ಕಾವೇರಿ ವಿವಾದ: ಕರ್ನಾಟಕ ಸರ್ಕಾರ ವಜಾಗೊಳಿಸಿ, ಕಾವೇರಿ ಮಂಡಳಿ ರಚಿಸಲು ತಮಿಳುನಾಡು ರೈತರ ಒತ್ತಾಯ

ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳು ನಾಡಿಗೆ ಸೆಪ್ಟೆಂಬರ್ 27ರವರೆಗೆ 6 ಸಾವಿರ ಕ್ಯೂಸೆಕ್ ನೀರು....
ತಿರುಚಿಯಲ್ಲಿ ಕಾವೇರಿ ನದಿ ತೀರದಲ್ಲಿ ನಿಂತು ಪ್ರತಿಭಟನೆ ನಡೆಸಿದ ದೇಸೀಯ ತೆನಿಂದಿಯ ನಾದಿಗಲ್ ಇನೈಪ್ಪು ವಿವಸಾಯಿಗಲ್ ಸಂಗಮ್ ರೈತರು
ತಿರುಚಿಯಲ್ಲಿ ಕಾವೇರಿ ನದಿ ತೀರದಲ್ಲಿ ನಿಂತು ಪ್ರತಿಭಟನೆ ನಡೆಸಿದ ದೇಸೀಯ ತೆನಿಂದಿಯ ನಾದಿಗಲ್ ಇನೈಪ್ಪು ವಿವಸಾಯಿಗಲ್ ಸಂಗಮ್ ರೈತರು
Updated on: 
ತಿರುಚಿ: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳು ನಾಡಿಗೆ ಸೆಪ್ಟೆಂಬರ್ 27ರವರೆಗೆ 6 ಸಾವಿರ ಕ್ಯೂಸೆಕ್ ನೀರು ಬಿಡುವುದಿಲ್ಲವೆಂದು ಕರ್ನಾಟಕ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ತಮಿಳು ನಾಡಿನಲ್ಲಿ ಕಾವೇರಿ ನದಿ ತೀರದ ಪ್ರದೇಶಗಳ ರೈತರು ಪ್ರತಿಭಟನೆಗಿಳಿದಿದ್ದಾರೆ.
ರೈತರ ಗುಂಪೊಂದು ಇಂದು ಬೆಳಗ್ಗೆ ಶ್ರೀರಂಗಂ ಹತ್ತಿರ ಕಾವೇರಿ ನದಿ ತೀರದಲ್ಲಿ ಸಾಲಾಗಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ.
''ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧವಾಗಬೇಕೆಂದು ಕರ್ನಾಟಕಕ್ಕೆ ಆದೇಶ ನೀಡುವ ಬದಲು ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮೌನ ತಾಳುತ್ತಿದೆ. ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು, ನೀರು ಬಿಡುವ ವಿಚಾರ ಕುರಿತ ನಿರ್ವಹಣೆಯನ್ನು ಸ್ವತಂತ್ರ ಸಂಸ್ಥೆ ಮಾಡಿದರೆ ಇಂತಹ ವಿವಾದವನ್ನು ಬಗೆಹರಿಸಬಹುದು. ಕಾವೇರಿ ನಿರ್ವಹಣಾ ಮಂಡಳಿ ತಮಿಳು ನಾಡಿನ ರೈತರ ಹಕ್ಕುಗಳನ್ನು ಕಾಪಾಡಲಿದೆ ಎಂಬ ವಿಶ್ವಾಸ ನಮಗಿದೆ ಎಂದು ದೇಸೀಯ ತೆನಿಂದಿಯ ನಾದಿಗಲ್ ಇನೈಪ್ಪು ವಿವಸಾಯಿಗಲ್ ಸಂಗಮ್ (ದಕ್ಷಿಣ ಭಾರತದ ನದಿಗಳನ್ನು ಜೋಡಿಸುವ ರೈತರ ಒಕ್ಕೂಟ) ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿದ್ದಾರೆ.
ಕರ್ನಾಟಕ, ತಮಿಳು ನಾಡಿನ ನದಿ ಮುಖಜ ಭೂಮಿ ಜಿಲ್ಲೆಗಳಿಗೆ ಕಾವೇರಿ ನೀರು ಹರಿಯದಂತೆ ತಡೆಯುತ್ತದೆ. ಇದರಿಂದ ರೈತರಿಗೆ ಬೆಳೆ ಬೆಳೆಯಲು ನೀರು ಸಾಕಾಗುವುದಿಲ್ಲ, ಹಾಗಾಗಿ ಕೇಂದ್ರ ಸರ್ಕಾರ ಆದಷ್ಟು ಶೀಘ್ರವೇ ಮಂಡಳಿಯನ್ನು ರಚನೆ ಮಾಡಬೇಕು. ಮಂಡಳಿಯನ್ನು 4 ವಾರಗಳೊಳಗೆ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದರು.
ಕರ್ನಾಟಕ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆ ವಿರುದ್ಧ ಕೆಲಸ ಮಾಡುತ್ತಿದ್ದು, ಸುಪ್ರೀಂ ಕೋರ್ಟ್ ಆದೇಶ ಪಾಲಿಸದೇ ಇರಲು ಸಂವಿಧಾನ ಪರಿಚ್ಛೇದ 356ನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಪ್ರತಿಭಟನೆ ನಡೆಸುತ್ತಿದ್ದ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com