ಬೆಂಗಳೂರು: ರಾಜ್ಯ ಹಾಗೂ ನಗರದಲ್ಲೆಡೆ ನೀರಿನ ಅಭಾವ ಉಂಟಾಗಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಸೆಪ್ಟಂಬರ್ 20 ಕ್ಕೆ ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳ ಮಟ್ಟ ಶೇ.25ಕ್ಕೆ ಇಳಿಯಲಿದೆ.
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿಯ ಮಳೆ ಅತ್ಯಂತ ಕಡಿಮೆ ಮಟ್ಟದಲ್ಲಾಗಿದ್ದು, ಈ ಬಾರಿ ಜಲಾಶಯಗಳ ಮಟ್ಟ ಶೇ.50 ಕ್ಕೂ ತಲುಪಿಲ್ಲ. ಇದರ ಬೆನ್ನಲ್ಲೇ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಖ್ಯಾತೆ ತೆಗೆದಿದೆ. ಸಂಕಷ್ಟದ ಮಧ್ಯೆಯೂ ಸುಪ್ರೀಂ ಆದೇಶದಂತೆ ರಾಜ್ಯ ಸರ್ಕಾರ ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ಕ್ಕೆ ರಾಜ್ಯದ ಪ್ರಮುಖ ನಾಲ್ಕು ಜಲಾಶಯಗಳ ಮಟ್ಟ ಶೇ.25ಕ್ಕೆ ಇಳಿಯಲಿದೆ. ಪರಿಣಾಮ ಬೆಂಗಳೂರು, ಮೈಸೂರು ಮತ್ತು ಚಾಮರಾಜನಗರಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯ ಅವರು ನೀರಿನ ಕೊರತೆ ಕುರಿತಂತೆ ಹೇಳಿಕೆಯೊಂದನ್ನು ನೀಡಿದ್ದರು. ಕೃಷಿಯನ್ನು ರಕ್ಷಿಸುವುದಕ್ಕಾಗಿ ಕೃಷಿ ಕ್ಷೇತ್ರಕ್ಕೆ ನೀರನ್ನು ಬಿಡುವುದಾಗಿ ಹೇಳಿದ್ದರು. ಅಲ್ಲದೆ, ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜನರಿಗೆ ಕುಡಿಯುವ ನೀರಿಗಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಿದ್ದರು.
Advertisement