"ಬಂದ್"ಳೂರು; ಕರ್ನಾಟಕ ಬಂದ್ ಗೆ ಬಯೋಕಾನ್ ಮುಖ್ಯಸ್ಥೆ ವ್ಯಂಗ್ಯ

ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು, ಬಂದ್ ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಕಿಡಿಕಾರಿದ್ದಾರೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ವಿವಾದಿತ ಟ್ವೀಟ್ (ಟ್ವಿಟರ್ ಚಿತ್ರ)
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ವಿವಾದಿತ ಟ್ವೀಟ್ (ಟ್ವಿಟರ್ ಚಿತ್ರ)

ಬೆಂಗಳೂರು: ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು,  ಬಂದ್ ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕಿರಣ್ ಮಜುಂದಾರ್ ಅವರು, ಬೆಂಗಳೂರನ್ನು "ಬಂದಳೂರು" ಎಂದು ವ್ಯಂಗ್ಯ ಮಾಡಿದ್ದಾರೆ. "ಮತ್ತೊಂದು ಬಂದ್... ಬೆಂಗಳೂರು  ಬಂದಳೂರಾಗಿ ಬದಲಾಗುತ್ತಿದೆ. ಪದೇ ಪದೇ ಬಂದ್ ಮಾಡುವ ಮೂಲಕ ಉತ್ಪಾದನಾ ಕ್ಷೇತ್ರದ ಮೆಲೆ ಗಂಭೀರ ಪರಿಣಾಮ ಬೀರುತ್ತದೆ. ಉಭಯ ರಾಜ್ಯಗಳ ರೈತರೂ ಸಂಕಷ್ಟದಲ್ಲಿದ್ದಾರೆ.  ಎಂತಹ ಸಂಕಷ್ಟಸ್ಥಿತಿ.. ಎಂದು ಕಿರಣ್ ವ್ಯಂಗ್ಯವಾಡಿದ್ದಾರೆ.

ಕಿರಣ್ ಮಜುಂದಾರ್ ಅವರ ಈ ಟ್ವೀಟ್ ಸುದ್ದಿಯಾಗುತ್ತಿದ್ದಂತೆಯೇ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಿರಣ್ ಅವರ ನಡೆ ಇದೀಗ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com