ವಿಹೆಚ್‍ಪಿ ಪ್ರತಿಭಟನೆ: ಪಾಕ್ ಗಾಯಕ ಅಮಾನತ್ ಅಲಿ ಖಾನ್ ಬೆಂಗಳೂರು ಕಾರ್ಯಕ್ರಮ ರದ್ದು

ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಫೋರಂ ಮಾಲ್ ನಲ್ಲಿ ಸೆಪ್ಟೆಂಬರ್ 30ರಂದು ನಡೆಯಬೇಕಿದ್ದ ಪಾಕಿಸ್ತಾನ ಗಾಯಕ ಶಫ್ಖತ್ ಅಮಾನತ್ ಅಲಿ ಖಾನ್...
ಶಫ್ಖತ್ ಅಮಾನತ್ ಅಲಿ ಖಾನ್
ಶಫ್ಖತ್ ಅಮಾನತ್ ಅಲಿ ಖಾನ್

ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಫೋರಂ ಮಾಲ್ ನಲ್ಲಿ ಸೆಪ್ಟೆಂಬರ್ 30ರಂದು ನಡೆಯಬೇಕಿದ್ದ ಪಾಕಿಸ್ತಾನ ಗಾಯಕ ಶಫ್ಖತ್ ಅಮಾನತ್ ಅಲಿ ಖಾನ್ ಸಂಗೀತ ಕಾರ್ಯಕ್ರಮ ರದ್ದಾಗಿದೆ.

ಸಂಗೀತ ಕಾರ್ಯಕ್ರಮಕ್ಕೆ ನೀಡಲಾಗಿರುವ ಅನುಮತಿಯನ್ನು ಹಿಂಪಡೆಯುವಂತೆ ವಿಶ್ವ ಹಿಂದೂ ಪರಿಷತ್(ವಿಹೆಚ್ಪಿ) ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದರು.

ಈ ಸಂಬಂಧ ಮಾತನಾಡಿರುವ ವಿಹೆಚ್ಪಿ ಪ್ರಾದೇಶಿಕ ಸಂಚಾಲಕ ಸೂರ್ಯನಾರಾಯಣ್ ಅವರು ಭಾರತೀಯ ಯೋಧರ ಮೇಲಿನ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಗಾಯಕರಿಗೆ ಹಾಡಲು ಅನುಮತಿ ನೀಡಿದ್ದನ್ನು ವಿರೋಧಿಸಿದ್ದರು. ಅಲ್ಲದೆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಅನುಮತಿ ನೀಡಿದ್ದೇ ಆದರೆ ಆ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ನೆಲೆಸಿರುವ ಪಾಕಿಸ್ತಾನಿ ಕಲಾವಿದರು ದೇಶ ತೊರೆಯುವಂತೆ ಮಹಾರಾಷ್ಟ್ರ ನವನಿರ್ಮಾಣ್ ಸೇನೆ(ಎಂಎನ್ಎಸ್) ಆದೇಶಿಸಿತ್ತು. ಅದರಂತೆ ನಾವು ಪಾಕಿಸ್ತಾನಿ ಗಾಯಕನಿಗೆ ಅನುಮತಿಯನ್ನು ಕಳೆದ ವಾರದ ಹಿಂದೆಯೇ ರದ್ದು ಪಡಿಸಿದ್ದೇವೆ ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ.

2014ರ ನವೆಂಬರ್ ನಲ್ಲಿ ಶಫ್ಖತ್ ಅಮಾನತ್ ಅಲಿ ಸಂಗೀತ ಕಾರ್ಯಕ್ರಮ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com