ಬೆಂಗಳೂರು: ಹಲವು ಜನರಿಗೆ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿತ್ತು

500 ಹಾಗೂ ಸಾವಿರ ರೂ ಮುಖಬೆಲೆಯ ನೋಟು ನಿಷೇಧದಿಂದಾಗಿ ಬೆಂಗಳೂರಿನಲ್ಲಿ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿ ಮಾರ್ಪಟ್ಟಿತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 500 ಹಾಗೂ ಸಾವಿರ ರೂ ಮುಖಬೆಲೆಯ ನೋಟು ನಿಷೇಧದಿಂದಾಗಿ ಬೆಂಗಳೂರಿನಲ್ಲಿ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿ ಮಾರ್ಪಟ್ಟಿತ್ತು.

ಸಾವಿರಾರು ಮಂದಿ ನೂರಾರು ಚಿನ್ನಾಭರಣ ಅಂಗಡಿಗೆ ತೆರಳಿ ತಾವು ಕೂಡಿಟ್ಟ ಹಣದಿಂದ ಆಭರಣ ಕೊಂಡುಕೊಳ್ಳಲು ಮುಗಿಬಿದ್ದರು. ಮಂಗಳವಾರ ರಾತ್ರಿ 8.30 ರಿಂದ ಬುಧವಾರ ಮಧ್ಯರಾತ್ರಿವರೆಗೂ ಹಲವು ಅಂಗಡಿಗಳಲ್ಲಿ ಚಿನ್ನಾಭರಣ ಖರೀದಿ ಜೋರಾಗಿ ನಡೆದಿತ್ತು.

ನಾನು ಮನೆಯಲ್ಲಿ 10 ಲಕ್ಷ ಹಣ ವಿಟ್ಟು ಕೊಂಡಿದ್ದೆ, ಹೀಗಾಗಿ 100 ಗ್ರಾಂ ಚಿನ್ನ ಖರೀದಿಸಿದೆ ಇದಕ್ಕಾಗಿ ನಾನು 3.5 ಲಕ್ಷ ಹಣ ನೀಡಿದ್ದೇನೆ. ಇದನ್ನು ಕೊಂಡು ಕೊಳ್ಳಲು ಬ್ಯಾಂಕ್ ವಿವರ, ಪ್ಯಾನ್ ಕಾರ್ಡ್ ನೀಡಿದ್ದೇನೆ ಎಂದು ಮಹಿಳೆಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

2 ಲಕ್ಷದವರೆಗೆ ಖರೀದಿಸಲು ಪ್ಯಾನ್ ಕಾರ್ಡ್ ಕಡ್ಡಾಯವಿಲ್ಲ, ಎಲ್ಲಾ ಹಣ ವರ್ಗಾವಣೆಗಳು ಕಾನೂನಾತ್ಮಕವಾಗಿಯೇ ನಡೆದಿವೆ. ಗ್ರಾಹಕರು ಹಿಂದು ಮಂದು ನೋಡದೇ ಶೇ.5ರಷ್ಟು ಹೆಚ್ಚಿನ ಹಣ ಪಾವತಿಸಿದ್ದಾರೆ ಎಂದು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ತಿಳಿಸಿದೆ.

ಸಾವಿರ ಐನೂರರ ನೋಟು ನಿಷೇಧ ಎಂದು ತಿಳಿದ ಮೇಲೆ ಬೆಂಗಳೂರಿನ ರಾಜಾ ಮಾರ್ಕೆಟ್ ನ ಹಲವು ಅಂಗಡಿಗಳು ಮುಚ್ಚಿದ್ದವು. ಹೀಗಾಗಿ ಹೆಚ್ಚಿನ ವ್ಯಾಪಾರ ನಡೆದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com