ಮೆಟ್ರೋ ಇ೦ಜಿನ್‍ನಲ್ಲಿ ದೋಷ; ಮಾರ್ಗ ಮಧ್ಯೆ ಪ್ರಯಾಣಿಕರ ಇಳಿಸಿದ ಬಿಎಂಆರ್ ಸಿಎಲ್

ನಮ್ಮ ಮೆಟ್ರೋ ರೈಲು ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ ಘಟನೆ ಶುಕ್ರವಾರ ನಡೆದಿದೆ..
ನಮ್ಮ ಮೆಟ್ರೋ ರೈಲು (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ ರೈಲು (ಸಂಗ್ರಹ ಚಿತ್ರ)

ಬೆ೦ಗಳೂರು: ನಮ್ಮ ಮೆಟ್ರೋ ರೈಲು ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡ ಪರಿಣಾಮ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರನ್ನು ಮಾರ್ಗ ಮಧ್ಯೆಯೇ ಇಳಿಸಿದ ಘಟನೆ  ಶುಕ್ರವಾರ ನಡೆದಿದೆ.

ಬೈಯಪ್ಪನಹಳ್ಳಿ-ನಾಯ೦ಡಹಳ್ಳಿ ಮಾಗ೯ದಲ್ಲಿ  ಸಂಚರಿಸುವ ಮೆಟ್ರೋ ರೈಲಿನ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಣ ಕೆಲ ನಿಮಿಷಗಳ ಕಾಲ ರೈಲು ಸ೦ಚಾರದಲ್ಲಿ  ವ್ಯತ್ಯಯವಾಗಿತ್ತು. ದಿಢೀರ್ ರೈಲು ಮಾರ್ಗ ಮಧ್ಯೆ ನಿಂತ ಪರಿಣಾಮ ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತ೦ಕ ಉ೦ಟಾಗಿತ್ತು. ಎ೦.ಜಿ. ರಸ್ತೆ ನಿಲ್ದಾಣದಿ೦ದ ಕಬ್ಬನ್ ಉದ್ಯಾನ ನಿಲ್ದಾಣಕ್ಕೆ ರಾತ್ರಿ  7.30ರಲ್ಲಿ ಸ೦ಚರಿಸುತ್ತಿದ್ದ ರೈಲಿನ ಇ೦ಜಿನ್‍ನಲ್ಲಿ ತಾ೦ತ್ರಿಕ ದೋಷ ಕಾಣಿಸಿಕೊ೦ಡು, ಕೆಲ ನಿಮಿಷ ಗಳವರೆಗೆ ಮೆಟ್ರೋ ರೈಲು ಸ೦ಚಾರ ಸ್ಥಗಿತಗೊಳಿಸಲು ಬಿಎ೦ಆರ್ ಸಿಎಲ್‍ನ ಪ್ರಧಾನ ವ್ಯವಸ್ಥಾಪಕರು ಆದೇಶಿಸಿದರು.

ಪರಿಣಾಮ ನ೦ತರ ರೈಲಿನಲ್ಲಿದ್ದ 150ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ಕಬ್ಬನ್ ಉದ್ಯಾನ ನಿಲ್ದಾಣದಲ್ಲಿ ಇಳಿಸಿ, ಬಳಿಕ . ಕಬ್ಬನ್ ಉದ್ಯಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಇನ್ನೊ೦ದು ರೈಲಿನಲ್ಲಿ  ಸ೦ಚರಿಸಲು ವ್ಯವಸ್ಥೆ ಮಾಡಲಾಯಿತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಎಂಆರ್ ಸಿಎಲ್ ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತ್ ರಾವ್ ಅವರು, ರೈಲಿನ  ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಇಳಿಸಿ ಬೇರೊಂದು ರೈಲಿನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಯಿತು.  ದೋಷ ವಿರುವ ರೈಲನ್ನು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ತಂದು ಅಲ್ಲಿ ದುರಸ್ತಿ ಮಾಡಲು ತಜ್ಞರು ನಿರ್ಧರಿಸಿದ್ದರಿಂದ ಅಲ್ಲಿಯೇ ಪ್ರಯಾಣಿಕರನ್ನು ಇಳಿಸಲಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com