ಓಣಂ ಪ್ರಯುಕ್ತ ಬೆಂಗಳೂರಿನಿಂದ ಕೇರಳಕ್ಕೆ 2 ವಿಶೇಷ ರೈಲು ಸಂಚಾರ

ಕರ್ನಾಟಕ ಸರ್ಕಾರದ ತುರ್ತು ಮನವಿ ಮೇರೆಗೆ ಓಣಂ ಹಬ್ಬದ ಪ್ರಯುಕ್ತ ಮಂಗಳವಾರ ರೈಲ್ವೆ ನಿಗಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಸರ್ಕಾರದ ತುರ್ತು ಮನವಿ ಮೇರೆಗೆ ಓಣಂ ಹಬ್ಬದ ಪ್ರಯುಕ್ತ ಮಂಗಳವಾರ ರೈಲ್ವೆ ನಿಗಮ ಬೆಂಗಳೂರಿನಿಂದ ಕೇರಳಕ್ಕೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. 
ಯಶವಂತಪುರದಿಂದ ಕಣ್ಣನ್ನೂರಿಗೆ ತೆರಳುವ ವಿಶೇಷ ರೈಲು(ರೈಲು ಸಂಖ್ಯೆ 06527) ಇಂದು ಸಂಜೆ 6.50ಕ್ಕೆ ಯಶವಂತಪುರದಿಂದ ಹೊರಟು ಧರ್ಮಪುರಿ, ಸೇಲಂ, ಕೊಯಂಬತ್ತೂರು ಮತ್ತು ತಿರೂರು ಆಗಿ ಕಣ್ಣನ್ನೂರು ತಲುಪಲಿದೆ. ಕಣ್ಣೂರಿನಿಂದ ಹುಬ್ಬಳ್ಳಿಗೆ(ರೈಲು ಸಂಖ್ಯೆ 06528) ರೈಲು ನಾಳೆ ಬೆಳಗ್ಗೆ 11 ಗಂಟೆಗೆ ಕಣ್ಣನ್ನೂರಿನಿಂದ ಹೊರಡುವ ರೈಲು ತಿರೂರು, ಕೊಯಂಬತ್ತೂರು, ಧರ್ಮಪುರಿ, ಯಶವಂತಪುರ, ಅರಸೀಕೆರೆ, ದಾವಣಗೆರೆ ಮತ್ತು ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ ತಲುಪಲಿದೆ.
ಜನಸಾಧಾರಣ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06525/ 06526) ನಗರದ ಕಂಠೀರವ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ತಿರುವನಂತಪುರಕ್ಕೆ ಸಂಚರಿಸಲಿದೆ. ಅದು ಇಂದು ಬೆಳಗ್ಗೆ 11.15ಕ್ಕೆ ನಗರ ರೈಲು ನಿಲ್ದಾಣದಿಂದ ಧರ್ಮಪುರಿ, ಕೊಯಂಬತ್ತೂರು, ತ್ರಿಶೂರು, ಕ್ವಿಲ್ಲೊನ್ ಮತ್ತು ಕೊಚುವೆಲಿಯಾಗಿ ತಿರುವನಂತಪುರ ತಲುಪಲಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ತಿರುವನಂತಪುರ ರೈಲು ನಿಲ್ದಾಣದಿಂದ ಹೊರಟು ಕೊಚುವೆಲಿ, ಕ್ವಿಲಾನ್, ಎರ್ನಾಕುಲಂ, ತ್ರಿಶೂರು, ಕೊಯಂಬತ್ತೂರು ಮತ್ತು ಧರ್ಮಪುರಿಯಾಗಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com