ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವುಕಡೆ ಸೋಮವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆ, ಗಾಳಿಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ.
ಮಲ್ಲೇಶ್ವರಂನ 18ನೇ ಕ್ರಾಸ್ ಬಳಿ 30 ಅಡಿ ಎತ್ತರದ ಮರ ಬಿದ್ದ ಪರಿಣಾಮ ಬೈಕ್ ಸವಾರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಘಟನೆಯಲ್ಲಿ ಒಂದು ಐ10 ಕಾರು ಸೇರಿದಂತೆ ಹಲವು ದ್ವಿಚಕ್ರ ವಾಹನಹಳು ಜಖಂಗೊಂಡಿವೆ.
ಮೃತ ಬೈಕ್ ಸವಾರ ಕಲ್ಯಾಣನಗರದ ಅಸಾವುಲ್ ಷರೀಫ್(45ವರ್ಷ) ಎಂದು ಗುರುತಿಸಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿಯೂ ಮರ ಉರುಳಿ ಬಿದ್ದಿದೆ, ಆರ್.ಆರ್. ನಗರದಲ್ಲೂ ಮರ ಧರೆಗುರುಳಿದೆ. ಬೃಹತ್ ಮರ ಬಿದ್ದು ಬೈಕ್, ಕಾರುಗಳು ಜಖಂಗೊಂಡಿವೆ.