'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ಹೆಚ್ಚಿದ ಬೆಂಬಲ

ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, 'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ರಾಜ್ಯದಾದ್ಯಂತ ಸಾಕಷ್ಟು ಪ್ರತಿಕ್ರಿಯೆಗಳು...
ಮೆಟ್ಟಿಲು ಹತ್ತಿ ಪ್ರತಿಭಟಿಸುವ ಕಾರ್ಯಕ್ಕೆ ಸಾಹಿತಿ ಡಾ.ಎಸ್.ಎಲ್ ಭೈರಪ್ಪ, ಪ್ರಮೋದಾದೇವಿ ಹಾಗೂ ಯದುವೀರ್ ಅವರು ಚಾಲನೆ ನೀಡಿದ್ದರು.
ಮೆಟ್ಟಿಲು ಹತ್ತಿ ಪ್ರತಿಭಟಿಸುವ ಕಾರ್ಯಕ್ಕೆ ಸಾಹಿತಿ ಡಾ.ಎಸ್.ಎಲ್ ಭೈರಪ್ಪ, ಪ್ರಮೋದಾದೇವಿ ಹಾಗೂ ಯದುವೀರ್ ಅವರು ಚಾಲನೆ ನೀಡಿದ್ದರು.

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, 'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ರಾಜ್ಯದಾದ್ಯಂತ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ನಿನ್ನೆ ನಡೆದ 'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾ ದೇವಿ ಒಡೆಯರ್ ಅವರು ಬೆಂಬಲ ಸೂಚಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇದರಂತೆ ಬೆಟ್ಟದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಬಹು ಹಂತದ ಉದ್ಯಾನ ಕಟ್ಟಡಗಳು, ವಿಐಪಿ ಅತಿಥಿ ಗೃಹ, ವಿಶ್ರಾಂತಿ ನಿಲಯ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿತ್ತು. ಆದರೆ, ಸರ್ಕಾರದ ಈ ಯೋಜನೆಗೆ ರಾಜ್ಯದ ಹಲವು ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದರು.

ಇದರಂತೆ ನಿನ್ನೆ ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಚಾಮುಂಡಿ ಬೆಟ್ಟದ ಪಾದದಿಂದ ತುದಿಯವರಿಗೆ ಮೆಟ್ಟಿಲು ಏರಿ ಪ್ರತಿಭಟನೆ ನಡೆಸಿದ್ದರು. ಮೆಟ್ಟಿಲು ಹತ್ತಿ ಪ್ರತಿಭಟಿಸುವ ಕಾರ್ಯಕ್ಕೆ ಸಾಹಿತಿ ಡಾ.ಎಸ್.ಎಲ್ ಭೈರಪ್ಪ, ಪ್ರಮೋದಾದೇವಿ ಹಾಗೂ ಯದುವೀರ್ ಅವರು ಚಾಲನೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com