ಬೆಂಗಳೂರು: ನವ ವಿವಾಹಿತೆ ಸಾಪ್ಟ್ ವೇರ್ ಎಂಜನೀಯರ್ ಶವವಾಗಿ ಪತ್ತೆ
ಬೆಂಗಳೂರು: 25 ವರ್ಷದ ಸಾಫ್ಟ್ ವೇರ್ ಎಂಜನೀಯರ್ ಮಹಿಳೆಯೊಬ್ಬರು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವಿದ್ಯಾರಣ್ಯಾಪುರದ ಸುಮಧುರ ಅಪಾರ್ಟ್ ಮೆಂಟ್ ನಲ್ಲಿ ತೇಜಸ್ವಿನಿ ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತೇಜಸ್ವಿನಿಗೆ ಆರು ತಿಂಗಳ ಹಿಂದೆ ದೇವರಾಜ್ ಎಂಬುವರ ಜೊತೆ ವಿವಾಹವಾಗಿತ್ತು.
ಶುತಕ್ರವಾರ ಬೆಳಗ್ಗೆ ತೇಜಸ್ವಿನಿ ತಂದೆ ಆಕೆಗೆ ಕರೆ ಮಾಡಿದ್ದಾರೆ. ಆದರೆ ಮಗಳು ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ತೇಜಸ್ವಿನಿ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು ಎಂದು ಹೇಳಿ ಅವರು ದೂರು ದಾಖಲಿಸಿದ್ದಾರೆ ಎಂದು ಕೊಡಿಗೆ ಹಳ್ಳಿ ಪೊಲೀಸರು ತಿಳಿಸಿದ್ದಾರೆ.
ತೇಜಸ್ವಿನಿ ಬಿಇ ಮುಗಿಸಿ ಬೆಂಗಳೂರಿನ ಪಿಲಿಪ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಮಾಟ್ರಿಮೊನಿಯಲ್ಲಿ ಆಕೆ ಫೋಟೋ ನೋಡಿದ ದೇವರಾಜು, ಅವರ ಮನೆಗೆ ಹೋಗಿ ಹೆಣ್ಣು ಕೇಳಿದ್ದ. ಹುಡುಗ ಕೂಡ ಒಳ್ಳೆ ಕೆಲಸದಲ್ಲಿರೊದ್ರಿಂದ ಮದ್ವೆ ಮಾಡಿಕೊಟಿದ್ರು.
ಮದುವೆಯಾಗಿ ಆರು ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ತೇಜಸ್ವಿನಿ, ದೇವರಾಕ್ ದಾಂಪತ್ಯದಲ್ಲಿ ಬಿರುಕು ಕಂಡಿತ್ತು. ಚೆನೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ದೇವರಾಜು ಮದುವೆ ಬಳಿಕ ಬ್ಯುಸಿನೆಸ್ ಮಾಡ್ತಿನಿ ಅಂತಾ ಓಡಾಡ್ತಿದ್ದ. ಅದಕ್ಕೆ ಹೆಂಡತಿ ತೇಜಸ್ವಿನಿಗೆ ಹಣಕ್ಕಾಗಿ ಪೀಡಿಸುತ್ತಿದ್ದು, ಹಣ ತರದಿದ್ರಿಂದ ಪತಿ ದೇವರಾಜು ಕೊಲೆ ಮಾಡಿದ್ದಾನೆ ಅಂತಾ ಮೃತ ತೇಜಸ್ವಿನಿ ಪೋಷಕರು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ