ಎಟಿಎಂಗಳಲ್ಲಿ 2 ಸಾವಿರ ರು ನೋಟುಗಳದ್ದೇ ಕಾರುಬಾರು: ಚಿಲ್ಲರೆಗಾಗಿ ಬೆಂಗಳೂರಿಗರ ಪರದಾಟ

500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 500, 1000 ನೋಟು ನಿಷೇಧದ ನಂತರ ಇತ್ತೀಚೆಗೆ ಎಟಿಎಂಗಳ ಮುಂದಿನ ಕ್ಯೂ ಕರಗುತ್ತಿದೆ, ಮೊದಲಿದ್ದಷ್ಟು ಕ್ಯೂ ಈಗ ಇಲ್ಲ, ಕರ್ನಾಟಕದಾದ್ಯಂತ ಒಟ್ಟು 16,929 ಎಟಿಎಂಗಳಿವೆ, ಅದರಲ್ಲಿ  ಕೇವಲ ಶೇ.70 ರಷ್ಟು ಎಟಿಎಂ ಗಳಲ್ಲಿ ಮಾತ್ರ ಹೊಸ ನೋಟುಗಳನ್ನು ಪಡೆಯಲು ಸಾಧ್ಯವಾಗುತ್ತಿದೆ.

ಅದರಲ್ಲಿ ಕೇವಲ ಶೇ. 20  ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ತುಂಬಲಾಗುತ್ತದೆ. ಇದರಿಂದ ಜನ ರೋಸಿ ಹೋಗುತ್ತಿದ್ದಾರೆ. ಕೆಲವೇ ಕೆಲವು ಎಟಿಎಂ ಗಳಲ್ಲಿ ಮಾತ್ರ 500 ಹಾಗೂ 100 ರು ನೋಟು ಸಿಗುತ್ತಿವೆ, ಉಳಿದಂತೆ ಎಲ್ಲಾ ಎಟಿಎಂ ಗಳಲ್ಲೂ 2 ಸಾವಿರ ರು ನೋಟುಗಳು ಮಾತ್ರ ಸಿಗುತ್ತಿವೆ. ಹೀಗಾಗಿ ಚಿಲ್ಲರೆಗಾಗಿ ಇನ್ನಿಲ್ಲದ ಪ್ರಯಾಸ ಪಡುವಂತಾಗಿದೆ.

ಬೆಂಗಳೂರಿನಲ್ಲಿ ನಮ್ಮ ಬ್ಯಾಂಕಿನ 861 ಎಟಿಎಂಗಳಿವೆ, ಅದರಲ್ಲಿ 600 ಎಟಿಎಂಗಳಿಗೆ ಮಾತ್ರ ಹಣ ತುಂಬಲು ಸಾಧ್ಯವಾಗಿದೆ, ಮಂಗಳವಾರ 350 ಎಟಿಎಂಗಳಲ್ಲಿ ಹಣ ಇತ್ತು, ಬುಧವಾರ ಕೇವಲ 190 ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯವಾಗಿತ್ತು. ಹಣದ ಅಭಾವ ತಲೆದೋರಿದೆ ಎಂದು ಪ್ರಸಿದ್ಧ ಬ್ಯಾಂಕ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ಅಷ್ಟುದ್ದ ಇದ್ದ ಕ್ಯೂಗಳು ಇಂದು ಇಲ್ಲ, ಮುಂದಿನ ದಿನಗಳಲ್ಲಿ ಈ ಎಲ್ಲಾ ತೊಂದರೆಗಳು ನಿವಾರಣೆಯಾಗಲಿವೆ ಎಂದು ಹೇಳಿದ್ದಾರೆ.

ಕಳೆದ ವಾರ ಎಟಿಎಂ ಮುಂದೆ ಸುಮಾರು 100 ಜನ ನಿಲ್ಲುತ್ತಿದ್ದರು, ಆದರೆ ಈಗ ಎಟಿಎಂ ಮುಂದೆ 20 ಮಾತ್ರ ಇರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com