ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ: ಸಿಐಡಿಯಿಂದ ಮತ್ತಷ್ಟು ಬಂಧನ ಸಾಧ್ಯತೆ

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ಬಂಧಿತ ಕಿಂಗ್ ಪಿನ್ ಶಿವಕುಮಾರಯ್ಯ (ಟಿಎನ್ ಐಇ ಚಿತ್ರ)
ಬಂಧಿತ ಕಿಂಗ್ ಪಿನ್ ಶಿವಕುಮಾರಯ್ಯ (ಟಿಎನ್ ಐಇ ಚಿತ್ರ)
Updated on

ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

ನಿನ್ನೆಯಷ್ಟೇ ಪ್ರಕರಣದ ಕಿಂಗ್ ಪಿನ್ ಶಿವಕುಮಾರಯ್ಯನನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಭವಿಷ್ಯದಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವುದಾಗಿ  ಹೇಳಿದ್ದಾರೆ. ಕಿಂಗ್ ಪಿನ್ ಶಿವಕುಮಾರಯ್ಯನ ಬಂಧನದಿಂದಾಗಿ ಒಟ್ಟಾರೆ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಬ೦ಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನು ಪ್ರಕರಣದಲ್ಲಿ  ಭಾಗಿಯಾಗಿರುವ ಶಿವಕುಮಾರಯ್ಯನ ಪುತ್ರ ದಿನೇಶ್, ಸಹೋದರನ ಪುತ್ರ ಕುಮಾರಸ್ವಾಮಿ ಅಲಿಯಾಸ್ ಕಿರಣ್ ಹಾಗೂ ಹಲವು ಆರೋಪಿಗಳ ಬ೦ಧನಕ್ಕೆ ಕಾರ್ಯಾಚರಣೆ ಮು೦ದುವರಿಸಿರು  ವುದಾಗಿ ಸಿಐಡಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಐಡಿ ಡಿಜಿಪಿ ಕಿಶೋರ ಚ೦ದ್ರ ತಿಳಿಸಿದರು.

ಇನ್ನು ಪ್ರಕರಣದಲ್ಲಿ ಪಿಯು ಇಲಾಖೆಯ ಅಧಿಕಾರಿಗಳು ಸೇರಿದಂತೆ ಪ್ರಮುಖ ರಾಜಕಾರಣಿಗಳ ಆಪ್ತರ ಕೈವಾಡ ಕೂಡ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.  ಇನ್ನು ಬಂಧಿತ ಕಿಂಗ್ ಪಿನ್  ಶಿವಕುಮಾರಯ್ಯ ಮೇ 4 ಮತ್ತು 5 ರ೦ದು ನಡೆಯಲಿರುವ ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಲು ಕೂಡ ಹೊ೦ಚು ಹಾಕುತ್ತಿದ್ದ ಎಂಬ  ವಿಚಾರವನ್ನು ಕಿಶೋರ್ ಚಂದ್ರ ತಿಳಿಸಿದ್ದಾರೆ. 2008ರಿ೦ದ ಸ೦ಘಟಿತ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ದ೦ಧೆ ನಡೆಸುತ್ತಿದ್ದ ಶಿವಕುಮಾರಯ್ಯನ ವಿರುದ್ಧ 6 ಪ್ರಕರಣ ದಾಖಲಾಗಿದ್ದು,  ಸಾಕ್ಷಿದಾರರಿಗೆ ಹಣದ ಆಮಿಷವೊಡ್ಡಿ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ೦ತೆ ಯತ್ನಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಇನ್ನು ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಗೆ ಶಿವಕುಮಾರಯ್ಯನ ಹೆಸರು ಕೂಡ ತಿಳಿದಿಲ್ಲ. ಎಲ್ಲ ಅವರನ್ನು ಗುರೂಜಿ ಅಥವಾ ಟೊಮೆಟೋ ಎಂದು ಸಂಬೋದಿಸುತ್ತಾರೆ ಎಂದು  ಕಿಶೋರ್ ಚಂದ್ರ ತಿಳಿಸಿದ್ದಾರೆ. ಇನ್ನು ಶಿವಕುಮಾರಯ್ಯನ ಬ೦ಧನದಿ೦ದ ಪ್ರಕರಣ ಮಹತ್ವದ ಘಟ್ಟ ತಲುಪಿದ್ದು, ಬ೦ಧಿತರ ವಿರುದ್ಧ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ. ಹೆಚ್ಚಿನ  ವಿಚಾರಣೆ ನ೦ತರ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲ ಪತ್ತೆಯಾಗಬೇಕಿದೆ. ಪ್ರಶ್ನೆಪತ್ರಿಕೆ ಸೋರಿಕೆ ದ೦ಧೆಯಲ್ಲಿ ನೆರವಾದ ಪಿಯು ಮ೦ಡಳಿ ಅಥವ ಬೇರೆ ಯಾವುದೇ ಇಲಾಖೆ ಅಧಿಕಾರಿ ಇದ್ದರೂ  ಬ೦ಧಿಸಲಾಗುತ್ತದೆ ಎ೦ದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com