ಕುಡಿಯಲು ಮಾತ್ರ ಕಾವೇರಿ ಬಳಕೆ; ಪರಿಷತ್ ನಲ್ಲಿ ನಿರ್ಣಯ ಅಂಗೀಕಾರ

ಕಾವೇರಿಕೊಳ್ಳದ ಪಟ್ಟಣಗಳ ಮೂಲಭೂತ ಕುಡಿಯುವ ನೀರಿಗಾಗಿ ಮಾತ್ರ ಹಾಲಿ ಇರುವ ಜಲಾಶಯಗಳ ನೀರನ್ನು ಬಳಸಿಕೊಳ್ಳುವ ನಿರ್ಣಯವನ್ನು ವಿಧಾನ ಪರಿಷತ್ ಕಲಾಪದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ವಿಧಾನ ಪರಿಷತ್ ಕಲಾಪ (ಸಂಗ್ರಹ ಚಿತ್ರ)
ವಿಧಾನ ಪರಿಷತ್ ಕಲಾಪ (ಸಂಗ್ರಹ ಚಿತ್ರ)

ಬೆಂಗಳೂರು: ಕಾವೇರಿಕೊಳ್ಳದ ಪಟ್ಟಣಗಳ ಮೂಲಭೂತ ಕುಡಿಯುವ ನೀರಿಗಾಗಿ ಮಾತ್ರ ಹಾಲಿ ಇರುವ ಜಲಾಶಯಗಳ ನೀರನ್ನು ಬಳಸಿಕೊಳ್ಳುವ ನಿರ್ಣಯವನ್ನು ವಿಧಾನ ಪರಿಷತ್ ಕಲಾಪದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್ ರವಿ ಅವರು ಮಂಡಿಸಿದ ಪ್ರಸ್ತಾವನೆಗೆ ಆಡಳಿತಾ ರೂಢ ಕಾಂಗ್ರೆಸ್ ಸೇರಿದಂತೆ, ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು  ಅನುಮೋದನೆ ನೀಡಿದರು.

ಕಾವೇರಿ ನದಿ ನೀರು ಉಳಿಸಿಕೊಳ್ಳುವ ನಿಮಿತ್ತ ಇಂದು ನಡೆದ ವಿಶೇಷ ಕಲಾಪದಲ್ಲಿ ಕಾವೇರಿ ನದಿ ನೀರಿನ ಪ್ರಸ್ತುತ ಸನ್ನಿವೇಶಗಳ ಕುರಿತು ಚರ್ಚಿಸಲಾಯಿತು. ಈ ವೇಳೆ 2016-17 ಸಾಲನ್ನು  ಜಲಸಂಕಷ್ಟ ವರ್ಷ ಎಂದು ಪರಿಗಣಿಸಿರುವ ಸದನ ಹಾಲಿ ಇರುವ ನೀರನ್ನು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು ಎಂಬ ನಿರ್ಣಯ ಕೈಗೊಂಡಿದೆ ಅಲ್ಲದೇ ವಿಧಾನ  ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಪರಿಷತ್ ಕಲಾಪದ ಪ್ರಮುಖ ಹೈಲೈಟ್ಸ್

ಪ್ರಸಕ್ತ 2016-17ನೇ ವರ್ಷವನ್ನು ಜಲಸಂಕಷ್ಟ ವರ್ಷ ಎಂದು ಪರಿಗಣಿಸಲಾಗಿದ್ದು, ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿರುವ ಸುಮಾರು 27.5 ಟಿಎಂಸಿ ನೀರನ್ನು ಕೇವಲ ಕುಡಿಯುವ  ನೀರಿನ ಸೌಲಭ್ಯಕ್ಕಾಗಿ ಬಳಸಿಕೊಳ್ಳಬೇಕು. ಕೆಆರ್ ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿನ ನೀರನ್ನು ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಪಟ್ಟಣಗಳ ಕುಡಿಯುವ  ನೀರಿನ ಯೋಜನೆಗಾಗಿ ಬಳಸಿಕೊಳ್ಳಬೇಕು. ಬೇರೆ ಯಾವುದೇ ಕಾರಣಕ್ಕೂ ಈ ನೀರನ್ನು ಒದಗಿಸಲು ಸಾಧ್ಯವಿಲ್ಲ ಎಂದು ಕಲಾಪದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯಕ್ಕೆ ಸದನ  ಸರ್ವಾನುಮತದಿಂದ ಅಂಗೀಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com