
ಬೆಂಗಳೂರು: ಆಹಾರ, ಪ್ರೀತಿ ಸ್ಪಂದನೆಯಿಲ್ಲದೆ ಸುಲ್ತಾನ್ ಪಾಳ್ಯದಲ್ಲಿ ಮೃತಪಟ್ಟ ದಂಪತಿಗಳ ಕಥೆ ನಗರ ಜನತೆಯ ಮನಕಲುಕಿದ್ದು, ಇದೀಗ ಹಿರಿಯ ನಾಗರೀಕರಿಗಾಗಿ ಸಹಾಯಗಳ ಕೂಗು ಎಲ್ಲೆಡೆ ಹಲವೆಡೆ ಕೇಳಿ ಬರುತ್ತಿದೆ.
ನಿವೃತ್ತ ಪೊಲೀಸ್ ಪೇದೆಯಾಗಿದ್ದ ವೆಂಕೋಬರಾವ್ (80) ಮತ್ತು ಅವರ ಪತ್ನಿ ಕಲಾದೇವಿಬಾಯಿ (75) ಕೊಳೆತ ಸ್ಥಿತಿಯಲ್ಲಿ ಮನೆಯೊಂದರಲ್ಲಿ ಪತ್ತೆಯಾಗಿದ್ದರು. ಇದರಂತೆ ಶವ ಪರೀಕ್ಷೆ ವೇಳೆ ದಂಪತಿಗಳು ಕಳೆದ ಒಂದು ವಾರದಿಂದ ಆಹಾರ ಸೇವನೆ ಮಾಡಿರಲಿಲ್ಲ ಎಂಬುದು ವರದಿಯಲ್ಲಿ ತಿಳಿದುಬಂದಿತ್ತು.
ಅಲ್ಲದೆ, ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮನೆಯಿಂದಲೂ ಹೊರಬರುತ್ತಿರಲಿಲ್ಲ. ಯಾವಾಗಲೂ ಮನೆಯಲ್ಲೇ ಇರುತ್ತಿದ್ದರಿಂದ ಅವರ ಸಂಕಷ್ಟದ ಬಗೆಗಿನ ಮಾಹಿತಿ ಯಾರಿಗೂ ತಿಳಿದೇ ಇರಲಿಲ್ಲ. ದಂಪತಿಗಳ ಸಾವಿನ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಸಾಕಷ್ಟು ಮಂದಿ ಕೊಲೆಯಿರಬಹುದು ಅಥವಾ ಆತ್ಮಹತ್ಯೆಯಿರಬಹುದೆಂದು ತಿಳಿದಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ದಂಪತಿಗಳ ಕಥೆ ಸಾಕಷ್ಟು ಜನರ ಮನ ಕಲುಕುವಂತೆ ಮಾಡಿತ್ತು.
ನಗರದಲ್ಲಿರುವ ಸಾಕಷ್ಟು ಹಿರಿಯ ನಾಗರೀಕರು ಏಕಾಂಗಿಯಾಗಿ ಜೀವನ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಕ್ಕಳು ವಿದೇಶಗಳಲ್ಲಿ ನೆಲೆಯೂರಿದರೆ, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳುವ ಸಲುವಾಗಿ ಪೋಷಕರು ಏಕಾಂಗಿಯಾಗಿ ಜೀವನ ನಡೆಸಲೇಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಿರಿಯ ನಾಗರೀಕರು ಏಕಾಂಗಿಯಾಗಿಯೇ ಜೀವನ ನಡೆಸಲು ಇಚ್ಛಿಸುತ್ತಾರೆಂದು ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನ ವೈದ್ಯ ಡೈ.ರಾಧಾ ಮೂರ್ತಿಯವರು ಹೇಳಿದ್ದಾರೆ.
ಇನ್ನು ಹಿರಿಯ ನಾಗರೀಕರ ಸಹಾಯಕ್ಕಾಗಿ ಸಹಾಯವಾಣಿಗಳಿವೆ ಆದರೆ, ಸಹಾಯಗಳಿಗೆ ಸಮುದಾಯಗಳ, ಸಂಘಟನೆಗಳ ಕೊರತೆಯಿಂದೆ. ಇನ್ನು ಹಿರಿಯ ನಾಗರೀಕರ ಸಹಾಯಗಳಿಗೆ ವೇದಿಕೆಗಳ ಕೊರತೆಗಳಿವೆ. ಇದರಿಂದಾಗಿ ಬೆಂಗಳೂರು ನಗರ ಪೊಲೀಸರೊಂದಿಗೆ ಕೆಲಸ ಮಾಡುತ್ತಿರುವ ಹಿರಿಯ ನಾಗರೀಕರ ಸಹಾಯವಾಣಿ 1090ರ ಪರಿಣಾಮ ಬೀರುತ್ತಿದೆ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಹೇಳಿದೆ.
ಪ್ರತೀ ನಿತ್ಯ 40 ಕ್ಕೂ ಹೆಚ್ಚು ಕರೆಗಳು ಬರುತ್ತವೆ. ಇದರಲ್ಲಿ ಸಾಕಷ್ಟು ಕರೆಗಳು ಸ್ವತಃ ಹಿರಿಯ ನಾಗರೀಕರೇ ಮಾಡುತ್ತಿರುತ್ತಾರೆ. ಇನ್ನು ಕೆಲವು ಕರೆಗಳು ಹಿರಿಯ ನಾಗರೀಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ನೆರೆಮನೆಯವರೇ ಮಾಡುತ್ತಾರೆ. ಇನ್ನು ಕೆಲವರು ಸಮಾಜಕ್ಕೆ ಹೆದರಿ ದೌರ್ಜನ್ಯಗಳು ನಡೆಯುತ್ತಿದ್ದರೂ ದೂರು ದಾಖಲಿಸುವುದಿಲ್ಲ ಎಂದು ಕರ್ನಾಟಕ ಹೆಲ್ಪ್ ಏಜ್ ಇಂಡಿಯಾದ ಕಾರ್ಯಕ್ರಮ ನಿರ್ವಾಹಕ ಪ್ರಕಾಶನ್ ಅವರು ಹೇಳಿದ್ದಾರೆ.
ಇನ್ನು ಹಿರಿಯ ನಾಗರಿಕರ ಯೋಗಕ್ಷೇಮಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿರುವ ಕಾರ್ಯಕರ್ತರು ಹಿರಿಯರಿಗೆ ಸಲಹೆ ನೀಡಿದ್ದು, ಏಕಾಂಗಿಯಾಗಿ ಜೀವನ ನಡೆಸದಿರುವಂತೆ ಹೇಳಿದ್ದಾರೆ.
ಇನ್ನು ಹಿರಿಯ ನಾಗರೀಕರು ಹಾಗೂ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಹಿರಿಯರು ನೆರೆಮನೆಯವರು, ಸಂಬಂಧಿಕರು, ಗೆಳೆಯರೊಂದಿಗೆ ಸಂಪರ್ಕವನ್ನು ಹೊಂದಿರಬೇಕು. ವೃದ್ಧಾಪ್ಯ ಸಮಯದಲ್ಲಿ ಸಹಾಯಗಳ ಅಗತ್ಯವಿರುವುದರಿಂದ ಸಂಕಷ್ಟ ಸಮಯದಲ್ಲಿ ಈ ಸಂಪರ್ಕಗಳು ಸಹಾಯಕವಾಗುತ್ತವೆಂದು ರಾಧಾಮೂರ್ತಿಯವರು ಹೇಳಿದ್ದಾರೆ.
Advertisement