ಬೆಂಗಳೂರು ಕಸದ ಸಮಸ್ಯೆ ನಿವಾರಣೆಗೆ ಮೈಸೂರು ಮಾದರಿ ಯೋಜನೆ

ಕಸದ ಸಮಸ್ಯೆಯಿಂದಾಗಿ ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಕಸದ ಸಮಸ್ಯೆ ಶಾಶ್ವತ ನಿವಾರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ದೇಶದ ನಂಬರ್ 1 ಕ್ಲೀನ್ ಸಿಟಿ ಮೈಸೂರು ಮಾದರಿ ಯೋಜನೆ ರೂಪಿಸ ಹೊರಟಿದೆ.
ಬೆಂಗಳೂರು ಕಸದ ಸಮಸ್ಯೆ (ಸಂಗ್ರಹ ಚಿತ್ರ)
ಬೆಂಗಳೂರು ಕಸದ ಸಮಸ್ಯೆ (ಸಂಗ್ರಹ ಚಿತ್ರ)

ಬೆಂಗಳೂರು: ಕಸದ ಸಮಸ್ಯೆಯಿಂದಾಗಿ ಗಾರ್ಬೇಜ್ ಸಿಟಿ ಎಂದು ಕುಖ್ಯಾತಿ ಪಡೆದಿರುವ ಬೆಂಗಳೂರಿನ ಕಸದ ಸಮಸ್ಯೆ ಶಾಶ್ವತ ನಿವಾರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ದೇಶದ ನಂಬರ್ 1  ಕ್ಲೀನ್ ಸಿಟಿ ಮೈಸೂರು ಮಾದರಿ ಯೋಜನೆ ರೂಪಿಸ ಹೊರಟಿದೆ.

ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಕರೆಯಲಾಗಿದ್ದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜೀವ್ ಗಾಬಾ ಮತ್ತು ಸರ್ಕಾರದ ಮುಖ್ಯ  ಕಾರ್ಯದರ್ಶಿ ಅರವಿಂದ್ ಜಾದವ್ ಅವರು ಸೇರಿದಂತೆ ಸರ್ಕಾರದ ಹಲವು ಅಧಿಕಾರಿಗಳು ಪಾಲ್ಗೊಂಡು ಈ ಬಗ್ಗೆ ಚರ್ಚಿಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್  ಜಾದವ್ ಅವರು, ಮೈಸೂರು ಏಕೆ ಸತತವಾಗಿ ಸ್ವಚ್ಛ ನಗರಗಳ ಪಟ್ಟಿಯಲ್ಲಿ ನಂಬರ್ ಸ್ಥಾನಕ್ಕೇರುತ್ತಿದೆ ಎಂದು ನಾವು ಗಮನಸಿದಾಗ ಅಲ್ಲಿ ಸಾಕಷ್ಟು ಅಂಶಗಳು ನಮಗೆ ಗೋಚರಿಸಿತು.  ನಗರದಲ್ಲಿ ಶೇ.98ರಷ್ಟು ಒಳಚರಂಡಿ ವ್ಯವಸ್ಥೆ ಇದ್ದು, ನಗರದಲ್ಲಿ ಶೇಖರಣೆಯಾಗುವ ಶೇ.80 ರಷ್ಟು ಕಸವನ್ನು ಇಲ್ಲೇ ಸಂಸ್ಕರಣೆ ಮಾಡಲಾಗುತ್ತದೆ. ಇನ್ನು ಶೇ.95ರಷ್ಚ ಪ್ರಮಾಣದಲ್ಲಿ ಪಾಲಿಕೆ  ಸಿಬ್ಬಂದಿ ಮನೆ-ಮನೆಗೆ ತೆರಳಿ ಕಸ ಸಂಗ್ರಹ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಮೈಸೂರು ಇಂದಿಗೂ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮತ್ತೊಂದಷ್ಟು ವರ್ಷಗಳ ಕಾಲ  ಮೈಸೂರೇ ಅಗ್ರ ಸ್ಥಾನದಲ್ಲಿ ಮುಂದುವರೆಯುತ್ತದೆ ಎಂದು ಹೇಳಿದರು.

ತಮ್ಮ ಮಾತನ್ನು ಮುಂದುವರೆಸಿದ ಜಾದವ್, ಮೈಸೂರಿನಲ್ಲಿ ವಾರ್ಡ್ ಮಟ್ಟದಲ್ಲಿ ಕಸ ಸಂಸ್ಕರಣೆ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲ. ಬೆಂಗಳೂರಿನಲ್ಲಿ ಕಸ ನಿರ್ವಹಣಾ  ಘಟಕಗಳ ಕೊರತೆ ಹೆಚ್ಚಿದ್ದು, ಬಿಬಿಎಂಪಿ ಹೆಚ್ಚೆಚ್ಚು ಕಸ ಸಂಗ್ರಹ ವಾಹನಗಳನ್ನು ಖರೀದಿಸುವಂತೆ ಅಥವಾ ವಾಹನಗಳನ್ನು ಲೀಸ್ ಗೆ ಪಡೆಯಲು ಅನುವು ಮಾಡಿಕೊಡುತ್ತೇವೆ. ಈ ಯೋಜನೆ  ಒಂದು ವೇಳೆ ಕಾರ್ಯರೂಪಕ್ಕೆ ಬಂದರೆ ಬಹುತೇಕ ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಜಾದವ್ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com