ನಗರದಲ್ಲಿ ನಾಪತ್ತೆಯಾಗುವ ಪ್ರತೀ 2 ಮಕ್ಕಳ ಪೈಕಿ 1 ಮಗು ಪತ್ತೆಯೇ ಆಗುವುದಿಲ್ಲ!

ನಗರದ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಮಕ್ಕಳ ಅಪಹರಣದಂತಹ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಸಂಬಂಧಪಟ್ಟಂತೆ ಆತಂಕ ಸೃಷ್ಟಿಸುವ ವರದಿಯೊಂದು ಇದೀಗ ಹೊರಬಿದ್ದಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಮಕ್ಕಳ ಅಪಹರಣದಂತಹ ಪ್ರಕರಣಗಳು ಮಾತ್ರ ಹೆಚ್ಚಾಗುತ್ತಲೇ ಇವೆ. ಇದಕ್ಕೆ ಸಂಬಂಧಪಟ್ಟಂತೆ ಆತಂಕ ಸೃಷ್ಟಿಸುವ ವರದಿಯೊಂದು ಇದೀಗ ಹೊರಬಿದ್ದಿದ್ದು, ನಗರದಲ್ಲಿ ನಾಪತ್ತೆಯಾಗುವ ಪ್ರತೀ 2 ಮಕ್ಕಳ ಪೈಕಿ 1 ಮಗು ಪತ್ತೆಯೇ ಆಗುವುದಿಲ್ಲ ಎಂದು ತಿಳಿದುಬಂದಿದೆ.

ಪೊಲೀಸರು ನೀಡಿರುವ ದಾಖಲೆಗಳ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಮಕ್ಕಳ ಅಪಹರಣ ಪ್ರಕರಣಗಳು ಕಡಿಮೆಯಾಗಿದೆ ಎಂದು ಹೇಳಿದೆ. 2016ರ ಏಪ್ರಿಲ್ ತಿಂಗಳ ವರೆಗೆ ಒಟ್ಟು 184 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 85 ಮಕ್ಕಳು ಪತ್ತೆಯಾಗಿದ್ದರೆ, ಇನ್ನುಳಿದ 99 ಮಕ್ಕಳು ಪತ್ತೆಯಾಗಿಲ್ಲ.

2015ರಲ್ಲಿ 576 ಮಕ್ಕಳು ನಾಪತ್ತೆಯಾಗಿದ್ದರೆ, ಇದರಲ್ಲಿ 207 ಮಕ್ಕಳು ಈ ವರೆಗೂ ಪತ್ತೆಯಾಗಿಲ್ಲ. 2014ರಲ್ಲಿ 678 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 68 ಮಕ್ಕಳು ಪತ್ತೆಯಾಗಿಲ್ಲ. ಒಟ್ಟಾರೆಯಾಗಿ ಈ ವರೆಗೂ 5,722 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 2,366 ಮಕ್ಕಳು ಈ ವರೆಗೂ ಪತ್ತೆಯಾಗಿಲ್ಲ.

14 ರಿಂದ 18 ವರ್ಷದ ಮಧ್ಯದಲ್ಲಿರುವ ಮಕ್ಕಳು ನಾಪತ್ತೆಯಾದರೆ ಇವುಗಳಲ್ಲಿ ಬೆಳಕಿಗೆ ಬರುವ ಪ್ರಕರಣಗಳು ವಿರಳವಾಗಿರುತ್ತದೆ. ಕೆಲವು ಪೋಷಕರು ಸಮಾಜಕ್ಕೆ ಹೆದರಿ ದೂರು ದಾಖಲಿಸುವುದಿಲ್ಲ, ಮಕ್ಕಳನ್ನು ಅಪಹರಿಸಿದವರು ಅವರನ್ನು ಭಿಕ್ಷಾಚಟನೆ, ವೇಶ್ಯಾವಾಟಿಕೆಗಳಿಗೆ ಕಳುಹಿಸುತ್ತಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿಗಳು ಈ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಮಕ್ಕಳ ಹಕ್ಕು ಹೋರಾಟಗಾರ ನಾಗಸಿಂಹ ಜಿ ರಾವ್ ಅವರು ಹೇಳಿದ್ದಾರೆ.

ಸಾಕಷ್ಟು ಮಕ್ಕಳು ದುಡ್ಡು ಮಾಡುವ ಸಲುವಾಗಿ ಮನೆ ಬಿಟ್ಟು ಹೋಗುತ್ತಾರೆ. ಇದರಲ್ಲಿ ಅಡ್ಡದಾರಿ ಹಿಡುವ ಸಂಖ್ಯೆಗಳೇ ಹೆಚ್ಚಾಗಿರುತ್ತದೆ. ಹೀಗಾಗಿಯೇ ಅಪರಾಧದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇನ್ನು ವಯಸ್ಕರ ವಿಭಾಗಕ್ಕೆ ಬರುವುದಾದರೆ, ನಾಪತ್ತೆಯಾಗುವ 40 ರಷ್ಟು ಮಂದಿ ಬುದ್ಧಿಮಾಂಧ್ಯರಾಗಿರುತ್ತಾರೆ. ಮನೆಬಿಟ್ಟು ಹೋದ ಬಳಿಕ ಅವರಿಗೆ ಹಿಂತಿರುಗಿ ಬರುವುದು ಗೊತ್ತಾಗುವುದಿಲ್ಲ. ಹೀಗಾಗಿ ಅವರ ಪತ್ತೆಯಾಗುವುದು ಕಷ್ಟಕರವಾಗಿರುತ್ತದೆ ಎಂದು ಸಲಹೆಗಾರರು ಮಾಹಿತಿ ನೀಡಿದ್ದಾರೆ.

ಕೆಲವು ಹಿರಿಯರು ಮಕ್ಕಳು ನೀಡುವ ನೋವು ಹಾಗೂ ಕಿರುಕುಳ ತಾಳಲಾರದೆ ಮನೆಬಿಟ್ಟು ಹೊರ ಬರುತ್ತಾರೆ. ಇಂತಹವರು ಬದುಕು ನಡೆಸುವ ಸಲುವಾಗಿ ಭಿಕ್ಷಾಚಟನೆಗೆ ಇಳಿಯುತ್ತಾರೆಂದು ಹಿರಿಯರ ಸಹಾಯವಾಣಿ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಇನ್ನು ಕೇಂದ್ರ ಗೃಹ ಸಚಿವಾಲಯ ನೀಡಿರುವ ವರದಿ ಪ್ರಕಾರ ದೇಶದಲ್ಲಿ ಈ ವರೆಗೂ 3.25 ಲಕ್ಷ ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 2011 ಮತ್ತು 2014 ರಲ್ಲಿ ಶೇ.55 ರಷ್ಟು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 45 ರಷ್ಟು ಮಕ್ಕಳು ಈ ವರೆಗೂ ಪತ್ತೆಯಾಗಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com