ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಲ್ಲರೆ ಸಮಸ್ಯೆ: 500 ರು ಪೆಟ್ರೋಲ್ ತುಂಬಿಸಿಕೊಂಡವನ ಬೈಕ್ ಸುಟ್ಟು ಭಸ್ಮ

ನೋಟು ನಿಷೇಧ ಹಿನ್ನೆಲೆಯಲ್ಲಿ 500 ರು ನೋಟಿಗೆ ಚಿಲ್ಲರೆ ಸಿಗದ ಕಾರಣ ಬೈಕ್ ಸವಾರನೊಬ್ಬನ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿಯಲ್ಲಿ ...

ಕಲಬುರಗಿ: ನೋಟು ನಿಷೇಧ ಹಿನ್ನೆಲೆಯಲ್ಲಿ 500 ರು ನೋಟಿಗೆ ಚಿಲ್ಲರೆ ಸಿಗದ ಕಾರಣ ಬೈಕ್ ಸವಾರನೊಬ್ಬನ ಬೈಕ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಗ್ರಾಹಕನೊಬ್ಬ ತನ್ನ ಬೈಕ್ ಗೆ 300 ರು. ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ತೆರಳಿದ್ದಾನೆ. ಆದರೆ ಚಿಲ್ಲರೆ ಇಲ್ಲದ ಕಾರಣ ಬಂಕ್ ನವ್ರು ಆತನಿಗೆ 500 ರು ಗೂ ಪೆಟ್ರೋಲ್ ಹಾಕಿದ್ದಾರೆ. ಪೆಟ್ರೋಲ್ ಟ್ಯಾಂಕ್ ತುಂಬಿ ಹರಿದ ಕಾರಣ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆ. ಆದರೆ ಬೈಕ್ ಮಾತ್ರ ಸಂಪೂರ್ಣ ಭಸ್ಮವಾಗಿದೆ, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.

ಮೊದಲಿಗೆ ಸವಾರ 300 ರು ಗೆ ಪೆಟ್ರೋಲ್ ಹಾಕುವಂತೆ ಕೇಳಿದ್ದಾನೆ, ಆದರೆ ಬಂಕ್ ನವರು 200 ರು ಚಿಲ್ಲರೆ ಇಲ್ಲ . ಹೀಗಾಗಿ ಪೂರ್ತಿ 500. ರು ಹಣಕ್ಕೂ ಪೆಟ್ರೋಲ್ ಹಾಕಿಸಿಕೊಳ್ಳುವಂತೆ ಹೇಳಿದ್ದಾರೆ. ಇದಕ್ಕೆ ಬೈಕ್ ಸವಾರ ಕೂಡ ಒಪ್ಪಿದ್ದಾನೆ. ಟ್ಯಾಂಕ್ ನಿಂದ ಪೆಟ್ರೋಲ್ ಬಿಸಿಯಾಗಿದ್ದ ಎಂಜಿನ್ ಗೆ ಹರಿದು ಬೆಂಕಿ ಹೊತ್ತಿಕೊಂಡು ಇಡೀ ಬೈಕ್ ಸಂಪೂರ್ಣ ಭಸ್ಮವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೆಟ್ರೋಲ್ ಬಂಕ್ ನ ಕೆಲ ಭಾಗವು ಬೆಂಕಿಗೆ ಆಹುತಿಯಾಗಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com