ಬೆಂಗಳೂರು- ಮಂಗಳೂರು ರೈಲು ಪ್ರಯಾಣ ಒಂದೂವರೆ ಗಂಟೆ ಕಡಿತ

ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಬೆಂಗಳೂರಿನಿಂದ -ಮಂಗಳೂರಿನ ರೈಲು ಪ್ರಯಾಣದ ಸಮಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಬೆಂಗಳೂರಿನಿಂದ -ಮಂಗಳೂರಿನ ರೈಲು ಪ್ರಯಾಣದ ಸಮಯ ಒಂದೂವರೆ ಗಂಟೆ ಸಮಯ ಕಡಿತಗೊಳ್ಳಲಿದೆ.
 
ಶ್ರವಣ ಬೆಳಗೊಳ ಮತ್ತು ಹಾಸನ ನಡುವೆ ಹೊಸ ರೈಲು ಮಾರ್ಗ ಸಿದ್ಧಗೊಂಡಿದ್ದು ಶೀಘ್ರವೇ ಪ್ರಯಾಣಿಕರಿಗೆ ಅನುಕೂಲವಾಗಲಿದೆ. 1,300 ಕೋಟಿ ವೆಚ್ಚದ ಈ ಯೋಜನೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ  ಕನಸಿನ ಕೂಸಾಗಿದೆ. 1996-97ರ ಅವಧಿಯಲ್ಲಿ ಈ ಯೋಜನೆಗಾಗಿ ಅನುಮತಿ ಪಡೆದಿದ್ದರು. ರೈಲು ಸುರಕ್ಷತೆ  ಆಯುಕ್ತರು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿದರೇ ಈ ಮಾರ್ಗದ ಸಂಚಾರ ಆರಂಭಗೊಳ್ಳುತ್ತದೆ.

ಆರಂಭದಲ್ಲಿ ಹಣದ ಕೊರತೆ. ರೈಲ್ವೇ ಇಲಾಖೆ ಅನುಮತಿ, ಕುಣಿಗಲ್ ನಲ್ಲಿರುವ ವಿಜಯ ಮಲ್ಯ ಕುದುರೆ ಫಾರಂ, ರೈತರಿಂದ ಭೂಮಿ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.

ಬೆಂಗಳೂರಿನ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಿಂದ ಮಂಗಳೂರಿಗೆ  ಪ್ರಯಾಣಿಸಲು ಸುಮಾರು 11 ಗಂಟೆ 15 ನಿಮಿಷ ಸಮಯ ಬೇಕಾಗಿತ್ತು. ಈಗ ಸುಮಾರು 90 ನಿಮಿಷಗಳ ಸಮಯ ಕಡಿಮೆಯಾಗಲಿದೆ ಎಂದು ದಕ್ಷಿಣ ರೈಲ್ವೆ ವಿಭಾಗದ ಎಂ. ರವೀಂದ್ರ ನಾಥ ರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com