ಕಿಡ್ನಾಪ್ ಆದ 15 ಗಂಟೆಗಳಲ್ಲೇ ಬಾಲಕನನ್ನು ರಕ್ಷಿಸಿದ ಬೆಂಗಳೂರು ಪೊಲೀಸರು

ಶನಿವಾರ ಬೆಳಗ್ಗೆ ಶಾಲೆಗೆ ಹೋಗುವಾಗ ದುಷ್ಕರ್ಮಿಗಳಿಂದ ಅಪಹೃತಗೊಂಡಿದ್ದ ಕೆ. ಆರ್ ಪುರಂ ನ 10 ವರ್ಷದ ಬಾಲಕನನ್ನು ಕೇವಲ 15 ಗಂಟೆಗಳಲ್ಲೇ ..
ಮಯಾಂಕ್ ಪಟೇಲ್
ಮಯಾಂಕ್ ಪಟೇಲ್
Updated on: 

ಬೆಂಗಳೂರು: ಶನಿವಾರ ಬೆಳಗ್ಗೆ ಶಾಲೆಗೆ ಹೋಗುವಾಗ ದುಷ್ಕರ್ಮಿಗಳಿಂದ ಅಪಹೃತಗೊಂಡಿದ್ದ ಕೆ. ಆರ್ ಪುರಂ ನ 10 ವರ್ಷದ ಬಾಲಕನನ್ನು ಕೇವಲ 15 ಗಂಟೆಗಳಲ್ಲೇ ಪೊಲೀಸರು ರಕ್ಷಿಸಿ ಕರೆ ತಂದಿದ್ದಾರೆ.

ಟಿಂಬರ್ ವ್ಯಾಪಾರಿ ಹರೇಶ್ ಪಟೇಲ್ ಪುತ್ರ ಮಯಾಂಕ್ ಪಟೇಲ್ ನನ್ನು ಆಂಧ್ರಪ್ರದೇಶ ಪಲಮನೇರುವಿನಲ್ಲಿ ಪೊಲೀಸರು ರಕ್ಷಿಸಿದ್ದಾರೆ, ಜೊತೆಗೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಮೂಲಕ ಹರೇಶ್ ಪಟೇಲ್ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಾಯಾಂಕ್‌, ತಾತನ ಜತೆ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ತಾತನನ್ನು ಕೆಳಗೆ ತಳ್ಳಿ ಮಾಯಾಂಕ್‌ನನ್ನು ಕಾರಿನಲ್ಲಿ ಎಳೆದುಕೊಂಡು ಪರಾರಿ ಯಾಗಿದ್ದರು. ಗಾಬರಿಗೊಂಡ ತಾತ ದಾಹಿಯಾಬಾಯಿ ಕೂಡಲೇ ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದರು, ನಂತರ ಮಯಾಂಕ್ ಚಿಕ್ಕಪ್ಪ ಪುರುಷೋತ್ತಮ್ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಕಲಿಸಿಕೊಂಡ ಪೊಲೀಸರು ನಾಲ್ಕು ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು 15 ಗಂಟೆಗಳಲ್ಲೇ ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com