ವಾಹನ ಮಾಲೀಕರಿಗೆ ಶಾಕ್; ನೋ ಪಾರ್ಕಿಂಗ್ ಗೆ ದಂಡ ಮೂರು ಪಟ್ಟು ಹೆಚ್ಚಳ!

ವಾಹನ ಮಾಲೀಕರಿಗೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದು, ಇನ್ನು ಮುಂದೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವ ಮಾಲೀಕರು ಮೂರು ಹೆಚ್ಚು ದಂಡ ಪಾವತಿ ಮಾಡಬೇಕಿದೆ.
ನೋ ಪಾರ್ಕಿಂಗ್ ಟೋಯಿಂದ್ ವಾಹನ (ಸಂಗ್ರಹ ಚಿತ್ರ)
ನೋ ಪಾರ್ಕಿಂಗ್ ಟೋಯಿಂದ್ ವಾಹನ (ಸಂಗ್ರಹ ಚಿತ್ರ)

ಬೆಂಗಳೂರು: ವಾಹನ ಮಾಲೀಕರಿಗೆ ಸಂಚಾರಿ ಪೊಲೀಸರು ಶಾಕ್ ನೀಡಿದ್ದು, ಇನ್ನು ಮುಂದೆ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವ ಮಾಲೀಕರು ಮೂರು ಹೆಚ್ಚು ದಂಡ ಪಾವತಿ  ಮಾಡಬೇಕಿದೆ.

ಬೆಂಗಳೂರು ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ದಂಡ ಶುಲ್ಕ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಿದ್ದು, ಈ ಮೊದಲು ಇದ್ದ ದಂಡಕ್ಕಿಂತ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡಿದ್ದಾರೆ. ನೋ ಪಾರ್ಕಿಂಗ್ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ಖಾಸಗಿ ಟೋಯಿಂಗ್ ವಾಹನಗಳ ಬಾಡಿಗೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ವರೆಗೂ 2008ರಲ್ಲಿ ನಿಗದಿಪಡಿಸಿದ್ದ ದಂಡ ಶುಲ್ಕವನ್ನೇ ವಿಧಿಸಲಾಗುತ್ತಿತ್ತಾದರೂ, ಟೋಯಿಂಗ್ ವಾಹನಗಳ ಬಾಡಿಗೆ ಹೆಚ್ಚಳವಾಗಿರುವುದರಿಂದ ದಂಡ ಹೆಚ್ಚಳ ಅನಿವಾರ್ಯ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸಂಚಾರಿ ಪೊಲೀಸ್ ಇಲಾಖೆ ಬಳಕೆ ಮಾಡುತ್ತಿರುವ ಟೋಯಿಂಗ್ ವಾಹನಗಳ ಬಾಡಿಗೆಯನ್ನು ವಾಹನಗಳ ದಂಡದಿಂದಲೇ ಪಾವತಿ ಮಾಡಲಾಗುತ್ತಿದ್ದು, ಅವುಗಳ ಸಿಬ್ಬಂದಿ ವೇತನವನ್ನು ಕೂಡ  ಪೊಲೀಸ್ ಇಲಾಖೆ ಪಾವತಿಸುತ್ತಿತ್ತು. ಈಗ ಖಾಸಗಿ ಟೋಯಿಂಗ್ ವಾಹನಗಳ ಬಾಡಿಗೆ ಹೆಚ್ಚಾಗಿದ್ದು, ಆದ್ದರಿಂದ ಅನಿವಾರ್ಯವಾಗಿ ದಂಡದ ಮೊತ್ತವನ್ನು ಹೆಚ್ಚಿಸಿದ್ದೇವೆ ಎಂದು ಹೆಚ್ಚುವರಿ  ಪೊಲೀಸ್(ಸಂಚಾರ) ಆಯುಕ್ತ ಆರ್. ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com