ಮಂಗಳೂರು: ಮಹಿಳೆ ಜೊತೆ 'ಚಿಲ್ಲರೆ' ಜಗಳ, ಚಲಿಸುತ್ತಿದ್ದ ಬಸ್ ನಿಂದ ನದಿಗೆ ಹಾರಿ ಕಂಡಕ್ಟರ್ ಆತ್ಮಹತ್ಯೆ

ಮಹಿಳಾ ಪ್ರಯಾಣಿಕರು ಮಾಡಿದ ಆರೋಪದಿಂದ ನೊಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರವ ಘಟನೆ ಕುಕ್ಕೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಮಹಿಳಾ ಪ್ರಯಾಣಿಕರು  ಮಾಡಿದ ಆರೋಪದಿಂದ ನೊಂದ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ದೇವದಾಸ್ ಶೆಟ್ಟಿ ಆತ್ಮಹತ್ಯೆಗೆ ಶರಣಾದ ನಿರ್ವಾಹಕ, ಕೆಎಸ್​ಆರ್​ಟಿಸಿ ಮಂಗಳೂರು ಡಿಪೋ 1ರ ಬಸ್‌'ನಲ್ಲಿ ದೇವದಾಸ್ ಕಂಡಕ್ಟರ್ ಆಗಿದ್ದರು.

ಚಿಲ್ಲರೆ ವಿಚಾರಕ್ಕೆ ಮಹಿಳಾ ಪ್ರಯಾಣಿಕರೊಬ್ಬರು, ನಿರ್ವಾಹಕ ದೇವದಾಸ್ ಜೊತೆ ಜಗಳ ಮಾಡಿದ್ದಾರೆ.  ತಾನು 500 ರೂಪಾಯಿ ಕೊಟ್ಟಿರುವುದಾಗಿ ಅವರು ವಾದಿಸಿದ್ದಾನೆ. ಇದಕ್ಕೆ ನಿರ್ವಾಹಕ ದೇವಸಾದ್ ಇಲ್ಲ ನೀವು ಕೊಟ್ಟಿರುವುದು 100 ರೂ. ಎಂದು ಹೇಳಿದ್ದಾರೆ. ಆದರೆ ಪ್ರಯಾಣಿಕ ನೀನು 500 ರೂ. ಪಡೆದು ಸುಳ್ಳು ಹೇಳುತ್ತಿದ್ದೀಯ ಎಂದು ಆರೋಪಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಅತಿರೇಕಕ್ಕೇರಿದೆ. ಇದಾದ ಬಳಿಕ ಕಡಬ ಠಾಣೆ ಪೊಲೀಸರು ಪ್ರಯಾಣಿಕ- ಕಂಡಕ್ಟರ್ ಜತೆ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ ಪ್ರಯಾಣಿಕರ ಆರೋಪದಿಂದ ನೊಂದ ನಿರ್ವಾಹಕ ಬಸ್ ಸುಬ್ರಹ್ಮಣ್ಯ ಬಳಿ ಬರುತ್ತಿದ್ದಂತೆ ಕುಮಾರಧಾರ ನದಿಗೆ ಹಾರಿದ್ದಾರೆ.

ಲಾಗ್ ಶೀಟ್ ನಲ್ಲೇ ಡೆತ್ ನೋಟ್ ಬರೆದಿದ್ದ ನಿರ್ವಾಹಕ: ಟಿಕೆಟ್ ಎಂಟ್ರಿಯ ಲಾಗ್ ಶೀಟ್ ನಲ್ಲೇ ದೇವದಾಸ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು, ನನ್ನ ಎಲ್ಲಾ ಸಹೋದ್ಯೋಗಿಗಳಿಗೂ ಗುಡ್ ಬೈ ಎಂದು ಡೆತೆ ನೋಟ್ ನಲ್ಲಿ ಬರೆದಿದ್ದಾರೆ.

ದೇವದಾಸ್ ಶವಕ್ಕಾಗಿ ಕುಮಾರಧಾರಾ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನದಿಯಲ್ಲಿ ಸ್ನಾನ ಮಾಡುತ್ತಿದ್ದ ಭಕ್ತರು ದೇವದಾಸ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ, ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com