ಸೀಟು ಹಂಚಿಕೆಗೆ ನಕಾರ: ಖಾಸಗಿ ಕಾಲೇಜುಗಳಿಗೆ ತಿರುಗೇಟು ನೀಡಲು ಸಿದ್ಧವಾದ ಸರ್ಕಾರ

ಬೆಂಗಳೂರು: 1,400 ಪದವಿ ವೈದ್ಯ ಮತ್ತು ದಂತ ವೈದ್ಯಕೀಯ ಸೀಟ್ ಗಳನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳಲು ನಿರಾಕರಿಸಲು ನಿರ್ಧರಿಸುವ ಖಾಸಗಿ ಕಾಲೇಜುಗಳಿಗೆ...
ಕಾಮೆಡ್ ಕೆ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ನಗದರ ಅಧೋಕ್ಷಜ ಮಾಧ್ವರಾಜ್ ಅವರು ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.
ಕಾಮೆಡ್ ಕೆ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ನಗದರ ಅಧೋಕ್ಷಜ ಮಾಧ್ವರಾಜ್ ಅವರು ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ.

ಬೆಂಗಳೂರು: ಬೆಂಗಳೂರು: 1,400 ಪದವಿ ವೈದ್ಯ ಮತ್ತು ದಂತ ವೈದ್ಯಕೀಯ ಸೀಟ್ ಗಳನ್ನು ಸರ್ಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳಲು ನಿರಾಕರಿಸಲು ನಿರ್ಧರಿಸುವ ಖಾಸಗಿ ಕಾಲೇಜುಗಳಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧವಾಗಿದೆ.

ನಿನ್ನೆಯಷ್ಟೇ ಮಾತನಾಡಿದ್ದ ಕರ್ನಾಟಕ ವೃತ್ತಿಪರ ಕಾಲೇಜುಗಳು ಸಂಘದ ಅಧ್ಯಕ್ಷ ಎಂ.ಆರ್. ಜಯರಾಮ್ ಅವರು, ದೇಶದಲ್ಲಿ ವೈದ್ಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ದೇಶದಲ್ಲಿ ಏಕರೂಪದ ಪರೀಕ್ಷೆ ನೀಟ್ ಜಾರಿಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ ಆದೇಶದಂತೆ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ರಾಜ್ಯ ಸರ್ಕಾರದೊಂದಿಗೆ ಯಾವುದೇ ಸೀಟ್ ಗಳನ್ನು ಹಂಚಿಕೆ ಮಾಡಿಕೊಳ್ಳದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಇದರಂತೆ 700 ವೈದ್ಯಕೀಯ ಮತ್ತು 700 ದಂತ ವೈದ್ಯಕೀಯ ಸೀಟ್ ಗಳು ರಾಜ್ಯ ಸರ್ಕಾರ ಪಾಲಿಗೆ ಬರುವುದಿಲ್ಲ. ಈ ಸೀಟ್ ಗಳನ್ನು ಸಿಇಟಿ ರ್ಯಾಂಕ್ ಗಳ ಆಧಾರದ ಕರ್ನಾಟಕದ ವಿದ್ಯಾರ್ಥಿಗಳನ್ನು ಭರ್ತಿ ಮಾಡಲಾಗುತ್ತದೆ. ಶೇ.15ರಷ್ಟು ಸೀಟ್ ಗಳು ಎನ್ಆರ್ ಕೋಟಾಗೆ ಹೋಗಲಿದೆ. ಇನ್ನುಳಿದ ಶೇ.85ರಷ್ಟು ಸೀಟ್ ಗಳು ನೀಟ್ ರ್ಯಾಂಕ್ ನ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು. ಸೀಟುಗಳ ಭರ್ತಿಯಲ್ಲಿ ರಾಜ್ಯ ಕೋಟಾ ಅಥವಾ ಸರ್ಕಾರೀ ಕೋಟಾಗಳಾವುದು ನಮ್ಮ ಸಂಸ್ಥೆಗಳಲ್ಲಿ ಬರುವುದಿಲ್ಲ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧವಾಗಿದ್ದು, ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಖಾಸಗಿ ಕಾಲೇಜುಗಳ ಈ ನಿರ್ಧಾರಕ್ಕೆ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು, ಸೀಟು ಹಂಚಿಕೆ ವಿಚಾರದಲ್ಲಿ ಖಾಸಗಿ ಕಾಲೇಜುಗಳಿಗೆ ಮನವೊಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇನ್ನು ಖಾಸಗಿ ಕಾಲೇಜುಗಳ ಈ ನಿಲುವು ಸರ್ಕಾರಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕಾನೂನು ಸಲಹೆಯನ್ನು ಕೇಳಲಾಗಿದೆ ಎಂದಿದ್ದರು.

ಖಾಸಗಿ ಕಾಲೇಜುಗಳು ಈ ರೀತಿಯ ನಿರ್ಧಾರವನ್ನು ಯಾವ ಕಾರಣಕ್ಕೆ ತೆಗೆದುಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಇನ್ನು ಈ ಬಗ್ಗೆ ಮಾತುಕತೆ ನಡೆಸುವ ಸಲುವಾಗಿ ಈಗಾಗಲೇ ಖಾಸಗಿ ಕಾಲೇಜುಗಳ ಅಧಿಕಾರಗಳ ಸಭೆ ಕರೆಯಲಾಗಿದೆ. ಮಾತುಕತೆ ವೇಳೆ ಸೀಟು ಹಂಚಿಕೆ ವಿಚಾರದಲ್ಲಿ ಧನಾತ್ಮಕ ಪ್ರತಿಕ್ರಿಯೆಗಳು ಬರದಿದ್ದರೆ, ಕಾನೂನಾತ್ಮಕ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು ( ಪ್ರವೇಶ ಮತ್ತು ಶುಲ್ಕ ನಿರ್ಧಾರ) ಕಾಯ್ದೆ 2016ರ ಅಡಿಯಲ್ಲಿ ಕಾಲೇಜುಗಳ ಶುಲ್ಕವನ್ನು ಒಪ್ಪಂದಂತೆ ಅಥವಾ ಶುಲ್ಕ ನಿಗದಿಪಡಿಸುವ ಸಮತಿಯ ವರದಿಯಾಧಾರದಲ್ಲಿ ನಿಗದಿಪಡಿಸಲಾಗುತ್ತದೆ.

ಇನ್ನು ನೀಟ್ ಆದೇಶದಲ್ಲಿ ಈ ಹಿಂದಿದ್ದ ಒಪ್ಪಂದಗಳು ಮಾನ್ಯತೆಯಲ್ಲಿದೆಯೋ, ಇಲ್ಲವೋ ಎಂಬುದನ್ನು ಸ್ಪಷ್ಟನೆ ಪಡಿಸಿಲ್ಲ. ಪ್ರಸ್ತುತ ಖಾಸಗಿ ಕಾಲೇಜುಗಳು ತೆಗೆದುಕೊಂಡಿರುವ ನಿರ್ಧಾರಕ್ಕೆ ಶುಲ್ಕ ಪಟ್ಟಿಯಿಂದಲೇ ಆಗಿದೆ. ಒಂದು ವೇಳೆ ಖಾಸಗಿ ಕಾಲೇಜುಗಳು ಸಮಿತಿ ವರದಿಯಂತೆ ನಡೆಯಲು ತೀರ್ಮಾನಿಸಿದ್ದರೆ, ಸಮತಿಯ ವರದಿಯನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com