ಸಾವಿನ ಅಂಚಿಗೆ ಹೋಗಿ ಬದುಕುಳಿದ ಕೋಲಾರದ ವ್ಯಕ್ತಿ

ಶಸ್ತ್ರ ಚಿಕಿತ್ಸೆ ನಂತರ ಕೋಮಾಗೆ ಹೋಗಿದ್ದ ವ್ಯಕ್ತಿಯನ್ನು ಸತ್ತು ಹೋಗಿದ್ದಾನೆಂದು ತಿಳಿದು ಕುಟುಂಬಸ್ಥರು ಅಂತಿಮ ಸಂಸ್ಕಾರ ನಡೆಸಿ ಅಚ್ಚರಿಗೆ ಗುರಿಯಾಗಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಶಸ್ತ್ರ ಚಿಕಿತ್ಸೆ ನಂತರ ಕೋಮಾಗೆ ಹೋಗಿದ್ದ ವ್ಯಕ್ತಿಯನ್ನು ಸತ್ತು ಹೋಗಿದ್ದಾನೆಂದು ತಿಳಿದು ಕುಟುಂಬಸ್ಥರು ಅಂತಿಮ ಸಂಸ್ಕಾರ ನಡೆಸಿ ಅಚ್ಚರಿಗೆ ಗುರಿಯಾಗಿರುವ ಘಟನೆಯೊಂದು ಗುರುವಾರ ನಡೆದಿದೆ.

ಕೋಲಾರದ ಬೀಚಗೊಂಡನಹಳ್ಳಿಯ ನಿವಾಸಿಯಾಗಿರುವ ವೆಂಕಟೇಶ್ (35) ಎಂಬುವವರು ಭುಜದ ಶಸ್ತ್ರ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಗುರುವಾರ ವೆಂಕಟೇಶ್ ಅವರು ಆಹಾರ ಸೇವಿಸಲು ಮುಂದಾಗಿದ್ದಾರೆ. ಈ ವೇಳೆ ಇದ್ದಕ್ಕಿದಂತೆ ವಾಂತಿಯಾಗಲು ಆರಂಭವಾಗಿದೆ. ಕೆಲವು ಸಮಯವಾಗುತ್ತಿದ್ದಂತೆ ವೆಂಕಟೇಶ್ ಕೋಮಾಗೆ ಹೋಗಿದ್ದಾರೆ.

ಈ ವೇಳೆ ತಪಾಸಣೆ ಮಾಡಿದ ಪೊಲೀಸರು ವೆಂಕಟೇಶ್ ಅವರನ್ನು ತೀವ್ರ ನಿಗಾಘಟಕದಲ್ಲಿರಿಸಿದ್ದಾರೆ. ನಂತರ ವೆಂಕಟೇಶ್ ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ಬದುಕುಳಿಯುವುದು ಕಷ್ವ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಈ ವೇಳೆ ವೈದ್ಯರ ವರ್ತನೆಯನ್ನು ನೋಡಿದ ಕುಟುಂಬಸ್ಥರು ದುಡ್ಡು ಕಿತ್ತುಕೊಳ್ಳುವುದಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ. ವೆಂಕಟೇಶ್ ಸತ್ತು ಹೋಗಿದ್ದಾನೆಂದು ತಿಳಿದು ವೈದ್ಯರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಾಹನದಲ್ಲಿ ವೆಂಕಟೇಶ ಅವರನ್ನು ಇರಿಸಿಕೊಂಡು ಹೊರಟು ಹೋಗಿದ್ದಾರೆ.

ನಂತರ ಸಂಬಂಧಿಕರಿಗೆ ವೆಂಕಟೇಶ್ ಸತ್ತುಹೋಗಿರುವುದಾಗಿ ಹೇಳಿಕೊಂಡಿರುವ ಕುಟುಂಬಸ್ಥರು ಮನೆಗೆ ಬರುವಷ್ಟದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಂತೆ ತಿಳಿಸಿದ್ದಾರೆ. ಇದರಂತೆ ವಾಹನದಲ್ಲಿ ವೆಂಕಟೇಶ್ ರನ್ನು ಇರಿಸಿಕೊಂಡು ಹೋಗುತ್ತಿದ್ದಾಗ ರಸ್ತೆ ಮಧ್ಯೆ ವಾಹನದ ಚಾಲಕ ಜೋರಾಗಿ ಬ್ರೇಕ್ ಹಾಕಿದ್ದಾನೆ. ಕೂಡಲೇ ವೆಂಕಟೇಶ್ ಅವರು ಕೆಮ್ಮಲು ಶುರು ಮಾಡಿದ್ದಾರೆ. ಇದನ್ನು ನೋಡಿದ ಕುಟುಂಬಸ್ಥರು ಅಚ್ಚರಿಗೊಂಡು ಮತ್ತೆ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ.

ವೈದ್ಯರು ನೀಡಿರುವ ಬಿಡುಗಡೆ ಪತ್ರದಲ್ಲೂ (ಡಿಸ್ಚಾರ್ಜ್ ಸಮ್ಮರಿ) ವೈದ್ಯಕೀಯ ಸಲಹೆ ನೀಡಿದ್ದರು ಸಲಹೆಯ ವಿರುದ್ಧ ಕುಟುಂಬಸ್ಥರು ರೋಗಿಯನ್ನು ಬಿಡುಗಡೆ ಮಾಡಿಕೊಂಡು ಹೋಗಿದ್ದಾರೆಂದು ತಿಳಿಸಲಾಗಿದೆ.

ವೈದ್ಯರ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವೆಂಕಟೇಶ್ ಸತ್ತು ಹೋಗಿದ್ದಾನೆಂದು ತಿಳಿದುಕೊಂಡಿದ್ದೆವೆಂದು ವೆಂಕಟೇಶ್ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com