ಜಂಟಿ ವೈಜ್ಞಾನಿಕ ಸಂಶೋಧನೆಗೆ ಫ್ರಾನ್ಸ್- ಭಾರತದ ಒಪ್ಪಂದ

ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸಲು ಭಾರತ ಹಾಗೂ ಫ್ರೆಂಚ್ ನ ಹೆಸರಾಂತ ಪ್ರಯೋಗಾಲಯಗಳು ಒಗ್ಗೂಡಲಿವೆ.
ಜಂಟಿ ವೈಜ್ಞಾನಿಕ ಸಂಶೋಧನೆಗೆ ಫ್ರಾನ್ಸ್- ಭಾರತದ ಒಪ್ಪಂದ
ಜಂಟಿ ವೈಜ್ಞಾನಿಕ ಸಂಶೋಧನೆಗೆ ಫ್ರಾನ್ಸ್- ಭಾರತದ ಒಪ್ಪಂದ

ಬೆಂಗಳೂರು: ವಿವಿಧ ರೀತಿಯ ಸಂಶೋಧನೆಗಳನ್ನು ನಡೆಸಲು ಭಾರತ ಹಾಗೂ ಫ್ರೆಂಚ್ ನ ಹೆಸರಾಂತ ಪ್ರಯೋಗಾಲಯಗಳು ಒಗ್ಗೂಡಲಿವೆ. ಫ್ರೆಂಚ್ ಹಾಗೂ ಭಾರತದ ಪ್ರಯೋಗಾಲಯಗಳು ಒಗ್ಗೂಡಿ ಸಂಶೋಧನೆ ನಡೆಸುವುದಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಫ್ರಾನ್ಸ್ ನ ವೈಜ್ಞಾನಿಕ ಸಂಶೋಧನಾ ಕೇಂದ್ರದ ನಡುವೆ ಒಪ್ಪಂದ ನಡೆದಿದೆ. ಪ್ರೆಂಚ್ ನ ಡಾ.ಫಾಜಿ ಬೌಡ್ಜೆಮಾ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ರೋಹಿಣಿ  ಜಂಟಿ ಪ್ರಯೋಗಾಲಯಗಳಲ್ಲಿ ಸಂಯೋಜಕರಾಗಿ ಕಾರ್ಯನಿರ್ವಸಲಿದ್ದಾರೆ. " ಕಳೆದ ಎರಡು ದಶಕಗಳಿಂದ ಭಾರತ- ಪ್ರೆಂಚ್ ಸಹಯೋಗದಲ್ಲಿ  
ವಿವಿಧ ವೈಜ್ಞಾನಿಕ ಶಿಕ್ಷಣ ವಿಷಯಗಳ ಅಧ್ಯಯನ, ಪ್ರಯೋಗ ನಡೆದಿದೆ.  ವೈಜ್ಞಾನಿಕ ಉನ್ನತಿಗೆ ಈ ಒಪ್ಪಂದ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅನುರಾಗ್ ಕುಮಾರ್ ಹೇಳಿದ್ದಾರೆ.
ಫ್ರಾನ್ಸ್ ನಲ್ಲಿ ಭಾರತ- ಫ್ರೆಂಚ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವ ನಾಲ್ಕು ಪ್ರಯೋಗಾಲಯಗಳಿದ್ದು ಭಾರತದಲ್ಲಿ ಬೆಂಗಳೂರು, ಅಲಹಾಬಾದ್, ಮುಂಬೈ, ಕೋಲ್ಕತಾಗಳಲ್ಲಿಯೂ ಫ್ರೆಂಚ್ ಸಹಯೋಗದಲ್ಲಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com