರುವ ವೈದ್ಯರಿಗೆ ರು. 1 ಲಕ್ಷ ವೇತನ ನೀಡುತ್ತಿದ್ದು, ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕೆಲಸ ಮಾಡುವ ವೈದ್ಯರಿಗೆ ರು.1.3 ಲಕ್ಷ ವೇತನ ನೀಡುತ್ತಿದೆ. ಇನ್ನು ಸಾಮಾನ್ಯ ವೈದ್ಯರಿಗೆ ರು.1 ಲಕ್ಷ ವೇತನ ನೀಡುತ್ತಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com