ನಗರದ ಜನತೆ ಮತ್ತೆ ಡೆಂಗ್ಯು ಭೀತಿಯಲ್ಲಿ

ಇತ್ತೀಚಿನ ಮಳೆಯಿಂದ ನಗರದಲ್ಲಿ ಬಿಸಿಲಿನ ಧಗೆ ಕಡಿಮೆಯಾದರೂ ಕೂಡ ಡೆಂಗ್ಯು ಜ್ವರ ಮತ್ತೆ ಕಾಡುತ್ತಿದೆ. ಡೆಂಗ್ಯುವಿಗೆ ಕಾರಣವಾಗುವ...
ಡೆಂಗ್ಯು ಹರಡದಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಬೆಂಗಳೂರಿನ ಸಿದ್ದಾಪುರದ ಎಂ.ಕೆ.ಕಾಲೊನಿಯಲ್ಲಿ ರಾಸಾಯನಿಕವನ್ನು ಸಿಂಪಡಿಸಿದರು. ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ
ಡೆಂಗ್ಯು ಹರಡದಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಬೆಂಗಳೂರಿನ ಸಿದ್ದಾಪುರದ ಎಂ.ಕೆ.ಕಾಲೊನಿಯಲ್ಲಿ ರಾಸಾಯನಿಕವನ್ನು ಸಿಂಪಡಿಸಿದರು. ಬಿಬಿಎಂಪಿ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ

ಬೆಂಗಳೂರು: ಇತ್ತೀಚಿನ ಮಳೆಯಿಂದ ನಗರದಲ್ಲಿ ಬಿಸಿಲಿನ ಧಗೆ ಕಡಿಮೆಯಾದರೂ ಕೂಡ ಡೆಂಗ್ಯು ಜ್ವರ ಮತ್ತೆ ಕಾಡುತ್ತಿದೆ. ಡೆಂಗ್ಯುವಿಗೆ ಕಾರಣವಾಗುವ ಸೊಳ್ಳೆ ಶೇಖರಿಸಿಟ್ಟ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ರೋಗವನ್ನು ಉತ್ಪತ್ತಿ ಮಾಡುತ್ತದೆ. ಬೊಮ್ಮನಹಳ್ಳಿ, ರಾಜಾಜಿನಗರ ಮತ್ತು ವಿಜಯನಗರಗಳಲ್ಲಿ ಜನರು ಜ್ವರ, ಮೈ ಕೈ ನೋವು ಎಂದು ಹೇಳಿಕೊಂಡು ಔಷಧಿಗಾಗಿ ಬರುತ್ತಾರೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆ ವೈದ್ಯರು.
 
ಡೆಂಗ್ಯು ಜ್ವರದಿಂದ ಕಾನೂನು ವಿಭಾಗದ ಮಾಜಿ ಉಪ ನಿರ್ದೇಶಕರು ಸಾವನ್ನಪ್ಪಿದ್ದು ಅಧಿಕಾರಿಗಳಲ್ಲಿ ಮತ್ತು ನಗರದ ಜನರಲ್ಲಿ ಆತಂಕದ ವಾತಾವರಣವನ್ನು ಹುಟ್ಟುಹಾಕಿದೆ.

ಮುನ್ನೆಚ್ಚರಿಕೆ: ತಮ್ಮ ಮನೆ ಸುತ್ತಮುತ್ತ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ ಎಂದು ನಗರದ ಹಲವು ಪ್ರದೇಶಗಳ ನಾಗರಿಕರು ದೂರುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯಾಚರಣೆ ಕೂಡ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಆದರೂ ನಾವು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನೀರು ಎಲ್ಲಿಯೂ ನಿಲ್ಲದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್ ಚೀಲಗಳಲ್ಲಿ, ಕಂಟೈನರ್, ಟಯರ್ ಗಳಲ್ಲಿ, ಮನೆಯ ಸುತ್ತಮುತ್ತ ಹೂಕುಂಡಗಳಲ್ಲಿ, ಬಕೆಟ್ ಗಳಲ್ಲಿ ಹೆಚ್ಚು ದಿನಗಳವರೆಗೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಪಾಲಿಕೆಯ ಆರೋಗ್ಯಾಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com