ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಲ್ಲದೆ ಆರು ಯುವತಿಯರನ್ನು ರಕ್ಷಿಸಿದ್ದಾರೆ..ಹೆಚ್‌ಎಎಲ್ ೩ನೇ ಹಂತದ ೧೦ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬೊಮ್ಮನಹಳ್ಳಿಯ ಜಯಂತ್ ಶೆಟ್ಟಿ (೨೭) ಉತ್ತರಾಖಂಡ್‌ನ ದೀರಜ್ ಶರ್ಮ (೨೪) ಜಯನಗರ ೧ನೇ ಬ್ಲಾಕ್‌ನ ಜಾಫರ್‌ಚಾಂದೆವಾಲಾ(೩೮) ಚೆನ್ನೈನ ರಾಜೇಶ್‌ಕುಮಾರ್(೨೭ ) ನಮಕ್ಕಲ್‌ನ ಅರುಣ್‌ಎನ್(೩೩) ಸೋಮೇಶ್ವರನಗರದ ಮುಜಾಮಿಲ್(೩೯)ಅಹಮದಾಬಾದ್‌ನ ವಾಸು(೫೦) ಎಂಬುವವರನ್ನು ಬಂಧಿಸಲಾಗಿದೆ..ಬಂಧಿತ ಆರೋಪಿಗಳಿಂದ ೯೪,೭೦೦ ರುಪಾಯಿ ನಗದು ಹಾಗೂ ಆರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಕೋಲ್ಕತ್ತಾ ಮೂಲದ ಆರು ಯುವತಿಯರನ್ನು ರಕ್ಷಿಸಿದ್ದಾರೆ. .ಆರೋಪಿಗಳು ಬೇರೆ ರಾಜ್ಯಗಳಿಂದ ಉದ್ಯೋಗದ ನೆಪದಲ್ಲಿ ಯುವತಿಯರನ್ನು ಕರೆತಂದು ಮಸಾಜ್ ಪಾರ್ಲರ್‌ನಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದ್ದು ಆರೋಪಿಗಳ ವಿರುದ್ದ ಜಗಜೀವನರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ