ಮಹಿಳೆಯರ ರಕ್ಷಣೆ ವಿಚಾರದಲ್ಲಿ ಬೆಂಗಳೂರಿನ ಮಂದಿ ಕಿವುಡರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಹಲವು ಅಹಿತಕರ ಘಟನೆಗಳಿಂದ ಸಾಬೀತಾಗಿದೆ. ಇತ್ತೀಚೆಗೆ ಕತ್ರಿಗುಪ್ಪೆ ಪಿಜಿ ಮುಂದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬುದು ಹಲವು ಅಹಿತಕರ ಘಟನೆಗಳಿಂದ ಸಾಬೀತಾಗಿದೆ. ಇತ್ತೀಚೆಗೆ ಕತ್ರಿಗುಪ್ಪೆ ಪಿಜಿ ಮುಂದೆ ನಿಂತಿದ್ದ ಮಣಿಪುರ ಮೂಲದ ಯುವತಿಯ ಕಿಡ್ನಾಪ್ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ.

22 ವರ್ಷದ ಮಹಿಳೆಯ ಕಿಡ್ನಾಪ್ ಆಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲವು ಜನರು ಈ ಘಟನೆ ನಡೆಯುವಾಗ ಅಲ್ಲೇ ಇದ್ದು, ಯಾರು ಸಹಾಯಕ್ಕೆ ಹೋಗದಿರುವುದು ಕೂಡ ಕ್ಯಾಮೆರಾದಲ್ಲಿ ದಾಖಲಾಗಿದೆ.

ಘಟನೆ ನಡೆಯುವಾಗ ಮೂಕರಾಗಿ ನಿಂತಿದ್ದ ಕೆಲವು ಜನ ಆಕೆ  ಸಹಾಯಕ್ಕಾಗಿ ಅಳುತ್ತಿದ್ದರೂ ಯಾರೊಬ್ಬರು ಮುಂದಾಗಿಲ್ಲ. ದಿನನಿತ್ಯದ ಬದುಕಲ್ಲಿ ಹಲವು ಮಹಿಳೆಯರು ಹಲವು ರೀತಿಯ ದೌರ್ಜನ್ಯಗಳನ್ನು ಎದುರಿಸಬೇಕಾಗಿದೆ. ಆದರೆ ಯಾರು ಧೈರ್ಯವಾಗಿ ನುಗ್ಗಿ ಸಹಾಯಕ್ಕೆ ಬರದಿರುವುದು ವಿಪರ್ಯಾಸ.

ಫ್ರೇಸರ್ ಟೈನ್ ನ ರಸ್ತೆಯಲ್ಲಿ ಒಂದು  ದಿನ ನಡೆದು ಹೋಗುತ್ತಿರಬೇಕಾದರೇ ನಂಬರ್ ರಿಜಿಸ್ಟ್ರೇಷನ್ ಇಲ್ಲದ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ಕೈಯ್ಯನ್ನು ಚಾಚಿ ಬರುತ್ತಿದ್ದ. ಬಹುಶಃ ಆತ ನನ್ನ ಬಳಿಯಿದ್ದ ಬ್ಯಾಗ್ ಕಸಿದುಕೊಳ್ಳಲು ಬಯಸಿದ್ದ. ಕೂಡಲೇ ನಾನು ಆತನಿಗೆ ಹೊಡೆದು, ಅಟ್ಟಿಸಿಕೊಂಡು ಓಡಿದೆ. ಸುತ್ತ ಮುತ್ತಲು ಹಲವು ಜನರಿದ್ದರೂ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ ಎಂದು ಅಂಜು ಮೆನನ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇನ್ನು 18 ವರ್ಷದ ಯುವತಿ ಉಷಾ ಎಂಬುವರದ್ದು ಮತ್ತೊಂದು ಅನುಭವ. ಬಸ್ ಗಾಗಿ ಕಾಯುತ್ತಿದ್ದ ತನ್ನನ್ನು ಎರಡು ವಾರಗಳ ಕಾಲದಿಂದ ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿದ್ದ. ಅವನನ್ನು ನಾನು ನಿರ್ಲಕ್ಷ್ಯಸಿದ್ದೆ,  ಒಂದು ದಿನ ಸಂಜೆ ಆತ ತನ್ನ ಗೆಳೆಯರೊಂದಿಗೆ ನಾನು ಕಾಯುತ್ತಿದ್ದ ಬಸ್ ಸ್ಟಾಪ್ ಬಳಿಗೆ ಬಂದ. ನಂತರ ನನ್ನ ಹತ್ತಿರ ಬಂದು, ಬೇಬಿ ನನ್ನ ಜೊತೆ ಬರುತ್ತೀಯಾ ಎಂದು ಕೇಳಿದ. ನಾನು ಆತನಿಂದ ದೂರ ಸರಿದೆ, ನಂತರ ಅಲ್ಲಿಂದ ವಾಪಸ್ ಹೊರಟ ಆತ ಸ್ಕೂಟರ್ ಏರಿ, ಮಾವಿನ ಹಣ್ಣು ಸಿಹಿಯಾಗಿದೆ, ನಾನು ರುಚಿ ನೋಡಬೇಕು ಎಂದು ಎಲ್ಲರಿಗೂ ಕೇಳುವಂತೆ ಜೋರಾಗಿ ಹೇಳಿದ. ನಾನು ಅಳುತ್ತಾ ನಿಂತೆ, ನನ್ನ ಅಕ್ಕ ಪಕ್ಕ ನಿಂತಿದ್ದವರೆಲ್ಲಾ ಸುಮ್ಮನೆ ನಿಂತು ನೋಡುತ್ತಿದ್ದರು. ಅಷ್ಟರಲ್ಲಿ ಬಸ್ ಬಂತು, ಬಸ್ ಏರಿ ಹೊರಟ ನಾನು ಮತ್ತೆ ಯಾವತ್ತೂ ಆ ಬಸ್ ಸ್ಟಾಪ್ ಗೆ ಹೋಗಲಿಲ್ಲ ಎಂದು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಒಂದು ದಿನ ಕೆ.ಆರ್ ಸರ್ಕಲ್ ನಲ್ಲಿ ಮನೆಗೆ ಹೋಗುವಾಗ ಸ್ಕೂಟರ್ ಕೆಟ್ಟು ನಿಂತಿತು. ಹೀಗಾಗಿ ನಾನು ರಸ್ತೆಬದಿಯಲ್ಲಿ ನಿಂತು ಯಾರಾದರೂ ಸಹಾಯ ಮಾಡಬಹುದು ಎಂದು ಕಾಯುತ್ತಿದ್ದೆ. ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ಬಹುಶಃ ಅವರೆಲ್ಲಾ ನಾನೊಬ್ಬ ವೇಶ್ಯೆ ಎಂದು ಯೋಚಿಸಿರಬಹುದು ಎಂದು 20 ವರ್ಷದ ಎಲಿಜಿಬೆತ್ ತಮಗಾದ ಅನುಭವ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಜನ ವಿವಿಧ ಮನೋಭಾವ ಹೊಂದಿರುವವರಾಗಿರುತ್ತಾರೆ. ಒಂದು ವೇಳೆ ಅವರು ಸಂತ್ರಸ್ತರ ಸಹಾಯಕ್ಕೆ ಬಂದರೆ ಕೋರ್ಟು, ಸ್ಟೇಷನ್ ಸಾಕ್ಷಿ ಎಂದು ಅಲೆಯಬೇಕಾಗುತ್ತದೆ ಎಂದು ಯೋಚಿಸಿ, ಸಹಾಯಕ್ಕೆ ಬರುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ವಿಮಲಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com