

ಬೆಂಗಳೂರು: ರಾಜ್ಯಸಭೆ ಸದಸ್ಯೆ ಹಿರಿಯ ಗಾಯಕಿ ಸಂಸದೆ ಬಿ ಜಯಶ್ರೀ ಅವರ ಅವಧಿ ಪೂರ್ಣಗೊಳ್ಳುವ ಹಿನ್ನೆಲೆ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಹೆರಸನ್ನು ಬಿಜೆಪಿ ರಾಜ್ಯ ಘಟಕ ಹೈಕಮಾಂಡ್ ಗೆ ಶಿಫಾರಸು ಮಾಡಿದೆ.
ರಾಜ್ಯಸಭೆಗೆ ಭೈರಪ್ಪ ಅವರ ಹೆಸರನ್ನು ನಾಮ ನಿರ್ದೇಶನ ಮಾಡಲು ಈ ಹಿಂದೆ ಬಿಜೆಪಿ ರಾಜ್ಯ ಘಟಕ ಚರ್ಚೆ ನಡೆಸಿತ್ತು. ಇದೀಗ ಅಂತಿಮವಾಗಿ ಭೈರಪ್ಪನವರ ಹೆಸರನ್ನೇ ರಾಜ್ಯಸಭೆಗೆ ಶಿಫಾರಸು ಮಾಡಿದೆ.
ಹಿರಿಯ ಕಾದಂಬರಿಕಾರರಾದ ಭೈರಪ್ಪ ನವರು ಸಹ ಒಲವು ತೋರಿದ್ದರಿಂದ ರಾಜ್ಯ ಬಿಜೆಪಿ ಘಟಕ ಹೈಕಮಾಂಡ್ ಗೆ ಶಿಫಾರಸು ಮಾಡಿದೆ.