ಶನಿವಾರಸಂತೆ ಸರ್ವಿಸ್ ಸ್ಟೇಷನ್ ನಲ್ಲಿ ಕೊಲೆ: ಮೂವರು ಆರೋಪಿಗಳ ಬಂಧನ

ಕಾರು ಸರ್ವಿಸ್ ನೆಪದಲ್ಲಿ ವ್ಯಕ್ತಿಯನ್ನು ಗುಂಡಿಕ್ಕಿ ಸಾಯಿಸಿದ ಸರ್ವಿಸ್ ಸ್ಟೇಷನ್ ಮಾಲಿಕ ಅಬ್ದುಲ್ ...
ಉದ್ರಿಕ್ತ ಜನರ ಗುಂಪು ಆರೋಪಿ ಅಬ್ದುಲ್ ರಾಬುಗೆ ಸೇರಿದ ಮನೆ, ಸರ್ವಿಸ್ ಸ್ಟೇಷನ್ ಗೆ ಬೆಂಕಿ ಹಚ್ಚಿರುವುದು.
ಉದ್ರಿಕ್ತ ಜನರ ಗುಂಪು ಆರೋಪಿ ಅಬ್ದುಲ್ ರಾಬುಗೆ ಸೇರಿದ ಮನೆ, ಸರ್ವಿಸ್ ಸ್ಟೇಷನ್ ಗೆ ಬೆಂಕಿ ಹಚ್ಚಿರುವುದು.
ಶನಿವಾರಸಂತೆ: ಕಾರು ಸರ್ವಿಸ್ ನೆಪದಲ್ಲಿ ವ್ಯಕ್ತಿಯನ್ನು ಗುಂಡಿಕ್ಕಿ ಸಾಯಿಸಿದ ಸರ್ವಿಸ್ ಸ್ಟೇಷನ್ ಮಾಲಿಕ ಅಬ್ದುಲ್ ರಾಬು, ಆತನ ಪತ್ನಿ ಶಾಜಿದಾ ಮತ್ತು ಸೋದರ ಅಕ್ರಂ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.
45 ವರ್ಷದ ಶೇಖರ್ ಮಡಿಕೇರಿ ಸಮೀಪ ಶನಿವಾರ ಸಂತೆಯ ಗುಂಡು ರಾವ್ ಲೇ ಔಟ್ ನಲ್ಲಿ ಮರದ ವ್ಯಾಪಾರಿಯಾಗಿದ್ದು, ನಿನ್ನೆ ಆಯುಧ ಪೂಜೆ ಹಿನ್ನೆಲೆಯಲ್ಲಿ ಅಬ್ದುಲ್ ರಾಬುವಿನ ಸರ್ವಿಸ್ ಸ್ಟೇಷನ್ ನಲ್ಲಿ ಗಾಡಿ ತೊಳೆಯಲೆಂದು ಬಿಟ್ಟಿದ್ದರು. 
ಸ್ವಲ್ಪ ಹೊತ್ತು ಬಿಟ್ಟು ಶೇಖರ್ ಬಂದು ನೋಡುವಾಗ ಕಾರು ತೊಳೆದು ರೆಡಿಯಾಗಿರಲಿಲ್ಲ.ಇಬ್ಬರ ನಡುವೆ ವಾಗ್ದಾಳಿ ನಡೆಯಿತು. ಆಗ ಅಬ್ದುಲ್ ತನ್ನ ಮನೆಯಲ್ಲಿದ್ದ ರಿವಾಲ್ವರನ್ನು ತೆಗೆದು ಶೇಖರ್ ರತ್ತ ಐದು ಸುತ್ತು ಗುಂಡು ಹಾರಿಸಿದರು. ಇದರಿಂದ ಶೇಖರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
ಘಟನೆಯಿಂದ ಕೋಪೋದ್ರಿಕ್ತರಾದ ಸ್ಥಳೀಯರು ಅಬ್ದುಲ್ ರಾಬು ಮನೆ ಬಳಿ ಜಮಾಯಿಸಿ ಆತನ ಮನೆ ಮತ್ತು ಸರ್ವಿಸ್ ಸ್ಟೇಷನ್, ಕಾರು ಮತ್ತು ಎರಡು ಬೈಕುಗಳಿಗೆ ಬೆಂಕಿ ಹಚ್ಚಿದ್ದಾರೆ. 
ವಿಷಯ ಪೊಲೀಸರಿಗೆ ತಲುಪಿದಾಗ ಪೊಲೀಸ್ ಸೂಪರಿಂಟೆಂಡೆಂಟ್ ರಾಜೇಂದ್ರ ಪ್ರಸಾದ್ ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಮುಖ ಆರೋಪಿ ಅಬ್ದುಲ್ ರಾಬು, ಆತನ ಪತ್ನಿ ಶಾಜಿದಾ ಮತ್ತು ಸೋದರ ಅಕ್ರಂ ಪಾಷಾನನ್ನು ಬಂಧಿಸಿ ಸೋಮವಾರ ಪೇಟೆ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರಿಗೆ 15 ದಿನಗಳ ಕಾಲ ಬಂಧನಕ್ಕೊಳಪಡಿಸಿದೆ.
ಪೊಲೀಸರು ಪ್ರಮುಖ ಆರೋಪಿಯ ಮತ್ತೊಬ್ಬ ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶನಿವಾರ ಸಂತೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com