ಕಡಿಮೆ ವೇತನ: ಮೆಟ್ರೋಗೆ 25 ಲೋಕೋ ಪ್ಯೆಲಟ್‍ಗಳ ರಾಜಿನಾಮೆ

ಕಡಿಮೆ ವೇತನ ಹಾಗೂ ಅಧಿಕ ಕೆಲಸದೊತ್ತಡ ಕಾರಣದಿ೦ದಾಗಿ ಕಳೆದೆರಡು ತಿಂಗಳಲ್ಲಿ 25ಕ್ಕೂ ಹೆಚ್ಚು ನಮ್ಮ ಮೆಟ್ರೋದ ಲೋಕೋ ಪ್ಯೆಲಟ್‍ಗಳು ಕೆಲಸಕ್ಕೆ ರಾಜೀನಾಮೆ...
ನಮ್ಮ ಮೆಟ್ರೋ
ನಮ್ಮ ಮೆಟ್ರೋ

ಬೆ೦ಗಳೂರು: ಕಡಿಮೆ ವೇತನ ಹಾಗೂ ಅಧಿಕ ಕೆಲಸದೊತ್ತಡ ಕಾರಣದಿ೦ದಾಗಿ ಕಳೆದೆರಡು ತಿಂಗಳಲ್ಲಿ 25ಕ್ಕೂ ಹೆಚ್ಚು ನಮ್ಮ ಮೆಟ್ರೋದ ಲೋಕೋ ಪ್ಯೆಲಟ್‍ಗಳು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮೆಟ್ರೋದ 30ಕ್ಕೂ ಹೆಚ್ಚಿನ ಇ೦ಜಿನಿಯರ್‍ಗಳು ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡುವ ಸ೦ದಭ೯ದಲ್ಲಿ ಕಾರಣವೇನು ಎ೦ಬುದನ್ನು ತಿಳಿಸಿಲ್ಲ. 25 ರೈಲು ಚಾಲಕರು ರಾಜೀನಾಮೆ ಸಲ್ಲಿಸಿದ್ದರೂ ಯಾವುದೇ ರೀತಿಯಲ್ಲೂ ತೊ೦ದರೆಯಾಗುವುದಿಲ್ಲ ಎ೦ದು ಬಿಎ೦ಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಬಿಎ೦ಆರ್‍ಸಿಎಲ್‍ಗೆ 25 ಲೋಕೋ ಪೈಲಟ್ ರಾಜೀನಾಮೆ ನೀಡಿದ ನ೦ತರ ಸದ್ಯ 292 ರೈಲು ನಿವಾ೯ಹಕರಿದ್ದಾರೆ. ಅದರಲ್ಲಿ 51 ಮಹಿಳೆಯರಾಗಿದ್ದಾರೆ. ಇಷ್ಟು ಸ೦ಖ್ಯೆಯ ರೈಲು ಚಾಲಕರಿರುವ ಕಾರಣದಿ೦ದಾಗಿ ಈಗ ವಾಣಿಜ್ಯ ಸ೦ಚಾರ ಆರ೦ಭವಾಗಿರುವ ಮಾಗ೯ಕ್ಕೆ ಯಾವುದೇ ತೊ೦ದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಲೋಕೋ ಪ್ಯೆಲಟ್‍ಗಳು ರಾಜೀನಾಮೆ ನೀಡಲು ಪ್ರಮುಖ ಕಾರಣವೆ೦ದರೆ ಕಡಿಮೆ ವೇತನ ಮತ್ತು ಕೆಲಸದ ಒತ್ತಡ ಎ೦ದು ಹೇಳಲಾಗಿದೆ. ಸದ್ಯ ರೈಲು ನಿವಾ೯ಹಕರಿಗೆ 14 ಸಾವಿರ ರೂ. ವೇತನ ನೀಡಲಾಗುತ್ತಿದ್ದು, ದಿನವೊ೦ದಕ್ಕೆ ಕನಿಷ್ಠ 400 ಕಿ.ಮೀ. ಮೆಟ್ರೋ ರೈಲು ಓಡಿಸಬೇಕಿದೆ. ಹೀಗಾಗಿ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ ಎ೦ಬ ಕಾರಣಕ್ಕಾಗಿ 25 ಲೋಕೋ ಪ್ಯೆಲಟ್‍ಗಳು ಕೆಲಸದಿ೦ದ ನಿಗ೯ಮಿಸಿದ್ದಾರೆ ಎ೦ದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com