ಕಾವೇರಿ ನದಿ ನೀರು ವಿವಾದ: ಸೆ.15 ರಂದು ರಾಜ್ಯದಲ್ಲಿ ರೈಲು ಬಂದ್ ಗೆ ಕರೆ

ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಕನ್ನಡ ಪರ ಸಂಘಟನೆಗಳು ಸೆ.15 ರಂದು ಕರ್ನಾಟಕದಲ್ಲಿ ರೈಲು ಬಂದ್ ನಡೆಸಲು...
ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್
ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್

ಮಂಡ್ಯ: ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಕನ್ನಡ ಪರ ಸಂಘಟನೆಗಳು ಸೆ.15 ರಂದು ಕರ್ನಾಟಕದಲ್ಲಿ ರೈಲು ಬಂದ್ ನಡೆಸಲು ಕರೆ ನೀಡಿವೆ.

ಇದೇ ಗುರುವಾರ ರಾಜ್ಯದಲ್ಲಿ ರೈಲು ಬಂದ್ ಗೆ ಕರೆ ನೀಡಲಾಗಿದ್ದು, ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ.

ಕಾವೇರಿ ಮತ್ತು ಮಹಾದಾಯಿ ವಿವಾದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಬೇಕಿದ್ದು, ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ಗುರುವಾರ ರೈಲು ಬಂದ್ ಆಚರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೆಆರ್'ಎಸ್ ಸಾರ್ವಜನಿಕ ವೀಕ್ಷಣೆ ಸ್ಥಗಿತ
ಕಾವೇರಿ ವಿವಾದ ಕುರಿತಂತೆ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯ ಸಾರ್ವಜನಿಕ ವೀಕ್ಷಣೆಯನ್ನು ಸ್ಥಗಿತಗೊಳಿಸಲಾಗಿದೆ. ಸೆಪ್ಟೆಂಬರ್ 14 ರವಗೂ ಕೆಆರ್ ಮತ್ತು ಬೃಂದಾವನ ಗಾರ್ಡನ್ ಬಳಿ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com