ಮುಂಗಾರು ಶಾಕ್; ಮೊದಲ ಮಳೆಗೇ ಬೆಂಗಳೂರು ಜನಜೀವನ ಅಸ್ತವ್ಯಸ್ಥ

ಮುಂಗಾರು ಪ್ರವೇಶಕ್ಕೆ ಇನ್ನು ಒಂದು ದಿನ ಬಾಕಿಯಿರುವಾಗಲೇ ನಗರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ನಗರ ಜೀವನ ಅಸ್ತವ್ಯಸ್ಥಗೊಂಡಿದೆ...
ಮಳೆ ಮಧ್ಯೆಯೂ ರಾಜಭವನದ ರಸ್ತೆಯಲ್ಲಿ ಚಲಿಸುತ್ತಿರುವ ದ್ವಿಚಕ್ರ ವಾಹನ ಸವಾರರು
ಮಳೆ ಮಧ್ಯೆಯೂ ರಾಜಭವನದ ರಸ್ತೆಯಲ್ಲಿ ಚಲಿಸುತ್ತಿರುವ ದ್ವಿಚಕ್ರ ವಾಹನ ಸವಾರರು
Updated on: 

ಬೆಂಗಳೂರು: ಮುಂಗಾರು ಪ್ರವೇಶಕ್ಕೆ ಇನ್ನು ಒಂದು ದಿನ ಬಾಕಿಯಿರುವಾಗಲೇ ನಗರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ನಗರ ಜೀವನ ಅಸ್ತವ್ಯಸ್ಥಗೊಂಡಿದೆ.

ನಿನ್ನೆ ಸಂಜೆ ನಗರದ ಹಲವೆಡೆ ಆರಂಭವಾದ ಮಳೆ ರಾತ್ರಿಯಿಡೀ ತನ್ನ ಆರ್ಭಟವನ್ನು ಮುಂದವರೆಸಿತ್ತು. ಮಳೆಯ ಹಿನ್ನೆಲೆಯಲ್ಲಿ ರಸ್ತೆಗಳು ಜಲಾವೃತ್ತಗೊಂಡಿರುವುದು ಹಲವೆಡೆ ಕಂಡುಬಂದಿತ್ತು. ಬೈರಸಂದ್ರದ 7ನೇ ಮುಖ್ಯರಸ್ತೆಯಲ್ಲಿದ್ದ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಬಾಪೂಜಿನಗರದಲ್ಲಿ ಧರೆಗುರುಳಿ ಬಿದ್ದ ಮರ ಸಾಕಷ್ಟು ಜನತೆಗೆ ಸಾಕಷ್ಟು ಸಮಸ್ಯೆಯನ್ನೊಡ್ಡಿತ್ತು. ಈಜಿಪುರದಲ್ಲೂ ಮಳೆಯಿಂದಾಗಿ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿರುವುದಾಗಿ ತಿಳಿದುಬಂದಿದೆ.

ಮಳೆ ನೀರಿನಿಂದಾಗಿ ರಸ್ತೆಗಳು ಜಲಾವೃತಗೊಂಡ ಕಾರಣ ಸಾರಕ್ಕಿ ಜಂಕ್ಷನ್, ಕನಕಪುರ ರಸ್ತೆ, ಕೃಷ್ಣ ಫ್ಲೋರ್ ಮಿಲ್ ಜಂಕ್ಷನ್, ಓಕಳಿಪುರಂ ಜಂಕ್ಷನ್ ನ ಫ್ಲಾಟ್ ಫಾರ್ಮ್ ರಸ್ತೆ, ಮೇಖ್ರಿ ಸರ್ಕಲ್, ವಿಟ್ಟಲ್ ಮಲ್ಯ ರಸ್ತೆ, ದೊಮ್ಮಲೂರು, ಈಜಿಪು ಜಂಕ್ಷನ್ ನ ರಿಂಗ್ ರಸ್ತೆ, ಹೂಡಿ ಸರ್ಕಲಿ, ಮಹದೇವಪುರ, ಸಾಗರ್ ಆಸ್ಪತ್ರೆ ಜಂಕ್ಷನ್, ಜಯದೇವ ಆಸ್ಪತ್ರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ, ಪೀಣ್ಯ ಸರ್ಕಲ್, ಜಾಲಹಳ್ಳಿ ಜಂಕ್ಷನ್, ತುಮಕೂರು ರಸ್ತೆ ಸೇರಿದಂತೆ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇನ್ನು ಮುಂಗಾರು ಮಳೆ ಅಧಿಕೃತವಾಗಿ ರಾಜ್ಯದಾದ್ಯಂತ ಜೂನ್. 10ಕ್ಕೆ ಕಾಲಿಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಮುಂಗಾರು ಆಗಮನಕ್ಕೂ ಮುನ್ನವೇ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ವಿಶ್ವೇಶ್ವರಪುರದಲ್ಲಿ 24.5 ಮಿ.ಮೀ, ಬೆಂಗಳೂರು ಉತ್ತರದಲ್ಲಿ 17 ಮಿ.ಮೀ ಹಾಗೂ ಬೆಂಗಳೂರು ದಕ್ಷಿಣದಲ್ಲಿ 10.5 ಮಿ.ಮೀನಷ್ಟು ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com