ಮಂತ್ರಿ ಸಮೂಹ ಮತ್ತು ಹಸಿರು ನ್ಯಾಯಾಧಿಕರಣ (ಸಂಗ್ರಹ ಚಿತ್ರ)
ಮಂತ್ರಿ ಸಮೂಹ ಮತ್ತು ಹಸಿರು ನ್ಯಾಯಾಧಿಕರಣ (ಸಂಗ್ರಹ ಚಿತ್ರ)

ಮ೦ತ್ರಿ ಸಮೂಹಕ್ಕೆ 117 ಕೋಟಿ ದಂಡ ವಿಧಿಸಿ ಹಸಿರು ನ್ಯಾಯಾಧಿಕರಣ

ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಪ್ರಕರಣಕ್ಕೆ ಸ೦ಬ೦ಧಿಸಿದಂತೆ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಮ೦ತ್ರಿ ಸಮೂಹಕ್ಕೆ ಹಸಿರು ನ್ಯಾಯಾಧಿಕರಣ ಪೀಠ ಬರೊಬ್ಬರಿ 117 ಕೋಟಿ ರು. ದಂಡ ವಿಧಿಸಿದೆ.

ಬೆಂಗಳೂರು: ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಪ್ರಕರಣಕ್ಕೆ ಸ೦ಬ೦ಧಿಸಿದಂತೆ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಮ೦ತ್ರಿ ಸಮೂಹಕ್ಕೆ ಹಸಿರು ನ್ಯಾಯಾಧಿಕರಣ ಪೀಠ ಬರೊಬ್ಬರಿ 117  ಕೋಟಿ ರು. ದಂಡ ವಿಧಿಸಿದೆ.

ಕೇವಲ ಮಂತ್ರಿ ಸಮೂಹವಷ್ಟೇ ಅಲ್ಲದೇ ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಸಲಾಪುರಿಯಾ ಬಿಲ್ಡರ್‍ಗಳಿಗೂ ನ್ಯಾಯಾಧಿಕರಣ ದಂಡ ವಿಧಿಸಿದ್ದು, ಕೆರೆಗಳನ್ನು ಅಕ್ರಮವಾಗಿ ಒತ್ತುವರಿ  ಮಾಡಿಕೊಂಡ ಆರೋಪದ ಮೇರೆಗೆ ಎರಡೂ ಸಂಸ್ಥೆಗಳಿಗೂ ಒಟ್ಟು 130.50 ಕೋಟಿ ರು. ದ೦ಡವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ವಿಧಿಸಿದೆ. ಮ೦ತ್ರಿಗೆ 117 ಕೋಟಿ ರು. ಹಾಗೂ  ಸಲಾಪುರಿಯಾಗೆ 13.50 ಕೋಟಿ ರು. ದ೦ಡ ಹಾಕಲಾಗಿದೆ.

ಬೆಳ್ಳ೦ದೂರು ಹಾಗೂ ಅಗರ ಕೆರೆ ಸುತ್ತಮುತ್ತಲಿನ ಜಾಗದಲ್ಲಿ ನಿರ್ಮಾಣವಾಗಿದ್ದ ಮ೦ತ್ರಿ ಟೆಕ್‍ಝೋನ್ ಹಾಗೂ ಕೋರ್ ಮ್ಯೆ೦ಡ್‍ಟೆಕ್ ಪಾಕ್‍೯ ತೆರವು ಮಾಡುವಂತೆ ನ್ಯಾಯಾಧಿಕರಣ  ಆದೇಶಿಸಿದ್ದು, ಮ೦ತ್ರಿ ಡೆವಲಪಸ್‍೯ ಒತ್ತುವರಿ ಮಾಡಿಕೊ೦ಡಿರುವ 3 ಎಕರೆ 10 ಗು೦ಟೆ ಜಾಗವನ್ನು ಕೂಡಲೇ ಸಕಾ೯ರಕ್ಕೆ ಹಿ೦ತಿರುಗಿಸಬೇಕು ಸೂಚನೆ ನೀಡಿದೆ. ಅಲ್ಲದೆ ಇವೆರಡು ಯೋಜನೆಗಳಿಗೆ ಸಂಬಂಧ ಪಟ್ಟ ಸಂಸ್ಥೆ ಹೊಸದಾಗಿ ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ಹಾಗೆಯೇ ಈ ಯೋಜನೆಗಳ ಮೇಲೆ ರಾಜ್ಯ ಪರಿಸರ ಪರಿಣಾಮ ಲೆಕ್ಕಾಚಾರ  ಸಮಿತಿಯು(ಎಸ್‍ಇಐಎಎ) ನಿಗಾ ಇಡಬೇಕು ಎ೦ದು ಎನ್‍ಜಿಟಿ ಆದೇಶಿಸಿದೆ.

ರಾಜಕಾಲುವೆಯಲ್ಲಿ ಇವೆರಡು ಬಿಲ್ಡರ್‍ಗಳು ಸುರಿದಿರುವ ತ್ಯಾಜ್ಯವನ್ನು ನಾಲ್ಕು ವಾರದೊಳಗೆ ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಭೂ ಅಭಿವೃದ್ಧಿ ನಿಗಮವು ಈ ಕೆಲಸವನ್ನು ಮಾಡಿ ಎರಡೂ  ಬಿಲ್ಡರ್‍ಗಳಿ೦ದ ಹಣ ಪಡೆಯಬೇಕು ಎ೦ದು ಆದೇಶದಲ್ಲಿ ಎನ್ ಜಿಟಿ ಸ್ಪಷ್ಟಪಡಿಸಿದೆ.

ಕೆರೆ ಸ೦ರಕ್ಷಿತ ವಲಯ ಮಾರ್ಗಸೂಚಿ ಬದಲಾವಣೆ ಮಾಡಿದ ಎನ್ ಜಿಟಿ
ರಾಜ್ಯಸಭೆ ಸದಸ್ಯ ರಾಜೀವ್ ಚ೦ದ್ರಶೇಖರ್ ಸಲ್ಲಿಸಿದ್ದ ಅಜಿ೯ಯ ವಿಚಾರಣೆ ನಡೆಸಿದ ಎನ್ ಜಿಟಿ ಈಗಾಗಲೇ ಒತ್ತುವರಿಯಾಗಿರುವ ಕೆರೆಗಳನ್ನೂ ಕೂಡಲೇ ತೆರವುಗೊಳಿಸಬೇಕು ಎಂದು ಎನ್  ಜಿಟಿ ಆದೇಶಿಸಿದ್ದು, ಕೆರೆ ಹಾಗೂ ರಾಜಕಾಲುವೆಗಳ ಸ೦ರಕ್ಷಿತ ವಲಯದ ಮಾಗ೯ಸೂಚಿಯನ್ನೂ ಬದಲಾವಣೆ ಮಾಡಿ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿದೆ. ಈ ಬಗ್ಗೆ ಆದೇಶ ಹೊರಡಿಸಿದ  ನ್ಯಾಯಮೂರ್ತಿ ಸ್ವತಂತರ್ ಕುಮಾರ್ ನೇತೃತ್ವದ ಹಸಿರು ನ್ಯಾಯಾಧಿಕರಣದ ನ್ಯಾಯಪೀಠ "ರಾಜಕಾಲುವೆಗಳಲ್ಲಿ ಸ೦ರಕ್ಷಿತ ವಲಯವು 50 ಮೀಟರ್ ಹಾಗೂ ಕೆರೆಗಳಲ್ಲಿ ಇದು 75 ಮೀಟರ್  ಆಗಿರುತ್ತದೆ. ಆದರೆ, ಈ ಅಳತೆಯನ್ನು ರಾಜಕಾಲುವೆ ಅಥವಾ ಕೆರೆಯ ಮಧ್ಯ ಭಾಗದಿ೦ದ ಮಾಡುವುದು ಸರಿಯಲ್ಲ. ಬದಲಾಗಿ ರಾಜಕಾಲುವೆಯ ತುದಿಯಿ೦ದ ಮಾಡಬೇಕು. ಸ೦ಬ೦ಧಪಟ್ಟ  ಪ್ರಾಧಿಕಾರವು ಕೂಡಲೇ ಈ ಅಳತೆಯ ಆಧಾರದ ಮೇಲೆ ಒತ್ತುವರಿ ತೆರವು ಕಾರ್ಯ ಆರ೦ಭಿಸಬೇಕು ಎ೦ದು ಸೂಚನೆ ನೀಡಿದ್ದಾರೆ.

"ರಾಜಧಾನಿ ಬೆಂಗಳೂರಿನ ಯಾವುದೇ ಭಾಗದ ಇ೦ತಹ ಸ೦ರಕ್ಷಿತ ವಲಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗಿದ್ದರೆ ಅಥವಾ ಒತ್ತುವರಿಯಾಗಿದ್ದರೆ ಕೂಡಲೇ ತೆರವು ಮಾಡಬೇಕು. ಇನ್ನು  ಯಾವುದೇ ಕಟ್ಟಡ ನಿರ್ಮಾಣಕ್ಕೆ ಬಿಬಿಎ೦ಪಿ ಅಥವಾ ಬಿಡಿಎ ಅವಕಾಶ ನೀಡಬಾರದು ಎ೦ದು ನ್ಯಾಯಾಧಿಕರಣ ಎಚ್ಚರಿಕೆ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com