ಹಳೇ ನೋಟು ಹಿಡಿದು ರಕ್ತಕ್ಕಾಗಿ ಅಲೆದಾಟ: ಅಪಘಾತ ಸಂತ್ರಸ್ತ ಆಸ್ಪತ್ರೆಯಲ್ಲಿ ಸಾವು

ವಿಧಿ ಎಂಬುದು ಅಪಘಾತ ಸಂತ್ರಸ್ತರೊಬ್ಬರ ಜೀವನದಲ್ಲಿ ಕ್ರೂರಿಯಾಗಿದೆ. ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆಗಾಗಿ ತುರ್ತು ರಕ್ತದ ಅವಶ್ಯಕತೆಯಿತ್ತು,,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಿಧಿ ಎಂಬುದು ಅಪಘಾತ ಸಂತ್ರಸ್ತರೊಬ್ಬರ ಜೀವನದಲ್ಲಿ ಕ್ರೂರಿಯಾಗಿದೆ. ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆಗಾಗಿ ತುರ್ತು ರಕ್ತದ ಅವಶ್ಯಕತೆಯಿತ್ತು, ಆದರೆ 500 ರೂಪಾಯಿ ಹಳೆಯ ನೋಟು ಇದ್ದಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ರಾಜು ಎಂಬುವರು ಅಪಘಾತಕ್ಕೊಳಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತಾಗಿ ರಕ್ತದ ಅವಶ್ಯಕತೆಯಿತ್ತು. ಹೀಗಾಗಿ ಖಾಸಗಿ ರಕ್ತ ನಿಧಿಗೆ ತೆರಳಿದ್ದಾರೆ. ಆದರೆ ಸರ್ಕಾರ 500 ಮತ್ತು ಸಾವಿರದ ರೂಪಾಯಿ ನೋಟುಗಳನ್ನು ನಿಷೇಧ ಮಾಡಿರುವುದರಿಂದ ರಕ್ತ ನಿಧಿಯವರು ಹಳೇಯ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬೋರೇಟರಿ ಗಳು ಮಾತ್ರ 72 ಗಂಟೆಗಳಲ್ಲಿ ತಮ್ಮ ಬಳಿಯಿರುವ 500 ಹಾಗೂ 1.000 ನೋಟು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಖಾಸಗಿ ರಕ್ತ ನಿಧಿಗಳಿಗೆ ಈ ಅವಕಾಶ ನೀಡಿರಲಿಲ್ಲ.

ನೆಲಮಂಗಲ ಬಳಿಯ ದೊಡ್ಡಗುಟ್ಟೆ ಗ್ರಾಮದ ನಿವಾಸಿ ರಾಜು ಎಂಬುವರು ರಸ್ತೆ ದಾಟುವಾಗ ಅಪಘಾತಕ್ಕೊಳಗಾಗಿದ್ದರು. ಅವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ತೀವ್ರ ರಕ್ತಸ್ರಾವದಿಂದಾಗಿ ಸರಿಯಾದ ಸಮಯಕ್ಕೆ ರಕ್ತ ಸಿಗದೇ ಸಾವನ್ನಪ್ಪಿದ್ದಾರೆ.

ರಾಜುವಿಗೆ AB+ ರಕ್ತದ ಅವಶ್ಯಕತೆ ಇತ್ತು. ಅದಕ್ಕಾಗಿ ನಾವು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ತೆರಳಿದ್ದವು. ಅವರು 100 ರೂ ಇದ್ದರೆ ಮಾತ್ರ ರ್ಕತ ನೀಡುವುದಾಗಿ ಹೇಳಿದ್ದರು. ನಾವು ಡ್ರೈವಿಂಗ್ ಲೈಸೆನ್ಸ್ ಮತ್ತು ಇತರೆ ದಾಖಲೆಗಳನ್ನ ನೀಡಿ ರಕ್ತ ನೀಡುವಂತೆ ಕೇಳಿದೆವು. ಎರಡು ದಿನ ಅಲೆದರು ನಮಗೆ AB+ ರಕ್ತ ಸಿಗಲಿಲ್ಲ. ನಾವು ಉಮಾ ಟಾಕೀಸ್ ಹಾಗೂ ವಸಂತ ನಗರದ ಹಲವು ರಕ್ತ ನಿಧಿಗಳನ್ನು ಸಂಪರ್ಕಿಸಿದರು ಪ್ರಯೋಜನವಾಗಲಿಲ್ಲ. ಅಂದು ರಾತ್ರಿ ನಮಗೆ ಎಲ್ಲಿಯೂ AB+ ರಕ್ತ ನೀಡುವವರು ಸಿಗಲಿಲ್ಲ, ಆದರೆ ಮರು ದಿನ ಬೆಳಗ್ಗೆ ಹಳೇ ನೋಟುಗಳ ಸಮಸ್ಯೆ ಎದುರಾಯಿತು ಎಂದು ರಾಜು ಪತ್ನಿ ಸೌಮ್ಯ ತಿಳಿಸಿದ್ದಾರೆ.

ಅವರು AB+ ರಕ್ತಕ್ಕಾಗಿ ಕಾಯ್ದಿದ್ದು ನಿಜ, ಆದರೆ 500 ನೋಟಿನಿಂದಾಗಿ ರಕ್ತ ಸಿಗಲಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಆ ಗುಂಪಿನ ರಕ್ತ ಸಿಗುವುದು ತುಂಬಾ ಅಪರೂಪ. ಒಂದು ಬಾರಿ ರಕ್ತ ನೀಡಿದ ಮೇಲೆ ಅದು ರೋಗಿಯ ದೇಹದಲ್ಲಿ ಯಾವುದಾದರೂ ಅಡ್ಡ ಪರಿಣಾಮ ಬೀರುತ್ತದೆಯೇ ಎಂಬುದನ್ನು ನಾವು ಗಮನಿಸುತ್ತೇವೆ.ಅದರ ನಂತರವಷ್ಟೇ ಅಗತ್ಯವಿರುವಷ್ಟು ಪ್ರಮಾಣದ ರಕ್ತ ನೀಡುತ್ತೇವೆ. ಅವರು ನಾವು ನೀಡಿದ ರಕ್ತಕ್ಕಾಗಿ 2.400 ರೂ ಹಣ ನೀಡಬೇಕಿತ್ತು, ಆದರೆ ಮಾನವೀಯತೆಯಿಂದ ನಾವು ಹಣ ತೆಗೆದುಕೊಳ್ಳದೇ ರಕ್ತ ನೀಡಿದ್ದೇವೆ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ರಕ್ತ ನಿಧಿ ಮುಖ್ಯಸ್ಥ ಡಾ.ವಿ. ನಂದಕಿಶೋರ್ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com