ಬೆಂಗಳೂರು: 10 ಲಕ್ಷ ಮೌಲ್ಯದ ಹಶೀಶ್ ವಶ, ಓರ್ವನ ಬಂಧನ

ವಿದೇಶಿ ಪ್ರಜೆಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು 10 ಲಕ್ಷ ಮೌಲ್ಯದ 1.9 ಕೆಜಿ ಹಶೀಶ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ವಿದೇಶಿ ಪ್ರಜೆಯನ್ನು ಬಂಧಿಸಿರುವ ಎನ್ ಸಿಬಿ ಅಧಿಕಾರಿಗಳು 10 ಲಕ್ಷ ಮೌಲ್ಯದ 1.9 ಕೆಜಿ ಹಶೀಶ್ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.

500 ಗ್ರಾಂಗಳ ಬ್ರಾಂಡೆಡ್ ಟೀ ಪೊಟ್ಟಣಗಳಲ್ಲಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಲಾಗಿತ್ತು. ಈ ಪ್ಯಾಕ್ ಗಳನ್ನು ಮಾಲ್ಡೀವ್ಸ್ ದೇಶಕ್ಕೆ ಕಳುಹಿಸಬೇಕಾಗಿತ್ತು. ಆದರೆ ಕೊರಿಯರ್ ಕಂಪನಿಗೆ ಅನುಮಾನ ಬಂದು ತೆರೆದು ನೋಡಿದ್ದಾರೆ. ಈ ಸಂಬಂಧ ಎನ್ ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಆಧಾರದ ಮೇಲೆ 28 ವರ್ಷದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಈ ಹಶೀಶ್ ಗಾಂಜಾ ಗಿಡಗಳಿಂದ ಪಡೆಯಲಾಗುತ್ತದೆ. ಇದು ದೇಹಕ್ಕೆ ಸೇರುವುದರಿಂದ ವ್ಯಕ್ತಿಯ ಮೆದುಳಿನ ನರಗಳು ದುರ್ಬಲಗೊಳ್ಳುತ್ತವೆ. ಜೊತೆಗೆ ಆರೋಗ್ಯದ ಮೇಲೂ ಗಂಬೀರ ಪರಿಣಾಮಗಳಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com