ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬೈಕ್ ಬಾಡಿಗೆಗೆ ಸೇವೆ ನಾಳೆಯಿಂದ

ನಮ್ಮ ಮೆಟ್ರೋ ಪ್ರಯಾಣಿಕರ ಬಹು ನಿರೀಕ್ಷಿತ ಮೆಟ್ರೋ ಬೈಕ್ ಸೇವೆಗೆ ಶನಿವಾರ ಚಾಲನೆ ನೀಡಲಾಗಿದ್ದು, ಭಾನುವಾರದಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ...
ಮೆಟ್ರೋ ಬೈಕ್ ಸೇವೆ (ಸಂಗ್ರಹ ಚಿತ್ರ)
ಮೆಟ್ರೋ ಬೈಕ್ ಸೇವೆ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಬಹು ನಿರೀಕ್ಷಿತ ಮೆಟ್ರೋ ಬೈಕ್ ಸೇವೆಗೆ ಶನಿವಾರ ಚಾಲನೆ ನೀಡಲಾಗಿದ್ದು, ಭಾನುವಾರದಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ.

ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಂಗಳೂರು ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಅವರು ಇಂದು ಉದ್ಘಾಟನೆ ಮಾಡಿದ್ದು, ನಾಳೆಯಿಂದ ಪ್ರಯಾಣಿಕರ ಸೇವೆಗೆ ಮೆಟ್ರೋ ಬೈಕ್ ಗಳು  ಲಭ್ಯವಾಗಲಿವೆ. ವಿಕೆಡ್ ರೈಡ್ ಅಡ್ವೆಂಚರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೆಟ್ರೋ ಬೈಕ್ ಸರ್ವೀಸ್ ಗುತ್ತಿಗೆ ಪಡೆದಿದ್ದು, ಟ್ರಿನಿಟಿ, ಇಂದಿರಾನಗರ, ಬೈಯಪ್ಪನ ಹಳ್ಳಿ, ಪೀಣ್ಯಾ ಮತ್ತು  ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಗಳಲ್ಲಿ ಈ ಮೆಟ್ರೋ ಬೈಕ್ ಗಳು ಲಭ್ಯವಾಗಲಿವೆ.

ಡ್ವೆಂಚರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹ ಸಂಸ್ಥಾಪಕರಾದ ಜಿ.ಅನಿಲ್ ಅವರು ಈ ವೇಳೆ ಮಾತನಾಡಿ, ಪ್ರಸ್ತುತ 10 ಬೈಕ್ ಗಳನ್ನು ಮೆಟ್ರೋ ಬೈಕ್ ಸೇವೆಗೆ  ಮೀಸಲಿರಿಸಲಾಗಿದ್ದು, ನಾಳೆಯಿಂದ ಟ್ರಿನಿಟಿ ನಿಲ್ದಾಣದಲ್ಲಿ ಇವು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಪ್ರಸ್ತುತ ಭಾನುವಾರ ಮತ್ತು ಸೋಮವಾರ ಮಾತ್ರ ಈ ಮೆಟ್ರೋ ಬೈಕ್ ಸೇವೆ ಲಭ್ಯವಿದ್ದು, ಐದು  ಬೈಕ್ ಗಳು ಶನಿವಾರದಿಂದ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕಾರ್ಯಾಚರಿಸಲಿವೆ ಎಂದು ಹೇಳಿದ್ದಾರೆ.

ಪೀಣ್ಯಾ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ಮಾಲ್ ನಿಲ್ದಾಣದಲ್ಲಿ ಜೂನ್ 2ನೇ ವಾರದಿಂದ ಮೆಟ್ರೋ ಬೈಕ್ ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಅವರು ಮಾಹಿತಿ ನೀಡಿದರು.

ಮೆಟ್ರೋ ಬೈಕ್ ಸೇವೆಯ ನೂತನ ದರ ಪಟ್ಟಿ
ಒಂದು ಬೈಕ್ ಗೆ ಪ್ರತೀ ಅರ್ಧ ಗಂಟೆಗೆ 20 ರು. ನಿಗದಪಡಿಸಲಾಗಿದ್ದು, ಪ್ರಯಾಣಿಕ 3 ಕಿ.ಮೀವರೆಗೂ ಬೈಕ್ ನಲ್ಲಿ ಪ್ರಯಾಣಿಸಬಹುದಾಗಿದೆ.  ಆ ಬಳಿಕ ಪ್ರತೀ ಕಿ.ಮೀಗೆ 3 ರುನಂತೆ  ಅನ್ವಯವಾಗುತ್ತದೆ. ಆ ಬಳಿಕದ ಪ್ರತೀ ಅರ್ಧ ಗಂಟೆಗೆ 10 ರು. ಅಧಿಕ ಶುಲ್ಕ ತಗುಲುತ್ತದೆ ಎಂದು ವಿಕೆಡ್ ರೈಡ್ ಅಡ್ವೆಂಚರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com