ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬೀಳಲಿದೆ ಬ್ರೇಕ್!

ಬಡವರ ಪಾಲಿಗೆ ಇದ್ದೂ ಇಲ್ಲದಂತಿದ್ದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಇನ್ನು ಮುಂದೆ ಸುಲಭವಾಗಲಿದ್ದು, ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕಲು ಶಾಸನ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಆರೋಗ್ಯ ಸಚಿವ ರಮೇಶ್ ಕುಮಾರ್ (ಸಂಗ್ರಹ ಚಿತ್ರ)
ಆರೋಗ್ಯ ಸಚಿವ ರಮೇಶ್ ಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಬಡವರ ಪಾಲಿಗೆ ಇದ್ದೂ ಇಲ್ಲದಂತಿದ್ದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಇನ್ನು ಮುಂದೆ ಸುಲಭವಾಗಲಿದ್ದು, ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕಲು ಶಾಸನ ಜಾರಿಗೆ  ತರುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವನಾದ ಬಳಿಕ ನಾನು ಸಾಕಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಈ ವೇಳೆ ಸಾಕಷ್ಟು ನೊಂದ ಜನರ ಆಸ್ಪತ್ರೆಗಳ ದುಬಾರಿತನದ ಕುರಿತು  ದೂರಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗಳ ದುಬಾರಿತನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಶಾಸನವನ್ನು ಜಾರಿಗೆ ತರುವುದಾಗಿ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳ ದುಬಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಕುಮಾರ್ ಅವರು, ಸಚಿವನಾದ ಬಳಿಕ ಸಾಕಷ್ಟು ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಹಲವು ಮಾಹಿತಿಗಳು ಬೆಳಕಿಗೆ ಬಂದಿದ್ದು, ಬಡವರು ಎನ್ನದೇ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಸಣ್ಣ ಪುಟ್ಟ ಚಿಕಿತ್ಸೆಗೂ ದುಬಾರಿ ಸ್ಕ್ಯಾನಿಂಗ್  ಮಾಡಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಖಂಡಿತ  ರಾಜ್ಯ ಸರ್ಕಾರಕ್ಕೆ ಗೌರವ ಸಿಗುವುದಿಲ್ಲ ಎಂದು ಹೇಳಿದರು.

 "ಖಾಸಗಿ ಆಸ್ಪತ್ರೆಗಳಲ್ಲಿ ತೆರಿಗೆದಾರರ ಕೊಡುಗೆ ಇಲ್ಲವೇ. ಆಸ್ಪತ್ರೆಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ನೀಡಿರುವುದು ತೆರಿಗೆದಾರರ ಹಣದಿಂದಲ್ಲವೇ. ಹೀಗಿರುವಾಗ ಸಂಪೂರ್ಣ ಖಾಸಗಿ  ಎನ್ನುವುದು ತಪ್ಪು. ಸಂಪೂರ್ಣ ಖಾಸಗಿ ಎನ್ನುವುದಾದರೆ ಅಂತಹವರಿಗೆ ಕರ್ನಾಟಕದಲ್ಲಿ ಜಾಗವಿಲ್ಲ ಎಂದು ಗುಡುಗಿದರು.

ಖಾಸಗಿ ಆಸ್ಪತ್ರೆಗಳ ದುಬಾರಿ ತನಕ್ಕೆ ಬ್ರೇಕ್ ಹಾಕಲು ಶಾಸನ

ಇದೇ ವೇಳೆ ಶಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ದುಬಾರಿ ತನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈಗಿರುವ ಆರೋಗ್ಯ ಶಾಸನಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ರಮೇಶ್  ಕುಮಾರ್ ಹೇಳಿದರು. ನ್ಯಾಯಮೂರ್ತಿ ವಿಕ್ರಮ್ ಜೀತ್ ಸೇನ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ದುಬಾರಿತನದ  ಕುರಿತು ಪರಿಶೀಲನೆ ನಡೆಸಿ 8 ವಾರಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ವೈದ್ಯಕೀಯ ಸೇವೆಗೆ ದರ ನಿಗದಿ ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಸಮಿತಿ ನೀಡಲಿದೆ.

ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕಾಯ್ದೆಗೆ ತಿದ್ದುಪಡಿ ತಂದು ಶಾಸನ ಜಾರಿಗೆ ತರಲಾಗುತ್ತದೆ. ಶಾಸನ ಜಾರಿಯಾದ ಬಳಿಕವೂ ಇದು ಮುಂದವರೆದರೆ ಅಂತಹ ಸಂಸ್ಥೆಗಳ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com